ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ಶೇ.೬೯.೨೭ರಷ್ಟು ಫಲಿತಾಂಶ ಗಳಿಸುವುದರೊಂದಿಗೆ ರಾಜ್ಯಕ್ಕೆ ೧೨ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಮಂಡ್ಯ ಜಿಲ್ಲೆ ಶೇ.೭೪.೫೪ ರಷ್ಟು ಫಲಿತಾಂಶ ಗಳಿಸಿ ೧೯ನೇ ಸ್ಥಾನದಲ್ಲಿತ್ತು. ೨೦೨೩-೨೪ನೇ ಸಾಲಿಗಿಂತ ಶೇ.೫.೨೭ರಷ್ಟು ಕಡಿಮೆ ಫಲಿತಾಂಶ ಗಳಿಸಿದ್ದರೂ ಸ್ಥಾನಪಲ್ಲಟಗೊಂಡಿದೆ.ಪರೀಕ್ಷೆಗೆ ನೋಂದಣಿಯಾಗಿದ್ದ ೯೯೪೮ ಗಂಡು, ೯೬೧೦ ಹೆಣ್ಣು ಮಕ್ಕಳು ಸೇರಿದಂತೆ ೧೯೫೫೮ ವಿದ್ಯಾರ್ಥಿಗಳಲ್ಲಿ ೫೮೮೯ ಗಂಡು, ೭೫೮೭ ಹೆಣ್ಣು ಸೇರಿ ೧೩೪೭೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗಂಡು ಮಕ್ಕಳು ಶೇ.೫೯.೨೦ರಷ್ಟು ಫಲಿತಾಂಶ ಗಳಿಸಿ ಹಿನ್ನಡೆ ಅನುಭವಿಸಿದ್ದರೆ, ಹೆಣ್ಣು ಮಕ್ಕಳು ಶೇ.೭೮.೯೫ ರಷ್ಟು ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯ ಸರ್ಕಾರಿ ಶಾಲೆಗಳು ಶೇ.೬೬.೦೧, ಅನುದಾನಿತ ಶೇ.೬೦.೨೧ ಹಾಗೂ ಅನುದಾನರಹಿತ ಶೇ.೭೯.೧೮ರಷ್ಟು ಫಲಿತಾಂಶ ಗಳಿಸಿವೆ.
ಶೇ.೧೦೦ರಷ್ಟು ಫಲಿತಾಂಶ:ಜಿಲ್ಲೆಯಲ್ಲಿ ೪ ಸರ್ಕಾರಿ ಶಾಲೆ, ೮ ಅನುದಾನರಹಿತ ಶಾಲೆಗಳು ಸೇರಿದಂತೆ ಒಟ್ಟು ೧೨ ಶಾಲೆಗಳು ಶೇ.೧೦೦ ರಷ್ಟು ಫಲಿತಾಂಶ ಗಳಿಸಿವೆ. ಪ್ರಥಮ ಭಾಷೆಯಲ್ಲಿ ೨೭೩, ದ್ವಿತೀಯ ಭಾಷೆಯಲ್ಲಿ ೯೫, ತೃತೀಯ ಭಾಷೆಯಲ್ಲಿ ೧೮೯, ಗಣಿತ ವಿಷಯದಲ್ಲಿ ೪೫, ವಿಜ್ಞಾನದಲ್ಲಿ ೩೫ ಹಾಗೂ ಸಮಾಜ ವಿಜ್ಞಾನದಲ್ಲಿ ೨೧೨ ಮಂದಿ ಸೇರಿದಂತೆ ೮೪೯ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸಿದ್ದಾರೆ.ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು
ಜೆ.ದೃತಿ (೬೨೫), ಸಾಹುಕಾರ್ ಎಸ್.ಕೆ.ಚಿಕ್ಕಣ್ಣಗೌಡ ಆಂಗ್ಲಮಾಧ್ಯಮ ಪ್ರೌಢಶಾಲೆ, ಕೆ.ಆರ್.ಪೇಟೆಸಿ.ಪುನೀತ (೬೨೪), ಪೂರ್ಣಪ್ರಜ್ಞ ಆಂಗ್ಲಮಾಧ್ಯಮ ಪ್ರೌಢಶಾಲೆ, ಶಿವಪುರ, ಮದ್ದೂರು
ಎಂ.ಎಸ್.ಗೀತಾಂಜಲಿ (೬೨೩), ಸಾಹುಕಾರ್ ಎಸ್.ಕೆ.ಚಿಕ್ಕಣ್ಣಗೌಡ ಆಂಗ್ಲಮಾಧ್ಯಮ ಪ್ರೌಢಶಾಲೆ, ಕೆ.ಆರ್.ಪೇಟೆಜುಬಿಯಾ ಖಾನಂ (೬೨೩), ಆದಶರ್ರ್ ವಿದ್ಯಾಲಯ, ಮಳವಳ್ಳಿ
