ಕನ್ನಡಪ್ರಭ ವಾರ್ತೆ, ತುಮಕೂರು
ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧೆಡೆಗಳಿಂದ 800 ಶೂಟರ್‌ಗಳು ಭಾಗವಹಿಸಿದ್ದು, ವಿವೇಕಾನಂದ ಶೂಟಿಂಗ್ ಸಂಸ್ಥೆಯಿಂದ 30 ಜನ ಶೂಟರ್ಸ್ ಭಾಗವಹಿಸಿದ್ದರು. ವನಿತಾ 15 ವರ್ಷದ ಬಾಲಕಿ ದಾಖಲೆಯ ಮೊತ್ತ 336 ಅಂಕಗಳನ್ನು ಗಳಿಸಿ ಇಡೀ ರಾಜ್ಯಕ್ಕೆ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಎಲ್ಲಾ ವಿಭಾಗದಲ್ಲೂ ಮೊದಲ ಸ್ಥಾನ ಗಳಿಸಿದ್ದಾರೆ. ಪ್ಯಾರಾಶೂಟರ್ ಹರ್ಷ ಎರಡು ಚಿನ್ನದ ಪದಕವನ್ನು ಗಳಿಸಿದ್ದಾರೆ.
ಸಮರ್ ಶಾನ್ಬೋಗ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗಳಿಸಿದ್ದಾರೆ, ವಿಶ್ರುತ, ಅಮೃತ ಹಾಗೂ ಪ್ರಿಯಾ ಗುಂಪು ವಿಭಾಗಗಳಲ್ಲಿ ಪದಕಗಳನ್ನು ಗಳಿಸಿರುತ್ತಾರೆ. 22 ಶೂಟರ್ ಗಳು ದಕ್ಷಿಣ ವಲಯದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ತುಮಕೂರಿಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಶೂಟಿಂಗ್‌ನಲ್ಲಿ ಪದಕ ವಿಜೇತರನ್ನು ಅಭಿನಂದಿಸಿದರು.