ಕನ್ನಡಪ್ರಭ ವಾರ್ತೆ ಮಣಿಪಾಲ
ಕಾರ್ಯಕ್ರಮವನ್ನು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಸ್ವಾಗತ ಹೊಟೇಲ್ ಮಾಲೀಕ ಮೋಹನ್ ದಾಸ್ ನಾಯಕ್ ಪರ್ಕಳ ಜಂಟಿಯಾಗಿ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತುಳು ಚಲನಚಿತ್ರ ಹಾಗೂ ನಾಟಕ ಕಲಾವಿದ ಭೋಜರಾಜ ವಾಮಂಜೂರು, ಆಧುನಿಕ ಭಗೀರಥ ಅಮೈ ಮಾಲಿಂಗ ನಾಯ್ಕ್, ಚಲನಚಿತ್ರ ನಟ ಯೋಗೇಶ್ ಶೆಟ್ಟಿ ಧರ್ಮೆಮಾರ್, ಕವಿ ಸಾಹಿತಿ ವಸಂತ್ ಕುಮಾರ್ ಪೆರ್ಲ, ಸ್ಥಳೀಯ ಗಣ್ಯರಾದ ಬೂಧ ಶೆಟ್ಟಿಗಾರ್ ಆಗಮಿಸಿದ್ದರು.ವಿವಿಧ ಕ್ಷೇತ್ರಗಳ ಸಾಧಕರಾದ ರಾಘವೇಂದ್ರ ಪ್ರಭು ಕರ್ವಾಲು, ಎಂ. ಮನೋಹರ್, ಮಹೇಶ್ ಆಚಾರ್ಯ ಮರ್ಣೆ, ಕೇಶವ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು
ವೇದಿಕೆಯ ಪ್ರಮುಖರಾದ ರವೀಂದ್ರ ನಾಯಕ್ ಸಣ್ಣಕಿಬೆಟ್ಟು ಸ್ವಾಗತಿಸಿದರು. ಸಾನ್ವಿ ಅವರು ಪ್ರಾರ್ಥಿಸಿದರು, ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಇವರು ಕಾರ್ಯಕ್ರಮ ನಿರೂಪಿಸಿದರು.