ಇಂದಿನಿಂದ 2ದಿನ 11ನೇ ಮೇ ಸಾಹಿತ್ಯ ಮೇಳ: ಸೂಳಿಬಾವಿ

KannadaprabhaNewsNetwork | Published : May 17, 2025 1:36 AM
Follow Us

ಸಾರಾಂಶ

ಸಿಂಧನೂರು: ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು ಎಂಬ ಮೇನ್ ಥೀಮ್ ಅಡಿಯಲ್ಲಿ ಮೇ 17 ಮತ್ತು 18 ರಂದು ಎರಡು ದಿನಗಳ ಕಾಲ ಸಿಂಧನೂರು ನಗರದ ಸತ್ಯಗಾರ್ಡನ್ನಲ್ಲಿ 11ನೇ ಮೇ ಸಾಹಿತ್ಯ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೇ ಸಾಹಿತ್ಯ ಮೇಳ ಬಳಗದ ಪ್ರಧಾನ ಸಂಚಾಲಕ ಬಸವರಾಜ ಸೂಳಿಬಾವಿ ಹೇಳಿದರು.

ಸಿಂಧನೂರು: ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು ಎಂಬ ಮೇನ್ ಥೀಮ್ ಅಡಿಯಲ್ಲಿ ಮೇ 17 ಮತ್ತು 18 ರಂದು ಎರಡು ದಿನಗಳ ಕಾಲ ಸಿಂಧನೂರು ನಗರದ ಸತ್ಯಗಾರ್ಡನ್ನಲ್ಲಿ 11ನೇ ಮೇ ಸಾಹಿತ್ಯ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೇ ಸಾಹಿತ್ಯ ಮೇಳ ಬಳಗದ ಪ್ರಧಾನ ಸಂಚಾಲಕ ಬಸವರಾಜ ಸೂಳಿಬಾವಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17 ರಂದು ಬೆಳಿಗ್ಗೆ 10.30 ಗಂಟೆಗೆ ಮೇ ಸಾಹಿತ್ಯ ಮೇಳವನ್ನು ಮೆದಿಕಿನಾಳ ಭೂ ಹೋರಾಟದ ಸಂಗಮ್ಮ, ದಲಿತ ಚಳವಳಿಯ ಭೀಮಣ್ಣ ನಗನೂರು, ಕಾರ್ಮಿಕ ಚಳವಳಿಯ ನರಸಿಂಹಪ್ಪ, ಮದ್ಯ ವಿರೋಧಿ ಹೋರಾಟದ ಚಿನ್ನಮ್ಮ ಮುದ್ದನಗುಡ್ಡಿ, ರೈತ ಚಳವಳಿಯ ತಿಮ್ಮನಗೌಡ ಒಗ್ಗೂಡಿ ಉದ್ಘಾಟಿಸುವರು. ಮುಂಬಯಿಯ ರಾಮ್ ಪುನಿಯಾನಿ, ಔರಂಗಬಾದ್‌ನ ಮಾಲತಿ ವರಾಳೆ, ನವದೆಹಲಿಯ ಶಂಸುಲ್ ಇಸ್ಲಾಂ, ಬೆಂಗಳೂರಿನ ಎ.ನಾರಾಯಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎಸ್.ದೇವೇಂದ್ರಗೌಡ ಹಾಗೂ ಅಶೋಕ ನಂಜಲದಿನ್ನಿ ನಿರ್ಣಯಗಳನ್ನು ಮಂಡಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಹೊಸಪೇಟೆಯ ಬಹುತ್ವ ಪ್ರತಿಷ್ಠಾನದಿಂದ ‘ನಾ ಯಾರು’ ಎಂಬ ರಂಗ ಪ್ರಸ್ತುತಿ ನಡೆಯಲಿದೆ ಎಂದರು.ಮಧ್ಯಾಹ್ನ 2.15 ರಿಂದ ಅಸಮಾನತೆ ಮತ್ತು ಸಂಘರ್ಷ; ಹೊರಳು ನೋಟ ಗೋಷ್ಠಿ-1, ಮಧ್ಯಾಹ್ನ 4.30 ಗಂಟೆಯಿಂದ ದಮನದ ಸ್ವರೂಪಗಳು ಗೋಷ್ಠಿ-2, ಸಂಜೆ 6 ಗಂಟೆ ಯಿಂದ ಹೋರಾಟಗಾರ ಜೀವಗಳೊಂದಿಗೆ ಸಂವಾದ ಗೋಷ್ಠಿ-3, ರಾತ್ರಿ 7.30 ರಿಂದ ನನ್ನ ಹಾಡು, ನನ್ನ ಬದುಕು ಗೋಷ್ಠಿ-4, ರಾತ್ರಿ 8 ರಿಂದ ಕವಿಗೋಷ್ಠಿ-1, ಮೇ.18 ರಂದು ಬೆಳಿಗ್ಗೆ 9 ರಿಂದ ಕವಿಗೋಷ್ಠಿ-2, 11 ಗಂಟೆಗೆ ಅಭಿವೃದ್ಧಿಯ ಸತ್ಯ-ಮಿಥ್ಯೆ ಗೋಷ್ಠಿ-5, ಮಧ್ಯಾಹ್ನ 12.30 ಗಂಟೆಗೆ ದಮನ; ಅನುಭವವಾಗಿ ಕುರಿತು ಗೋಷ್ಠಿ-6, ಮಧ್ಯಾಹ್ನ 2 ಗಂಟೆಗೆ ಐಕ್ಯ ಚಳವಳಿ; ಯಾತಕ್ಕಾಗಿ, ಯಾರ ಜೊತೆ ಗೋಷ್ಠಿ-7 ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, 8 ಜನರಿಗೆ ರವಿರಾವ್ ಮೈಸೂರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರೊ.ಅಮರೇಶ ನುಗಡೋಣಿ ಹೊಸಪೇಟೆ ಸಮಾರೋಪ ಮಾತು ಆಡಲಿದ್ದಾರೆ. ಬಾಬು ಬಂಡಾರಿಗಲ್ ಅಧ್ಯಕ್ಷತೆ ವಹಿಸುವರು. ಈ ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ 1200ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್.ದೇವೇಂದ್ರಗೌಡ, ಚಂದ್ರಶೇಖರ ಗೊರಬಾಳ, ಟಿ.ಹುಸೇನಸಾಬ, ಕರೇಗೌಡ ಕುರುಕುಂದಿ, ಅಶೋಕ ನಂಜಲದಿನ್ನಿ, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರ, ರಾಮಯ್ಯ ಜವಳಗೇರ, ಪೂಜಾ ಸಿಂಗೇ, ಬಿ.ಎನ್.ಯರದಿಹಾಳ, ಸೋಮಶೇಖರ, ಹಾಜಿಸಾಬ್ ಆಯನೂರು, ಎಂ.ಕೆ.ಸಾಹೇಬ್, ಕೃಷ್ಣಮೂರ್ತಿ, ಶರಣು ಶೆಟ್ಟರ್, ಪ್ರಕಾಶ ಮತ್ತಿತರರು ಇದ್ದರು.