ಕುಣಿಗಲ್ ಕೈಗಾರಿಕಾ ಪ್ರದೇಶದ ಅಂಚೆಪಾಳ್ಯದ ಬಳಿಯ ವಿನ್ನರ್ ಬರ್ಗರ್ ಇಟ್ಟಿಗೆ ಕಾರ್ಖಾನೆ ಎಡೆಯೂರು ದಾಸೋಹ ಸಮಿತಿಯಲ್ಲಿ ಕಾರ್ಯನಿರ್ವಹಿಸುವ 19 ಬಡ ಕಾರ್ಮಿಕರಿಗೆ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರ ಮಾಡಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಕೈಗಾರಿಕಾ ಪ್ರದೇಶದ ಅಂಚೆಪಾಳ್ಯದ ಬಳಿಯ ವಿನ್ನರ್ ಬರ್ಗರ್ ಇಟ್ಟಿಗೆ ಕಾರ್ಖಾನೆ ಎಡೆಯೂರು ದಾಸೋಹ ಸಮಿತಿಯಲ್ಲಿ ಕಾರ್ಯನಿರ್ವಹಿಸುವ 19 ಬಡ ಕಾರ್ಮಿಕರಿಗೆ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರ ಮಾಡಿದೆ. ಕಂಪನಿ ವತಿಯಿಂದ ಈ ಬಡವರ ಮನೆಗೆ ಬೇಕಾದ ಗೋಡೆಗಳನ್ನು ತನ್ನ ಇಟ್ಟಿಗೆಗಳಿಂದ ನಿರ್ಮಾಣ ಮಾಡಿದ್ದು, ಕಿಟಕಿ, ಬಾಗಿಲು, ಸೋಲಾರ್ ವಾಟರ್ ಹೀಟರ್, ಶೌಚಾಲಯ ಹಾಗೂ ಇತರೇ ಮೂಲ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಮನೆಗಳು ಇದಾಗಿವೆ.
ಈ ಕುರಿತು ಮಾತನಾಡಿದ ವಿನ್ನರ್ ಬರ್ಗರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮುನ್ನಂಡ ಅಪ್ಪಯ್ಯ ನಮ್ಮ ಕಂಪನಿಯಲ್ಲಿ ಉತ್ಪಾದನೆ ಮಾಡುವ ಇಟ್ಟಿಗೆಗಳು ಪರಿಸರಸ್ನೇಹಿ ಇಟ್ಟಿಗೆಗಳಾಗಿವೆ, ಕೆರೆಯ ಮಣ್ಣನ್ನು ತೆಗೆದು ಅದರಲ್ಲಿ ಉತ್ತಮ ಗುಣಮಟ್ಟದ ಇಟ್ಟಿಗೆಗಳನ್ನು ತಯಾರಿಸಿದ್ದೇವೆ. ಅದಕ್ಕೆ ಮಿಶ್ರವಾದ ಹಲವಾರು ವಸ್ತುಗಳನ್ನು ಕೂಡ ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ವಸ್ತುಗಳೆ ಆಗಿವೆ. ಇಂತಹ ಇಟ್ಟಿಗೆಗಳನ್ನು ಉಪಯೋಗಿಸಿ ಮನೆ ನಿರ್ಮಾಣ ಮಾಡುವುದರಿಂದ ಹೆಚ್ಚಿನ ಉಷ್ಣತೆಯನ್ನು ತಡೆಯುವುದು ಹಾಗೂ ಹವಾ ನಿಯಂತ್ರಿತವನ್ನು ಸ್ವಯಂ ಚಾಲಿತವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಕಡಿಮೆ ಬಂಡವಾಳದಲ್ಲಿ ನಡೆದ ಈ ಕಾಮಗಾರಿಗೆ ಒಟ್ಟು 1.22 ಕೋಟಿ ಖರ್ಚಾಗಿದೆ. ಪ್ರತಿ ಮನೆಗೆ ಕನಿಷ್ಠ 7 ಲಕ್ಷದಿಂದ 8 ಲಕ್ಷದ ಒಳಗೆ ಖರ್ಚು ಬಂದಿದ್ದು, ಭಕ್ತರ ಸೇವೆ ಮಾಡುವ ಕಾರ್ಮಿಕರ ಸೇವೆ ಮಾಡುವ ಮೂಲಕ ನಾವು ಸಹ ಭಕ್ತಿ ಸಮರ್ಪಣೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಫಲಾನುಭವಿ ನಾಗರಾಜು, ಮನೆ ನಿರ್ಮಾಣ ಮಾಡುವುದು ನಮಗೆ ಕನಸಿನ ಮಾತಾಗಿತ್ತು. ಆದರೆ ವಿನ್ನರ್ ಬರ್ಗರ್ ಕಂಪನಿ ನಮಗೆ ಉತ್ತಮವಾದ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಮೂಲಕ ನಮ್ಮ ಬದುಕಿಗೆ ಆಶ್ರಯ ನೀಡಿದೆ ಎಂದರು. ಈ ಸಂದರ್ಭದಲ್ಲಿ ಕಂಪನಿ ಸಂಪನ್ಮೂಲ ಅಧಿಕಾರಿ ಹೇಮಂತ್, ಮಾರುಕಟ್ಟೆ ವಿಭಾಗದ ನಬಿನಿತಾ ದಾಸ್ ಸೇರಿದಂತೆ ಹಲವಾರು ಕಾರ್ಮಿಕರು, ಸಿಬ್ಬಂದಿ ಮತ್ತು ಫಲಾನುಭವಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.