ಕನ್ನಡಪ್ರಭ ವಾರ್ತೆ ಸವದತ್ತಿ
ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ರಾಜ್ಯಾದ್ಯಂತ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್, ರಂಗ ಮಂದಿರ, ಬಸ್ ನಿಲ್ದಾಣ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಲಾಗಿದ್ದು, ಸವದತ್ತಿ ತಾಲೂಕಿನಲ್ಲಿ ₹೨ ಕೋಟಿಗಳಿಗೂ ಅಧಿಕ ಅನುದಾನ ನೀಡಿ ಅಭಿವೃದ್ಧಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಪಟ್ಟಣದ ಗಿರಿಜನ್ನವರ ಓಣಿಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಎಲ್ಲ ಸಮಾಜದ ಜನರಿಗೆ ಅತ್ಯುತ್ತಮ ಸಂಪರ್ಕದೊಂದಿಗೆ ಅನುಕೂಲತೆ ನೀಡುತ್ತಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸುತ್ತಿರುವ ಸಮುದಾಯಭವನಕ್ಕೆ ಈಗಾಗಲೆ ₹೫ ಲಕ್ಷಗಳ ಅನುದಾನ ನೀಡಲಾಗಿದ್ದು, ಅದರ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ₹೫ ಲಕ್ಷಗಳ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಶ್ರೀ ರಾಮಲಿಂಗೇಶ್ವರ ಅರ್ಬನ್ ಸೌಹಾರ್ದ ಅಧ್ಯಕ್ಷ ಪುಂಡಲೀಕ ಬಾಳೋಜಿ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನವು ಇಂದು ಪ್ರತಿಯೊಂದು ಸಮುದಾಯದ ಜನರಿಗೆ ಆಶ್ರಯ ನೀಡಿ ಹೆಚ್ಚಿನ ಅನುಕೂಲ ಒದಗಿಸುತ್ತ ಬಂದಿದೆ. ಈ ದೇವಸ್ಥಾನದಲ್ಲಿನ ಸಮುದಾಯಭವನಕ್ಕೆ ₹೧೦ ಲಕ್ಷಗಳ ಅನುದಾನವನ್ನು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿಯವರು ನೀಡುತ್ತಿರುವುದು ಸಮಾಜದ ಜನರಿಗೆ ಸಂತಸ ತಂದಿದ್ದು, ಈ ದೇವಸ್ಥಾನದ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.ಮುಖಂಡ ಪಂಚನಗೌಡ ದ್ಯಾಮನಗೌಡರ, ಜಗದೀಶ ಕೌಜಗೇರಿ ಮಾತನಾಡಿ, ಈರಣ್ಣ ಕಡಾಡಿಯವರು ತಮ್ಮ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಜಿಲ್ಲೆಯಾದ್ಯಂತ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದ್ದಾರೆ. ಸವದತ್ತಿಯ ಜಾಗೃತ ತಾಣವಾಗಿರುವ ರಾಮಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಈ ಹಿಂದೆ ಆನಂದ ಮಾಮನಿಯವರು ಸಾಕಷ್ಟು ಸಹಕಾರ ನೀಡಿದ್ದು, ಈ ಸಮುದಾಯಭವನ ನಿರ್ಮಾಣಕ್ಕೆ ಈರಣ್ಣ ಕಡಾಡಿಯವರು ಈಗ ₹೧೦ ಲಕ್ಷಗಳ ಅನುದಾನ ನೀಡಿರುವ ಕಾರ್ಯ ಶ್ಲಾಘನೀಯ ಎಂದರು.ರತ್ನಾ ಆನಂದ ಮಾಮನಿ ಹಾಗೂ ಡಾ.ನಯನಾ ಭಸ್ಮೆ ಮಾತನಾಡಿದರು. ಕುಮಾರಸ್ವಾಮಿ ತಲ್ಲೂರಮಠ, ಈರಣ್ಣ ಚಂದರಗಿ, ಎಚ್.ಎ.ಕದ್ರಾಪೂರ, ಬಸವರಾಜ ಕಪ್ಪಣ್ಣವರ, ಕೇದಾರ ಮೊಕಾಶಿ, ಅಣ್ಣಪ್ಪ ಪವಾರ, ಲಕ್ಷ್ಮಣ ಕಿಟದಾಳ, ಧರ್ಮರಾಜ ಗಿರಿಜಣ್ಣವರ, ಅಂದುಸಿಂಗ್ ರಜಪುತ, ಮಾರುತಿ ಜಾಧವ, ಪರಶುರಾಮ ಬುಜಂಗನವರ, ಶಿದ್ದಪ್ಪ ರಾಹುತ, ಸುಭಾಸ ಪವಾರ, ಮಲ್ಲೇಶ ರಾಜನಾಳ, ವಿಠ್ಠಲ ಹೂಲಿ, ಸುರೇಶ ಬಾಳೋಜಿ, ಕೃಷ್ಣಾಜಿ ಪವಾರ, ತಾನಾಜಿ ಶಿಂಧೆ, ನ್ಯಾಯವಾದಿ ಸಾವಿತ್ರಿ ಶಿಬಾರಗಟ್ಟಿ, ವಿಠ್ಠಲ ಗಿರಿಜನ್ನವರ, ನಾಗಪ್ಪ ಶಿಂಧೆ, ಬಸವರಾಜ ಪುಟ್ಟಿ, ಸುರೇಶ ಕದಮ, ಶ್ರೀನಿವಾಸ ಗದಗ, ಮಲ್ಲು ಬೀಳಗಿ, ವಿಠ್ಠಲ ಜಾಮದಾರ, ಮಂಜುನಾಥ ಡಬಕೆ, ಅಶೋಕ ಶಿಂಧೆ ಇತರರು ಉಪಸ್ಥಿತರಿದ್ದರು. ಶಿವಾನಂದ ತಾರಿಹಾಳ ನಿರೂಪಿಸಿ ವಂದಿಸಿದರು.
ದೇವಸ್ಥಾನದ ಆವರಣದಲ್ಲಿ ಯಾವುದೇ ಜಾತಿ, ಧರ್ಮ, ಪಂಥ ಎನ್ನದೇ ಸಮಾಜದ ಎಲ್ಲ ಧರ್ಮೀಯರು ಸೇರಿ ಪ್ರತಿ ತಿಂಗಳು ನಿರಂತರವಾಗಿ ಮಾಡುತ್ತಿರುವ ಶರಣ ಸಂಗಮದಂತ ಕಾರ್ಯಕ್ರಮಗಳು, ರುದ್ರಾಭಿಷೇಕ, ಶ್ರಾವಣಮಾಸದ ಪೂಜೆಗಳು, ನವರಾತ್ರಿ ಉತ್ಸವಗಳು, ಅಯ್ಯಪ್ಪಸ್ವಾಮಿ ಪೂಜೆಗಳು ಇಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ದೇವಸ್ಥಾನದ ಪರಿಸರವು ಎಲ್ಲರಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಉತ್ತಮ ಭಾತೃತ್ವವನ್ನು ಬೆಳೆಸುತ್ತಿದೆ.-ಪುಂಡಲೀಕ ಬಾಳೋಜಿ,
ಶ್ರೀ ರಾಮಲಿಂಗೇಶ್ವರ ಅರ್ಬನ್ ಸೌಹಾರ್ದ ಅಧ್ಯಕ್ಷರು.