ಕನ್ನಡಪ್ರಭ ವಾರ್ತೆ ಗೋಕಾಕ
ಶಿಬಿರದಲ್ಲಿ ಚೌಕಶಿ ಕುಟುಂಬದ ಹಿರಿಯರನ್ನು ಹೊರತು ಪಡಿಸಿ ಒಂದೇ ಕುಟುಂಬದ 23 ಜನ ರಕ್ತದಾನ ಮಾಡಿದರು. ಇವರೊಂದಿಗೆ ಅನೇಕ ಜನ ಬಂಧುಗಳು ಹಾಗೂ ಅಭಿಮಾನಿಗಳು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಖಂಡರಾದ ಅಶೋಕ ಪುಜಾರಿ, ಘಟಪ್ರಭಾ ಪೊಲೀಸ್ ಇನ್ಸಪೆಕ್ಟರ್ ಬಸವರಾಜ ಕಾಮನಬೈಲ್, ಜಿಪಂ ಮಾಜಿ ಸದಸ್ಯರಾದ ರಾಜು ಕತ್ತಿ, ಕುಮಾ ಚೌಕಶಿ, ತಾಪಂ ಮಾಜಿ ಸದಸ್ಯರಾದ ಈರಪ್ಪ ಸಂಪಗಾರ, ನಿಂಗಣ್ಣ ಮಾಳ್ಯಾಗೊಳ, ನಿಂಗಪ್ಪ ಕಮತಿ, ರೋಟರಿ ರಕ್ತ ಭಂಡಾರದ ಸೋಮಶೇಖರ ಮಗದುಮ್ಮ, ಬಸವರಾಜ ಹುಳ್ಳೆರ, ಸುರೇಶ ಬಿರಾದಾರ ಪಾಟೀಲ, ಕಲ್ಲಪ್ಪ ಚೌಕಶಿ, ಕೆಂಪಣ್ಣ ಚೌಕಶಿ, ವಕೀಲ ಮಲ್ಲಿಕಾರ್ಜುನ ಚೌಕಶಿ, ಯಲ್ಲಾಲಿಂಗ ಚೌಕಶಿ, ಶಿವಾನಂದ ಚೌಕಶಿ, ನಾಗರಾಜ ಚೌಕಶಿ, ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.