ಯಳ್ಳಂಬಳಸೆ ಗ್ರಾಮಕ್ಕೆ 3 ಕಿ.ಮೀ ರಸ್ತೆ ಕಾಮಗಾರಿಗೆ 2.60 ಕೋಟಿ ರು. ಮಂಜೂರು

KannadaprabhaNewsNetwork |  
Published : Oct 30, 2024, 01:40 AM IST
29ಕೆಕೆಡಿಯು3. | Kannada Prabha

ಸಾರಾಂಶ

2.60 crores for 3 km road work to Yallambalase village. granted

-26 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ವಿವೇಕ ಶಾಲಾ ಕೊಠಡಿ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್

------

ಕನ್ನಡಪ್ರಭ ವಾರ್ತೆ, ಕಡೂರು

ಯಳ್ಳಂಬಳಸೆ ಗ್ರಾಮಕ್ಕೆ ಮುಖ್ಯರಸ್ತೆಯಿಂದ ಬರುವ 3 ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ 2.60 ಕೋಟಿ ರು. ಮಂಜೂರಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಅವರು ತಮ್ಮ ಕಡೂರು ವಿಧಾನಸಭಾ ಕ್ಷೇತ್ರದ ಯಳ್ಳಂಬಳಸೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26 ಲಕ್ಷ ರು. ವೆಚ್ಚದಲ್ಲಿ ನಿರ್ಮಿತವಾಗಿರುವ ಎರಡು ವಿವೇಕ ಕೊಠಡಿಗಳನ್ನು ಉದ್ಘಾಟಿಸಿ ಹಾಗೂ 8ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕೆಲ ಶಾಲೆಗಳು ಮುಚ್ಚಿದ ಸಂದರ್ಭದಲ್ಲಿ ಆ ಶಾಲಾ ಜಾಗವನ್ನು ಬೇರೆ ಇಲಾಖೆಗಳ ಉದ್ದೇಶಕ್ಕೆ ಬಳಸುವ ಪರಿಪಾಠ ಮುಂದುವರೆಯಬಾರದು. ಅದನ್ನು ಇಲಾಖೆಗೇ ಉಳಿಸುವ ಕಾರ್ಯವಾಗಬೇಕು. ಯಳ್ಳಂಬಳಸೆಯ ಈ ಶಾಲೆಯಲ್ಲಿ 120 ವಿದ್ಯಾರ್ಥಿ ಗಳಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಉತ್ತಮ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿಯೇ ದೊರೆಯುವಂತಾಗಲು ಅಗತ್ಯ ಸೌಲಭ್ಯ ದೊರಕಿಸಿಕೊಡಲು ಶ್ರಮಿಸುತ್ತೇನೆ ಎಂದರು. ಯಳ್ಳಂಬಳಸೆಯ ಕಸ್ತೂರಬಾ ಬಾಲಕಿಯರ ಶಾಲೆಗೆ ಹೊಸ ಕಟ್ಟಡದ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಿದ್ದೇನೆ. ಶೀಘ್ರದಲ್ಲೇ ಕಬರಸ್ತಾನದ ಅಭಿವೃದ್ದಿ ಕಡೆಗೂ ಗಮನ ಹರಿಸುತ್ತೇನೆ. ಗ್ರಾಮಕ್ಕೆ ಮುಖ್ಯರಸ್ತೆಯಿಂದ ಬರುವ 3 ಕಿ.ಮೀ ಉದ್ದದ ರಸ್ತೆ 2.60 ಕೋಟಿ ಮಂಜೂರಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಶಾಸಕರ ದೂರ ದೃಷ್ಟಿಯ ಫಲವಾಗಿ ಯಳ್ಳಂಬಳಸೆ ಗ್ರಾಮದಲ್ಲಿ ಅಭಿವೃದ್ದಿಯ ಕಾರ್ಯಗಳು ನಡೆಯುತ್ತಿವೆ. ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೂ ಆದ್ಯತೆ ನೀಡುತಿದ್ದಾರೆ ಎಂದರು.

ಬಿಇಒ ಸಿದ್ದರಾಜುನಾಯ್ಕ, ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಲತಾ ಸೋಮೇಶ್, ಸದಸ್ಯರಾದ ಸಯ್ಯದ್ ಸಲೀಂ, ಈಶ್ವರಪ್ಪ, ಬಿ.ಆರ್. ಸಿ. ಪ್ರೇಮ್‍ಕುಮಾರ್, ಶಾಲೆಯ ಮುಖ್ಯೋಪಾಧ್ಯಾಯ ಕಲ್ಲೇಶಪ್ಪ ಹಾಗೂ ಗ್ರಾಮಸ್ಥರು ಇದ್ದರು.

----

ಫೋಟೊ: 29ಕೆಡಿಯು3

ಯಳ್ಳಂಬಳಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ವಿವೇಕ ಶಾಲಾ ಕೊಠಡಿಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಶ್ರೀನಿವಾಸ್, ಪುಷ್ಪಲತಾ ಸೋಮೇಶ್, ಸಲೀಂ, ಕಲ್ಲೇಶಪ್ಪ ಇದ್ದರು.

PREV

Recommended Stories

ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ
ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!