-ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಕ್ಷೇತ್ರದ ಸಿಂಗಟಗೆರೆಯಿಂದ ಪಂಚನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 20 ಕೋಟಿ ರು. ಮಂಜೂರು ಮಾಡಿಸಿದ್ದು, ಗುಣಮಟ್ಟದ ರಸ್ತೆ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಮಾಡಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಕ್ಷೇತ್ರದ ಸಿಂಗಟಗೆರೆಯಲ್ಲಿ 18 ಲಕ್ಷ ದಲ್ಲಿ ನಾಡ ಕಚೇರಿ ಕಟ್ಟಡ, ಸುಮಾರು 50 ಲಕ್ಷ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ 24 ಲಕ್ಷ ರು. ಪಶು ಆಸ್ಪತ್ರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 16 ಲಕ್ಷ ರು.ನಲ್ಲಿ ನಿರ್ಮಾಣ ವಾಗಿರುವ ದಾಸೋಹದ ಕೋಠಡಿಗಳು, 47ಲಕ್ಷ ವೆಚ್ಚದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ರಸ್ತೆಯಿಂದ ಪಂಚನಹಳ್ಳಿಗೆ ಸಾಗುವ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಉದ್ಘಾಟಿಸಿ ಮಾತನಾಡಿದರು.ಸಿಂಗಟಗೆರೆ ಹೋಬಳಿಗೆ ಆಗಬೇಕಾದ ಕೆಲಸಗಳು ಮತ್ತಷ್ಟು ಇದ್ದು ಶ್ರೀ ಕಲ್ಲೇಶ್ವರ ಸ್ವಾಮಿ ನೆಲೆಸಿರುವ ಸಿಂಗಟಗೆರೆ ಧಾರ್ಮಿಕ ಕ್ಷೇತ್ರದ ಹೋಬಳಿಯಾಗಿದ್ದು ಈ ಭಾಗಕ್ಕೆ ಹೆಚ್ಚಿನ ಅಭಿವೃದ್ಧಿ ಆಗಬೇಕಿದ್ದು, ಸಿಂಗಟಗೆರೆಯಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ 15 ಲಕ್ಷ ಬಿಡುಗಡೆ ಮಾಡಿಸಿದ್ದು, 1.25ಕೋಟಿ ವೆಚ್ಚದಲ್ಲಿ ಆಧುನಿಕವಾದ ಬಸ್ ಸ್ಟ್ಯಾಂಡ್ ನಿರ್ಮಾಣಕ್ಕಾಗಿ ಸಾರಿಗೆ ಸಚಿವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಮಂಜೂರು ಮಾಡಿಸಲಾಗುವುದು ಆನಂತರ ಉಳಿದ ಅಭಿವೃದ್ಧಿ ಕಾರ್ಯ ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದ ಹೋಬಳಿ ಕೇಂದ್ರಗಳ ಡಬಲ್ ರಸ್ತೆ, ವಿದ್ಯುತ್ ದೀಪ ಸೇರಿದಂತೆ ನಗರಗಳ ರಸ್ತೆ ರೀತಿ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ, ಗ್ರಾಮಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ನೇರವಾಗಿ ಕೆಲವರು ನನಗೆ ಅರ್ಜಿ ನೀಡಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಕಡೂರಿನ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಅಭಿವೃದ್ಧಿಗೆ ಈಗಾಗಲೇ 9 ಕೋಟಿ ಮಂಜೂರು ಮಾಡಿಸಲಾಗಿದೆ. ಇದರಲ್ಲಿ 2 ಮುಖ್ಯ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು. ಗ್ರಾಮೀಣ ರಸ್ತೆಗಳ ಸುಧಾರಣೆಗೆ 15 ಕೋಟಿ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಪಶುವೈದ್ಯ ಡಾ.ಕೊಟ್ರೇಶ್, ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಆರಾಧ್ಯ ತಾ.ಪಂ. ಮಾಜಿ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ, ಗ್ರಾಪಂ ಅಧ್ಯಕ್ಷೆ ಮಧುಮಾಲ, ರಮೇಶ್, ಜಯಮ್ಮಚಂದ್ರಾನಾಯಕ್, ಮಂಜುಳಕಲ್ಲೇಶಪ್ಪ,ರೇವತಿ, ಬಾಬು,ಸಾಣೇಹಳ್ಳಿ ಆರಾಧ್ಯ, ಮಲ್ಲಿಕಾರ್ಜುನ್,ಹಮೀದ್ ಪಾಷಾ, ತಹಸೀಲ್ದಾರ್ ಎಂ.ಪಿ.ಕವಿರಾಜ್,ಇಒ ಸಿ.ಆರ್.ಪ್ರವೀಣ್ ,ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಉಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಡಿ.ರೇವಣ್ಣ, ಇಂಜಿನಿಯರ್ ರಮೇಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.--- ಬಾಕ್ಸ್ ---
ಶ್ರೀ ರಾಮಮಂದಿರ ನಿರ್ಮಾಣವಾಗಬೇಕುಶ್ರೀ ರಾಮಮಂದಿರ ನಿರ್ಮಾಣವಾಗಬೇಕು. ಹಿಂದೂ, ಹಿಂದುತ್ವದ ಪಕ್ಷ ಎಂದು ಹೇಳಿಕೊಂಡರೆ ಸಾಲದು ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ ಶಾಸಕ ಆನಂದ್, ಅವರು ತಾವು ಕ್ಷೇತ್ರದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದೇವೆ. ನಮ್ಮೂರಿನ ದೇವಾಲಯಗಳಿಗಾಗಿ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ. ನಾನು ಕೂಡ ಕ್ಷೇತ್ರದ ಅನೇಕ ದೇವಾಲಯಗಳಿಗೆ 1 ಕೋಟಿ ರು.ಗೂ ಹೆಚ್ಚಿನ ಹಣ ಬಿಡುಗಡೆ ಮಾಡಿಸಿದ್ದೇನೆ. ಸದ್ಯದಲ್ಲೇ 5 ಕೋಟಿ ಅನುದಾನ ತಂದು ಶ್ರೀರಾಮ, ಶ್ರೀಕೃಷ್ಣ ಕ್ಷೇತ್ರದ ಚೌಡಮ್ಮ ಕೆಂಚಮ್ಮ ಕರಿಯಮ್ಮ ದೇವಾಲಯಗಳ ಜೀರ್ಣೋದ್ದಾರ ಮಾಡಲಾಗುವುದು ಎಂದರು.
