- ನ್ಯಾಮತಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇಲ್ಲಿಯವರೆಗೆ 56 ಲಕ್ಷ ಮಂದಿ ಸದಸ್ಯತ್ವ ಪಡೆದುಕೊಂಡಿದ್ದರೆ, ಅವಳಿ ತಾಲೂಕಿನಲ್ಲಿ 18 ಸಾವಿರ ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅ.30 ರವರೆಗೆ ಸಮಯ ಇದೆ. ಅವಳಿ ತಾಲೂಕಿಗೆ 60 ಸಾವಿರ ಸದಸ್ಯತ್ವ ಟಾರ್ಗೆಟ್ ನೀಡಿದ್ದಾರೆ. ನಾವು ಅಲ್ಲಿಯವರೆಗೂ ವಿಶ್ರಮಿಸದೇ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ, ಬಿಜೆಪಿ ಸದಸ್ಯತ್ವ ಮಾಡಿಸಿ, ರಾಜ್ಯ ಮುಖಂಡರು ನೀಡಿರುವ ಗುರಿ ತಲುಪಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆ:
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ಅರಕೆರೆ ನಾಗರಾಜ್, ಶಿವಾನಂದ್, ನ್ಯಾಮತಿ ನಗರ ಘಟಕ ಅಧ್ಯಕ್ಷ ವಿರೂಪಾಕ್ಷಪ್ಪ, ನ್ಯಾಮತಿ ತಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ನ್ಯಾಮತಿ ತಾಪಂ ಮಾಜಿ ಸದಸ್ಯ ರವಿಕುಮಾರ್ ಹಾಗೂ ಇನ್ನಿತರ ಮುಖಂಡರು ಇದ್ದರು.
ಕೋಟ್ ಮುಡಾ ನಿವೇಶನ ಹಗರಣ ಇಷ್ಟೊಂದು ದೊಡ್ಡದಾಗಿ ನಡೆಯಲು ಸಚಿವ ಬೈರತಿ ಸುರೇಶ್ ಅವರೇ ಕಾರಣ. ಅವರನ್ನು ವಿಚಾರಣೆಗೆ ಒಳಪಡಿಸಿ, ಮುಡಾ ಹಗರಣ ಬೆಳಕಿಗೆ ಬಂದ ನಂತರ ಏಕಾಏಕಿ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಬಂದ ಬೈರತಿ ಸುರೇಶ್ ಮುಡಾ ಸಂಬಂಧ ಎಲ್ಲ ಫೈಲ್‍ಗಳನ್ನು ತಂದಿದ್ದಾರೆ. ಆದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಿ ಎಂದ ಅವರು, ಕಾಂಗ್ರೆಸ್‍ನವರು ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ- - - -20ಎಚ್.ಎಲ್.ಐ1: