ವಿಶ್ವಕರ್ಮ ಯೋಜನೆಯಡಿ 18 ರೀತಿಯ ಸ್ವದ್ಯೋಗಕ್ಕೆ ಅವಕಾಶ: ಪಿಂಜರ್

KannadaprabhaNewsNetwork |  
Published : Feb 03, 2024, 01:50 AM IST
ವಿಕಸಿತ ಭಾರತ | Kannada Prabha

ಸಾರಾಂಶ

ಭಾರತ ಸರ್ಕಾರದ ಯೋಜನೆಯಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಂಬಲಪಾಡಿ ಬಸ್ ನಿಲ್ದಾಣ ಬಳಿ ಗುರುವಾರ ನಡೆಯಿತು. ವಿಶ್ವಕರ್ಮ ಯೋಜನೆಯಡಿಯಲ್ಲಿ 18 ರೀತಿಯ ಸ್ವ ಉದ್ಯೋಗವನ್ನು ಆರಂಭಿಸಲು ಶೇ.5ರ ಬಡ್ಡಿದರದಲ್ಲಿ ಧನಸಹಾಯ ನೀಡಲಾಗುವ ಬಗ್ಗೆ ತಿಳಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಭಾರತ ಸರ್ಕಾರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಂಬಲಪಾಡಿ, ಅಂಬಲಪಾಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಭಾರತ ಸರ್ಕಾರದ ಯೋಜನೆಯಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಂಬಲಪಾಡಿ ಬಸ್ ನಿಲ್ದಾಣ ಬಳಿ ಗುರುವಾರ ನಡೆಯಿತು.ಲೀಡ್ ಬ್ಯಾಂಕ್ ಪ್ರಬಂಧಕ ಪಿಂಜರ್ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಕರ್ಮ ಯೋಜನೆಯಡಿಯಲ್ಲಿ 18 ರೀತಿಯ ಸ್ವ ಉದ್ಯೋಗವನ್ನು ಆರಂಭಿಸಲು ಶೇ.5ರ ಬಡ್ಡಿದರದಲ್ಲಿ ಧನಸಹಾಯ ನೀಡುತ್ತಿದ್ದು, ಗ್ರಾಮೀಣ ಹಾಗೂ ನಗರದ ಯುವ ಜನಾಂಗ ಇದರ ಸದುಪಯೋಗ ಪಡೆದುಕೊಳ್ಳವುನಂತೆ ಕರೆ ನೀಡಿದರು.ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯ ಹಲವಾರು ಜನಪರ ಯೋಜನೆಗಳನ್ನು ನಮ್ಮ ದೇಶದ ಎಲ್ಲ ನಾಗರಿಕರಿಗೆ ಸುಲಭವಾಗಿ ಸಿಗುವ ಉದ್ದೇಶದಿಂದ ಈ ಯೋಜನೆಯನ್ನು ಕಟ್ಟ ಕಡೆಯ ವ್ಯಕ್ತಿಯ ವರೆಗೆ ತಲುಪಿಸುವುದಕ್ಕಾಗಿ ಸಂಚಾರಿ ವಾಹನದಲ್ಲಿ ಡಿಜಿಟಲ್ ಪರದೆಯ ಮುಖಾಂತರ ಮಾಹಿತಿ ಮತ್ತು ವಿವರಣೆ ನೀಡುತ್ತಾ ಬಂದಿದೆ. ಇದರ ಪ್ರಯೋಜನವನ್ನು ಎಲ್ಲ ನಾಗರಿಕರು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.ಮುಖ್ಯ ಅತಿಥಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ಗೌರವ ಸಿಂಗ್ ಮಾತನಾಡಿ, ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುವ ಸುಲಭ ಮಾರ್ಗದ ವಿವರ ನೀಡಿ, ಸ್ಥಳದಲ್ಲಿಯೇ ಗ್ರಾಹಕರಿಗೆ ಚೆಕ್ ವಿತರಣೆ ಮಾಡಲಾಯಿತು.

ಉಡುಪಿ ನಗರಸಭಾ ಅಧಿಕಾರಿ ಗುರುಪ್ರಸಾದ್, ಅಂಬಲಪಾಡಿ ಪೋಸ್ಟ್ ಮ್ಯಾನ್ ಮಂಜುನಾಥ್, ಅಂಬಲಪಾಡಿ ಪಂಚಾಯಿತಿ ಅಧ್ಯಕ್ಷರಾದ ಸುಜಾತಾ ಯೋಗೇಶ್ ಶೆಟ್ಟಿ, ಅಂಬಲಪಾಡಿ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಸುಧಾಕರ್, ಯುವಕ ಮಂಡಲದ ಅಧ್ಯಕ್ಷ ಹರೀಶ್ ಆಚಾರ್ಯ, ಅಂಬಲಪಾಡಿ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ, ಆರ್ ಸೈಟ್‌ನ ರವಿ, ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್‌ ಅಧಿಕಾರಿಗಳು, ಪ್ರಯೋಜನ ಪಡೆದ ನಾಗರಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!