ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ನಗರಕ್ಕೆ ಪ್ರಧಾನಿ ಮಂತ್ರಿ ಅವರು ಆಗಮಿಸಲಿದ್ದಾರೆ. ಅದೇ ದಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಲಿರುವ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.ತಾತ್ಕಾಲಿಕ ಸಂಚಾರ-ನಿಲುಗಡೆ ನಿರ್ಬಂಧಿತ ಸ್ಥಳಗಳು
ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ ಕಚೇರಿಹೆಚ್ಎಎಲ್ ವಿಮಾನ ನಿಲ್ದಾಣ ಗೇಟ್ ನಂ.30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ.30 ರವರೆಗೆ
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಸ್‌ಡಿ ರಸ್ತೆ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ನೈಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧ
ವಾಹನ ನಿಲುಗಡೆ ಸ್ಥಳಗಳುಗಣ್ಯರು ಮತ್ತು ಹಿರಿಯ ಅಧಿಕಾರಿಗಳಿಗೆ- ಹೆಚ್.ಎ.ಎಲ್ ಟ್ರಾನ್ಸ್‌ಪೋರ್ಟ್ ಡಿಪಾರ್ಟ್‌ಮೆಂಟ್ ಪಾರ್ಕಿಂಗ್ (ಎಸ್.ಡಿ ರಸ್ತೆ ಜಂಕ್ಷನ್). ಹೆಚ್‌ಎಎಲ್ ಬಸ್ ಯಾರ್ಡ್ ಪಾರ್ಕಿಂಗ್ (ಸುರಂಜನ್ ದಾಸ್ ರಸ್ತೆ). ಸಾರ್ವಜನಿಕರಿಗೆ- 08:30ರ ಒಳಗಾಗಿ ಏರ್ಪೋರ್ಟ್ ಎಕ್ಸಿಟ್ ರಸ್ತೆ ಗೇಟ್ ನಂ 2 ಮಾರ್ಗವಾಗಿ ವಿಶ್ವೇಶ್ವರಯ್ಯ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.
ಪರ್ಯಾಯ ಮಾರ್ಗಗಳುತುಮಕೂರು ರಸ್ತೆಯಿಂದ ನೈಸ್ ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು: ಸಿ.ಎಂ.ಟಿ.ಐ ಜಂಕ್ಷನ್ ಬಳಿ ಬಲ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಾಗಬೇಕು.ನಗರದ ಒಳಗಿನಿಂದ ತುಮಕೂರು ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು: ಸಿ.ಎಂ.ಟಿ.ಐ ಜಂಕ್ಷನ್ ಬಳಿ ಎಡ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ತೆರಳಬೇಕು.
ಮಾಗಡಿ ರಸ್ತೆಯಿಂದ ಕನಕಪುರ ರಸ್ತೆಗೆ: ಸುಮನ್ ಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗಬೇಕು, ನಗರದಿಂದ ಮಾಗಡಿ ರಸ್ತೆ ಮೂಲಕ ಕನಕಪುರ ರಸ್ತೆಗೆ: ಸುಮನ್ ಹಳ್ಳಿ ಜಂಕ್ಷನ್ ಬಳಿ ಎಡ ತಿರುವು ಪಡೆದು ಸಾಗಬೇಕು. ಮೈಸೂರು ರಸ್ತೆ (ಕೆಂಗೇರಿ) ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗಬೇಕು. ಮೈಸೂರು ರಸ್ತೆ ಮತ್ತು ಹೊಸಕೆರೆಹಳ್ಳಿ ರಸ್ತೆ ಮೂಲಕ ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಎಡ ಮತ್ತು ಬಲ ತಿರುವು ಪಡೆದು ಔಟರ್‌ರಿಂಗ್ ರಸ್ತೆಯಲ್ಲಿ ಸಾಗಬೇಕು.ನೈಸ್ ರಸ್ತೆ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್‌ನಿಂದ ಕನಕಪುರ ಮುಖ್ಯರಸ್ತೆಯವರೆಗೆ: ಮೈಸೂರು ರಸ್ತೆ ಕೆಂಗೇರಿ ಮೂಲಕ ಉತ್ತರಹಳ್ಳಿ, ವಸಂತಪುರ ಕ್ರಾಸ್ ಸೇರಿ ಕೋಣನಕುಂಟೆ ಕ್ರಾಸ್ ಹಾದು ಬನ್ನೇರುಘಟ್ಟ ರಸ್ತೆ ಸೇರಬೇಕು.
ಕನಕಪುರ ಮುಖ್ಯರಸ್ತೆ ನೈಸ್ ರಸ್ತೆ ಜಂಕ್ಷನ್‌ನಿಂದ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್‌ವರೆಗೆ: ಎಲೆಕ್ಟ್ರಾನಿಕ್ ಸಿಟಿ/ಬನ್ನೇರುಘಟ್ಟ ಕಡೆಯಿಂದ ಬರುವವರು ಬಿಡಿಎ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಅಂಜನಾಪುರ 80 ಅಡಿ ರಸ್ತೆ ಮೂಲಕ ಕೆ.ಎಸ್.ಐ.ಟಿ ಜಂಕ್ಷನ್ ತಲುಪಿ ಕೆಂಗೇರಿ/ಮೈಸೂರು ರಸ್ತೆ ಸೇರಬೇಕು.ಕನಕಪುರ ಮುಖ್ಯರಸ್ತೆ ಎ2ಬಿ
ಜಂಕ್ಷನ್‌ನಿಂದ ನೈಸ್ ರಸ್ತೆ ಜಂಕ್ಷನ್ವರೆಗೆಮಾರ್ಗ-01:ಕೋಣನಕುಂಟೆ ಕ್ರಾಸ್‌ನಲ್ಲಿ ಬಲ ತಿರುವು ಪಡೆದು ಉತ್ತರಹಳ್ಳಿ ಮೂಲಕ ಕೆಂಗೇರಿ ಮೈಸೂರು ರಸ್ತೆ ತಲುಪಿ, ನಂತರ ಅಗ್ರ, ಬಂಜಾರಪಾಳ್ಯ ರಸ್ತೆ ಮೂಲಕ ಕಗ್ಗಲಿಪುರದಲ್ಲಿ ಬಲಕ್ಕೆ ತಿರುಗಿ ಕನಕಪುರ ರಸ್ತೆ ಸೇರುವುದು. ಮಾರ್ಗ-02: ಕನಕಪುರ ಮುಖ್ಯರಸ್ತೆ ಎ2ಬಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ನಾರಾಯಣ ನಗರ ಜೋಡಿ ರಸ್ತೆ, ಅಂಜನಾಪುರ 80 ಅಡಿ ರಸ್ತೆ ಮೂಲಕ ಬನ್ನೇರುಘಟ್ಟ ಮುಖ್ಯರಸ್ತೆಯ ಮೂಲಕ ಕಗ್ಗಲಿಪುರಕ್ಕೆ ಸಾಗಬಹುದು.
