ಕುಂಚ ಪರಿವಾರ ಸಂಘದಲ್ಲಿ 20 ಕೋಟಿ ಠೇವಣಿ

KannadaprabhaNewsNetwork |  
Published : Sep 07, 2025, 01:00 AM IST
೫ಶಿರಾ೨: ಶಿರಾ ನಗರದಲ್ಲಿ ಕುಂಚ ಪರಿವಾರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಉದ್ಘಾಟಿಸಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಕುಂಚ ಪರಿವಾರ ಸಹಕಾರ ಸಂಘವು ೧೦೦ ಕೋಟಿ ರೂ. ಹೆಚ್ಚು ವಹಿವಾಟು ನಡೆಸಿ, ೨೦ ಕೋಟಿ ರು. ಠೇವಣಿ ಸಂಗ್ರಹಿಸಿರುವುದು ಸಾಮಾನ್ಯ ಸಂಗತಿಯಲ್ಲ. ೧೦ ವರ್ಷಗಳಲ್ಲಿ ಯಶಸ್ವಿಯಾಗಿ ಮುನ್ನಡೆದು ಈಗ ನೂತನ ಕಟ್ಟಡ ನಿರ್ಮಿಸಿರುವ ಸಂಘದ ಅಧ್ಯಕ್ಷ ಜಿ.ಆರ್.ರಂಗನಾಥ ಹಾಗೂ ಪದಾಧಿಕಾರಿಗಳ ಪ್ರಯತ್ನ ಶ್ಲಾಘನೀಯ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ಶಿರಾ ಕುಂಚ ಪರಿವಾರ ಸಹಕಾರ ಸಂಘವು ೧೦೦ ಕೋಟಿ ರೂ. ಹೆಚ್ಚು ವಹಿವಾಟು ನಡೆಸಿ, ೨೦ ಕೋಟಿ ರು. ಠೇವಣಿ ಸಂಗ್ರಹಿಸಿರುವುದು ಸಾಮಾನ್ಯ ಸಂಗತಿಯಲ್ಲ. ೧೦ ವರ್ಷಗಳಲ್ಲಿ ಯಶಸ್ವಿಯಾಗಿ ಮುನ್ನಡೆದು ಈಗ ನೂತನ ಕಟ್ಟಡ ನಿರ್ಮಿಸಿರುವ ಸಂಘದ ಅಧ್ಯಕ್ಷ ಜಿ.ಆರ್.ರಂಗನಾಥ ಹಾಗೂ ಪದಾಧಿಕಾರಿಗಳ ಪ್ರಯತ್ನ ಶ್ಲಾಘನೀಯ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅಭಿಪ್ರಾಯ ಪಟ್ಟರು. ಅವರು ಶುಕ್ರವಾರ ನಗರದಲ್ಲಿ ಕುಂಚ ಪರಿವಾರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳು ಬಡವರು, ಜನಸಾಮಾನ್ಯರ ಆರ್ಥಿಕಾಭಿವೃದ್ಧಿಗೆ ಕಾಮಧೇನು ಇದ್ದಂತೆ. ರೈತರ ಹಿತರಕ್ಷಣೆಗಾಗಿ ಪ್ರಾರಂಭವಾದ ಸಹಕಾರ ಕ್ಷೇತ್ರವು ಕ್ರಮೇಣ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳುವುದರ ಮೂಲಕ ಜನರ ಹಿತ ಕಾಪಾಡುತ್ತಿದೆ. ಸಂಘದ ಮತ್ತಷ್ಟು ಬೆಳವಣಿಗೆಗೆ ಸದಸ್ಯರು, ಕುಂಚಿಟಿಗ ಸಮುದಾಯದ ಸಹಕಾರ ಅತ್ಯಗತ್ಯ ಎಂದು ಅವರು ಸಣ್ಣ ಉದ್ಯಮ, ಬಡವರಿಗೆ ಆರ್ಥಿಕ ಕೊರತೆ ನೀಗಿಸುತ್ತಿರುವ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ತಾವು ವೈಯಕ್ತಿಕವಾಗಿ ೨ ಲಕ್ಷ ರು ನೀಡಿದ್ದೇನೆ. ಮುಂದಿನ ದಿನಗಳಲ್ಲೂ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳಬೇಕಾದರೆ ಸಾಕಷ್ಟು ನಿಬಂಧನೆಗಳಿವೆ, ಆದರೆ ಸಹಕಾರಿ ಸಂಘಗಳಲ್ಲಿ ಅಂತಹ ಕಠಿಣ ನಿಬಂಧನೆಗಳಿಲ್ಲದ ಕಾರಣ ರೈತರು, ಬಡವರು ಹಾಗೂ ಯುವ ಉದ್ಯಮಿಗಳು ಸುಲಭವಾಗಿ ಸಾಲ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಸಹಕಾರ ಸಂಘಗಳು ಯಾವಾಗಲೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಂಘವು ನೂತನ ಕಟ್ಟಡ ಹೊಂದಿದ್ದು ಪೀಠೋಪಕರಣಗಳ ಖರೀದಿಗೆ ವೈಯಕ್ತಿಕವಾಗಿ ೧ ಲಕ್ಷ ರೂ. ನೀಡುತ್ತೇನೆ ಎಂದು ತಿಳಿಸಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿದರು. ಶಿರಾದ ಹಲವು ಸಹಕಾರ ಸಂಘಗಳ ಅಧ್ಯಕ್ಷರಿಗೆ ಹಾಗೂ ಕಟ್ಟಡದ ದಾನಿಗಳಿಗೆ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ತಾಪಂ ಇಒ ಹರೀಶ್, ಕುಂಚಿಟಿಗರ ಸಂಘದ ಅಧ್ಯಕ್ಷ ಕೆ.ಎಲ್.ಮುಕುಂದಪ್ಪ, ಅಖಿಲ ಕರ್ನಾಟಕ ಕುಂಚಿಟಿಗರ ಸಂಘದ ರಾಜ್ಯ ಅಧ್ಯಕ್ಷ ರಂಗಹನುಮಯ್ಯ, ಆರ್.ನಾಗರಾಜು, ಡಿ.ಜಿ.ಶ್ರೀನಿವಾಸ್, ಪಿಎಸ್ಐ ರಾಘವೇಂದ್ರ, ಎಚ್.ಗುರುಮೂರ್ತಿ ಗೌಡ, ಶ್ರೀನಿವಾಸ್, ಅಧ್ಯಕ್ಷ ಆರ್.ಜಿ.ಯೋಗಾನಂದ್, ಶೀಲಾ ದಿಬ್ಬಣ್ಣನವರ್, ಹನುಮಂತ್ ರಾಯಪ್ಪ, , ಜನಾರ್ದನ್ ಶಿವಣ್ಣ, ಬಾಂಬೆ ರಾಜಣ್ಣ ,ಜಿ.ಕೆ. ಶಾರದಮ್ಮ, ಬಿ. ಜುಂಜಯ್ಯ, ಲಕ್ಷ್ಮಮ್ಮ, ನಾಗರಾಜು ಎಂ, ರಾಜೇಶ್, ಕೃಷ್ಣಮೂರ್ತಿ, ಆರ್ ಕೆ ರಂಗನಾಥ್,

ಪ್ರದಾನ್ ನಾಗರಾಜ್, ಪ್ರಕಾಶ್ ಗೌಡ, ಶಶಿದರ್ ಗೌಡ, ಮಹಾಲಿಂಪ್ಪ, ಗೋವಿಂದರಾಜ್, ರಾಜಣ್ಣ ಗೌಡ, ಸಂತೆಪೇಟೆ ರಮೇಶ್, ಮಹೇಂದ್ರ ಗೌಡ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