ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸರ್ಕಾರ ಶಾಸಕರಿಗೆ ನೀಡುವ 25ಕೋಟಿ ರು. ಅನುದಾನದಲ್ಲಿ ಕ್ಷೇತ್ರಾದ್ಯಂತ ಅಪೂರ್ಣಗೊಂಡಿರುವ ಸರ್ವ ಜನಾಂಗಗಳ ಸಮುದಾಯ ಭವನ ನಿರ್ಮಾಣಕ್ಕಾಗಿ 2.5 ಕೋಟಿಯನ್ನು ವಿನಿಯೋಗಿಸಲಾಗುವುದು ,ಇತ್ತಿಚಿಗೆ ಅಧಿವೇಶನದ ಬಳಿಕ ಬೆಳಗಾವಿಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಶಾಸಕರಿಗೆ 25ಕೋಟಿ ಅನುದಾನಕ್ಕೆ ಮನವಿ ಮಾಡಿದ್ದೆ, ಅದೇ ರೀತಿಯಲ್ಲಿ ಅಪೂರ್ಣಗೊಂಡಿರುವ ಎಲ್ಲಾ ವರ್ಗಗಳ ಭವನ ನಿರ್ಮಾಣಕ್ಕೂ ಆದ್ಯತೆ ನೀಡಿ ಎಂದು ಮನವಿ ಸಲ್ಲಿಸಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಎ. ಆರ್ ಕೖಷ್ಣಮೂರ್ತಿ ಹೇಳಿದರು. ತಾಲೂಕಿನ ಹಳೆ ಹಂಪಾಪುರ ಗ್ರಾಮದಲ್ಲಿ ಸುಮಾರು 35 ಲಕ್ಷ ರು.ಗಳ ಅಂದಾಜು ವೆಚ್ಚದಲ್ಲಿ ಗ್ರಾಮಸ್ಥರು ವಂತಿಕೆ ಸಂಗ್ರಹಿಸಿ ನಿರ್ಮಿಸಲು ಹೊರಟಿರುವ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸರ್ಕಾರ ನುಡಿದಂತೆ ನಡೆದಿದೆ, ವಿದ್ಯಾರ್ಥಿಗಳು ಸರ್ಕಾರ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು, ಗ್ರಾಮದ ಮುಖಂಡರು ವಂತಿಕೆ ಸಂಗ್ರಹಿಸಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದುಶ್ಲಾಘನೀಯ ಕಾರ್ಯ ಎಂದರು. ಸರ್ಕಾರ ನೀಡುವ ಅನುದಾನದಲ್ಲಿ ಕೊಳ್ಳೇಗಾಲ ಅಂಬೇಡ್ಕರ್ ಭವನ ಸೇರಿದಂತೆ ಹಂಪಾಪುರ ಗ್ರಾಮಕ್ಕೂ ನನ್ನ ಕೈಲಾದ ನೆರವು ನೀಡುವುದಾಗಿ, ಇದೊಂದು ಅಥ೯ಪೂರ್ಣ ಕಾರ್ಯಕ್ರಮ ಎಂದರು.
ಈ ವೇಳೆ ಮಾಜಿ ಶಾಸಕ ಎಸ್.ಜಯಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಬಸವಣ್ಣ, ಹರಳೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಮೀನಾ ಲೋಕೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಚಾಮುಲ್ ನಿರ್ದೇಶಕ ಮಧುವನಹಳ್ಳಿನಂಜುಂಡ ಸ್ವಾಮಿ, ಉಪ್ಪಾರ ನಿಗಮ ಮಾಜಿ ರಾಜ್ಯಾಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್,ಮುಳ್ಳೂರು ಶಿವಮಲ್ಲು, ಜಿ ಎನ್ ಲೋಕೇಶ್, ಯಜಮಾನರುಗಳಾದ ನಟರಾಜು ನಟೇಶ್ ಮತ್ತಿತರರಿದ್ದರು.