...23 ಕಳವು ಮೊಬೈಲ್‌ಗಳು ವಾರಸುದಾರರಿಗೆ ಹಸ್ತಾಂತರ

KannadaprabhaNewsNetwork |  
Published : Jun 24, 2026, 01:45 AM IST
23ಕೆಜಿಎಫ್‌3 | Kannada Prabha

ಸಾರಾಂಶ

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕಳವಾಗಿದ್ದ ಹಾಗೂ ಸಿಇಐಆರ್ ತಂತ್ರಾಂಶದಲ್ಲಿ ದೂರು ದಾಖಲಾಗಿದ್ದ ೨೩ ಮೊಬೈಲ್ ಪೋನ್‌ಗಳನ್ನು ಸೈಬರ್ ಕ್ರೈಂ ಠಾಣೆಯ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ

ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕಳವಾಗಿದ್ದ ಹಾಗೂ ಸಿಇಐಆರ್ ತಂತ್ರಾಂಶದಲ್ಲಿ ದೂರು ದಾಖಲಾಗಿದ್ದ ೨೩ ಮೊಬೈಲ್ ಪೋನ್‌ಗಳನ್ನು ಸೈಬರ್ ಕ್ರೈಂ ಠಾಣೆಯ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸೈಬರ್ ಕ್ರೈಂ ಠಾಣೆ ವತಿಯಿಂದ ಸಿಇಐಆರ್ ಪೋರ್ಟಲ್ (ಕೇಂದ್ರೀಯ ಸಲಕರಣೆಗಳ ಗುರುತಿನ ನೋಂದಣಿ) ದಾಖಲಾಗಿದ್ದ ಮೊಬೈಲ್ ಪೋನ್ ಕಳವು ಬಗ್ಗೆ ತನಿಖೆ ಹಾಗೂ ವಿಶೇಷ ಕಾರ್ಯಾಚರಣೆ ನಡೆಸಿ ದೇಶದ ವಿವಿಧ ರಾಜ್ಯಗಳಲ್ಲಿ ಇದ್ದ ೨೩ ಕಳವು ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರನ್ನು ಬರಮಾಡಿಕೊಂಡು, ಅವರವರ ಮೊಬೈಲ್ ಪೋನ್‌ಗಳನ್ನು ಎಸ್ಪಿಶಿವಾಂಶು ರಜಪೂತ್ ಅವರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು.

ಶಿವಾಂಶು ರಜಪೂತ್ ಮಾತನಾಡಿ, ಯಾರೇ ಆಗಲಿ ಮೊಬೈಲ್ ಪೋನ್‌ಗಳನ್ನು ಕಳೆದುಕೊಂಡಲ್ಲಿ ಕೂಡಲೇ ಸಿ.ಇ.ಐ.ಆರ್. ಪೋರ್ಟಲ್‌ನಲ್ಲಿ ದೂರನ್ನು ದಾಖಲಿಸುವಂತೆ ಕರೆ ನೀಡಿದರು. ಇದರಿಂದಾಗಿ ಕಳವಾದ ಮೊಬೈಲ್ ಪೋನ್‌ಗಳು ಪತ್ತೆಯಾಗುವುದಲ್ಲದೇ, ಬೇರೆಯವರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದೆಂದು ತಿಳಿಸಿದರು. ೨೩ ಕಳವು ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದ ಸೈಬರ್ ಕ್ರೈ ಇನ್‌ಸ್ಪೆಕ್ಟರ್ ಪ್ರದೀಪ್‌ಸಿಂಗ್ ಮತ್ತು ಸಿಬ್ಬಂದಿ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು.ವಿಶೇಷಚೇತನನೊಬ್ಬ ಕಚೇರಿಯ ಒಳಗೆ ಬರುಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಸ್ಪಿ ಅವರೇ ಸ್ವತಃ ವಿಶೇಷಚೇತನರ ಬಳಿ ಬಂದು ಕಳವು ಮೊಬೈಲ್ ವಿತರಣೆ ಮಾಡಿದ್ದು ವಿಶೇಷವಾಗಿತ್ತು. ೨೩ಕೆಜಿಎಫ್೨ಎಸ್‌ಪಿ ಶಿವಾಂಶು ರಜಪೂತ್ ಅವರು ಕಳವಾಗಿದ್ದ ಮೊಬೈಲ್ ಪೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಪ್ರದೀಪ್‌ಸಿಂಗ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವಕರ್ಮರೇ ಸರ್ಕಾರದ ಸೌಲಭ್ಯ ಕೇಳಿ ಪಡೆಯಬೇಕು: ಎನ್.ಬಸವರಾಜು
ಭಾರತ ಸಂಸ್ಕೃತಿಯ ದಾಂಪತ್ಯ ವಿಶ್ವಕ್ಕೇ ಮಾದರಿ: ವಿನಯ್‌ಕುಮಾರ್