ಬೆಂಗಳೂರಿನಿಂದ ಹುಬ್ಬಳ್ಳಿ, ಮೈಸೂರು ನಡುವಿನ 2 ರೈಲುಗಳ ಸಂಚಾರ ರದ್ದು

KannadaprabhaNewsNetwork | Updated : Apr 02 2024, 05:41 AM IST

ಸಾರಾಂಶ

ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು - ಹುಬ್ಬಳ್ಳಿ, ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಎರಡು ರೈಲುಗಳನ್ನು ಎರಡು ದಿನ ರದ್ದುಗೊಳಿಸಲಾಗಿದೆ.

 ಬೆಂಗಳೂರು :  ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು - ಹುಬ್ಬಳ್ಳಿ, ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಎರಡು ರೈಲುಗಳನ್ನು ಎರಡು ದಿನ ರದ್ದುಗೊಳಿಸಲಾಗಿದೆ. ಏ.6ರಂದು ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲು (07339) ಹಾಗೂ ಏ.7 ಕೆಎಸ್‌ಆರ್ ಬೆಂಗಳೂರು - ಹುಬ್ಬಳ್ಳಿ ನಡುವೆ ಸಂಚರಿಸುವ ವಿಶೇಷ ರೈಲನ್ನು (07340) ರದ್ದು ಮಾಡಲಾಗಿದೆ.ಏ.7 ಕೆಎಸ್‌ಆರ್ ಬೆಂಗಳೂರು - ಮೈಸೂರು ಸಂಚರಿಸುವ ಮೆಮು ವಿಶೇಷ ರೈಲು (06255) ಹಾಗೂ ಏ.8ರಂದು ಮೈಸೂರು - ಬೆಂಗಳೂರು ( 06560) ರೈಲನ್ನು ರದ್ದು ಪಡಿಸಲಾಗಿದೆ.

ತಾತ್ಕಾಲಿಕ ನಿಲುಗಡೆ:ಜೋಲಾರಪೆಟೆ-ಕೆ.ಎಸ್.ಆರ್‌. ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ಮೆಮು (16519/16520) ರೈಲುಗಳಿಗೆ ಮೇ 30 ರವರೆಗೆ ಅಂದರೆ ಎರಡು ತಿಂಗಳ ಕಾಲ ಹೂಡಿ ಹಾಲ್ಟ್ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಾಗುತ್ತಿದೆ.

ಸೇವೆ ವಿಸ್ತರಣೆ:ವಿಶಾಖಪಟ್ಟಣಂ ಮತ್ತು ಬೆಂಗಳೂರಿನ ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ (08543/08544) ರೈಲುಗಳ ಸೇವೆಯನ್ನು ಈಗಿರುವ ಸಮಯ ಮತ್ತು ನಿಲುಗಡೆಯೊಂದಿಗೆ ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ವಲಯವು ಸೂಚಿಸಿದೆ.

ವಿಶಾಖಪಟ್ಟಣಂ ನಿಲ್ದಾಣದಿಂದ ಪ್ರತಿ ಭಾನುವಾರ ಹೊರಡುತ್ತಿದ್ದ ರೈಲು (08543) ವಿಶಾಖಪಟ್ಟಣಂ- ಎಸ್‌ಎಂವಿಟಿ ಬೆಂಗಳೂರು ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಏ. 4ರಿಂದ ಜೂನ್ 30 ರವರೆಗೆ ಮುಂದುವರಿಸಲಾಗಿದೆ. ಈ ಮೊದಲು ಮಾರ್ಚ್ 31ರವರೆಗೆ ಓಡಿಸಲು ಸೂಚಿಸಲಾಗಿತ್ತು.ಬೆಂಗಳೂರಿನ ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರತಿ ಸೋಮವಾರ ಹೊರಡುವ (08544) ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ವಿಶಾಖಪಟ್ಟಣಂ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಏ. 7ರಿಂದ ಜು. 1ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 1ರವರೆಗೆ ಓಡಿಸಲು ನಿರ್ಧರಿಸಲಾಗಿತ್ತು.

Share this article