ಕೆ.ಪಿ.ಅನನ್ಯ (೬೨೩), ಸದ್ವಿದ್ಯಾ ಪ್ರೌಢಶಾಲೆ, ಮಂಡ್ಯಬಿ.ಎಸ್.ಚಂದ್ರಪ್ರಿಯ (೬೨೩), ಅಭಿನವಭಾರತಿ ಆಂಗ್ಲಮಾಧ್ಯಮ ಶಾಲೆ, ಮಂಡ್ಯ
ಎಸ್.ಹಿತ (೬೨೨), ಕಾರ್ಮಲ್ ಕಾನ್ವೆಂಟ್, ಮಂಡ್ಯಎಲ್.ಅನನ್ಯ (೬೨೨), ಪೂರ್ಣಪ್ರಜ್ಞ ಆಂಗ್ಲಮಾಧ್ಯಮ ಪ್ರೌಢಶಾಲೆ, ಶಿವಪುರ, ಮದ್ದೂರು
ಕೆ.ಭುವನ (೬೨೨), ಆದರ್ಶ ಪ್ರೌಢಶಾಲೆ, ಕಿರುಗಾವಲು, ಮಳವಳ್ಳಿ ತಾಲೂಕುಎಂ.ಎಲ್.ಗುಣಶ್ರೀ (೬೨೨), ಅಭಿನವಭಾರತಿ ವಿದ್ಯಾಕೇಂದ್ರ, ಮಂಡ್ಯ
ಕೆ.ಸಿ.ನಿಸಿಗರ್ರ್ (೬೨೨), ಜ್ಞಾನಗಂಗಾ ಎಜುಕೇಷನ್ ಟ್ರಸ್ಟ್, ಬಿ.ಕೆ.ದೊಡ್ಡಿ, ಮಳವಳ್ಳಿ ತಾಲೂಕುಜಿಲ್ಲೆಯ ಫಲಿತಾಂಶದ ವಿವರತಾಲೂಕುನೋಂದಣಿಉತ್ತೀರ್ಣರಾದವರುಫಲಿತಾಂಶಗಂಡುಹೆಣ್ಣುಒಟ್ಟುಗಂಡುಹೆಣ್ಣುಒಟ್ಟುಗಂಡುಹೆಣ್ಣುಒಟ್ಟು
ಕೆ.ಆರ್.ಪೇಟೆ೧೩೧೪೧೨೩೦೨೫೪೪೬೭೦೮೭೯೧೫೪೯೫೦.೯೯೭೧.೪೬೬೦.೮೯ಮದ್ದೂರು೧೭೫೬೧೬೭೩೩೪೨೯೯೬೫೧೨೮೬೨೨೫೧೫೪.೯೫೭೮.೮೭೬೫.೬೫
ಮಳವಳ್ಳಿ೧೫೪೦೧೫೮೬೩೧೨೬೯೦೬೧೨೩೮೨೧೪೪೫೮.೮೩೭೮.೦೬೬೮.೫೯ಮಂಡ್ಯ ಉತ್ತರ೬೦೦೫೯೬೧೧೯೬೪೨೪೫೨೪೯೪೮೭೦.೬೭೮೭.೯೨೭೯.೨೬
ಮಂಡ್ಯ ದಕ್ಷಿಣ೧೫೭೧೧೫೩೮೩೧೦೯೧೧೨೬೧೩೫೪೨೪೮೦೭೧.೬೭೮೮.೦೪೭೯.೭೭ನಾಗಮಂಗಲ೧೧೮೪೧೦೩೮೨೨೨೨೭೨೪೮೧೪೧೫೩೮೬೧.೧೫೭೮.೪೨೬೯.೨೨
ಪಾಂಡವಪುರ೧೦೦೭೯೯೨೧೯೯೯೫೩೦೭೬೭೧೨೯೭೫೨.೬೩೭೭.೩೨೬೪.೮೮ಶ್ರೀರಂಗಪಟ್ಟಣ೯೭೬೯೫೭೧೯೩೩೫೪೪೭೨೫೧೨೬೯೫೫.೭೪೭೫.೭೬೬೫.೬೫
ಒಟ್ಟು೯೯೪೮೯೬೧೦೧೯೫೫೮೫೮೮೯೭೫೮೭೧೩೪೭೬೫೯.೨೦೭೮.೯೫೬೮.೯೦ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ 12ನೇ ಸ್ಥಾನ ದೊರಕಿರುವುದು ಸಂತಸ ಮೂಡಿಸಿದೆ. ಈ ಬಾರಿ ರಾಜ್ಯದ ಟಾಪ್ ಟೆನ್ ಜಿಲ್ಲೆಗಳಲ್ಲಿ ಮಂಡ್ಯ ಸೇರುವುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಕಳೆದ ಬಾರಿಗಿಂತ ಹೇಳುತ್ತಾನೆ ಮೇಲೆ ಬಂದಿರುವುದು ತೃಪ್ತಿ ತಂದಿದೆ. ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಎಲ್ಲರೂ ಸಾಕಷ್ಟು ಶ್ರಮ ವಹಿಸಿದ್ದವು. ಮುಂದಿನ ವರ್ಷ ಟಾಪ್ ಟೆನ್ ಒಳಗಡೆ ಬರುವುದಕ್ಕೆ ಇನ್ನೂ ಹೆಚ್ಚಿನ ಶ್ರಮ ಹಾಕುತ್ತೇವೆ.-ಶಿವರಾಮೇಗೌಡ ಡಿಡಿಪಿಐ ಮಂಡ್ಯ