---ಬಾಕ್ಸ್---ಬ್ಯಾನರ್ ಹರಿದರೆ ಪರಿಣಾಮ ಎದುರಿಸಬೇಕಾಗುತ್ತದೆ
ಬಿಜೆಪಿ ಸರ್ಕಾರದಲ್ಲಿ ನಾವು ಐದು ವರ್ಷ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಎಲ್ಲೂ ಬಿಜೆಪಿಯವರ ಬ್ಯಾನರ್ ಹರಿದಿರುವ ಉದಾಹರಣೆ ಇಲ್ಲ. ಆದರೆ ಇತ್ತೀಚೆಗೆ ನಮ್ಮ ಬ್ಯಾನರ್ ಗಳನ್ನು ಯಾರು ಹರಿದು ಹಾಕುತ್ತಿದ್ದಾರೆ ತಿಳಿಯುತ್ತಿಲ್ಲ. ಬೆಳ್ಳ್ಳಿ ಪ್ರಕಾಶ್ ಅವರ ಚೇಲಾಗಳು ಮಾಡುತ್ತಿದ್ದಾರಾ ತಿಳಿದಿಲ್ಲ. ಬ್ಯಾನರ್ ಹರಿದು ವಾಟ್ಸಪ್ ನಲ್ಲಿ ಹಾಕುತ್ತಿದ್ದಾರೆ. ಆದರೂ ತಾಳ್ಮೆಯಿಂದಿದ್ದೇನೆ ಇದು ಮುಂದುವರಿದಲ್ಲಿ ಪರಿಣಾಮ ಬೇರೆ ಎಂದು ಈ ವೇದಿಕೆಯಿಂದಲೇ ಎಚ್ಚರಿಕೆ ಕೊಡುತ್ತಿದ್ದೇನೆ. ತಾಕತ್ತಿದ್ದರೆ ನೇರವಾಗಿ ಬರಲಿ ಅದನ್ನು ನೋಡೆ ಬಿಡೋಣ ಕ್ಷೇತ್ರ ಬೆಳ್ಳಿ ಪ್ರಕಾಶ್ ಪರವೋ ಕೆ.ಎಸ್. ಆನಂದ್ ಪರವೋ ಎಂದರು.ನಮ್ಮ ಬ್ಯಾನರ್ ಹರಿವ ಕೀಳು ಕೆಲಸಕ್ಕೆ ಕೈ ಹಾಕಿದರೆ ನಮ್ಮ ಕಾರ್ಯಕರ್ತರು ಏನು ಎಂಬುದನ್ನು ತೋರಿಸಬೇಕಾಗುತ್ತದೆ. ಸಬ್ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್ ಪೆಕ್ಟರ್ ಕಾನೂನಿನಡಿ ಕೆಲಸ ಮಾಡುವುದಾದರೆ ಮಾಡಿ ಇಲ್ಲವೇ ಬೇರೆಡೆ ಹೋಗಿ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ನಾನೇ ಬಂದು ಪೊಲೀಸ್ ಠಾಣೆಗೆ ಬೀಗ ಹಾಕುತ್ತೇನೆ ಎಂದರು.
17ಕೆಕೆಡೆಯು1.ಕಡೂರು ತಾಲೂಕು ಸಿಂಗಟಗೆರೆ ಗ್ರಾಮದ ವಿವಿಧ ಸರ್ಕಾರಿ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು.
17ಕೆಕೆಡಿಯು1ಎ.ತಾಲೂಕಿನ ಸಿಂಗಟಗೆರೆ ಗ್ರಾಮದಿಂದ ಕೆ.ಬಿದರೆಯ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಬೂಮಿ ಪೂಜೆ ನೆರವೇರಿಸಿದರು,