ಬಸವಗಿರಿಯಲ್ಲಿ ನಡೆಯಲಿರುವ 23ನೇ ವಚನ ವಿಜಯೋತ್ಸವ ನಡೆಯಲಿದ್ದು, ಮೊದಲನೇ ದಿನ ಫೆ. 10ರಂದು ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ವಿವಿಧ ವಿಷಯಗಳ ಮೇಲೆ ಉಪನ್ಯಾಸ ಕಾರ್ಯಕ್ರಮ ಜರುಗಲಿವೆ.
ಕನ್ನಡಪ್ರಭ ವಾರ್ತೆ, ಬೀದರ್
ಬಸವಗಿರಿಯಲ್ಲಿ ಫೆ.10ರಿಂದ 12ರವರೆಗೆ ವಚನ ಸಾಹಿತ್ಯಕ್ಕೆ ಪಟ್ಟಗಟ್ಟಿ ವಿಜಯೋತ್ಸವ ಆಚರಿಸಲು 23ನೇ ವಚನ ವಿಜಯೋತ್ಸವದಲ್ಲಿ ಪಾಲ್ಗೊಳ್ಳಿ ಎಂದು ಬಸವ ಸೇವಾ ಪ್ರತಿಷ್ಠಾನದ ಡಾ.ಅಕ್ಕ ಗಂಗಾಂಬಿಕಾ ತಾಯಿ ತಿಳಿಸಿದರು.ಅವರು ಹಾರೂರಗೇರಿಯ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ 23ನೇ ‘ವಚನ ವಿಜಯೋತ್ಸವ’ದ ಪ್ರಚಾರ ಸಭೆಯಲ್ಲಿ ಮಾತನಾಡಿ, 1995ರಿಂದ ಶರಣ ಉದ್ಯಾನ ಮತ್ತು ಬಸವಗಿರಿಯಲ್ಲಿ ಪೂಜ್ಯ ಲಿಂ. ಅಕ್ಕ ಅನ್ನಪೂರ್ಣತಾಯಿಯವರು ಹಾಗೂ ನಾನು ಒಮ್ಮನಸ್ಸಿನಿಂದ ಬಸವ ತತ್ವಕ್ಕಾಗಿ ಜೀವನ ಮುಡು ಪಾಗಿಟ್ಟು ಬಸವಾದಿ ಶರಣರ ಆಶಯಗಳನ್ನು ಪ್ರಚಾರ ಮತ್ತು ಪ್ರಸಾರಗೊಳಿಸಲು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇವೆ. ವಚನ ವಿಜಯೋತ್ಸವ ಅಕ್ಕನವರ ಆಶಯ ಹಾಗೂ ಉಸಿರಾಗಿತ್ತು ಎಂದರು.ಫೆ.10,11ಮತ್ತು 12ರಂದು ಪಾಪನಾಶ ಹಿಂಬದಿಯ ಬಸವಗಿರಿಯಲ್ಲಿ ನಡೆಯಲಿರುವ 23ನೇ ವಚನ ವಿಜಯೋತ್ಸವ ನಡೆಯಲಿದ್ದು, ಮೊದಲನೇ ದಿನ ಫೆ. 10ರಂದು ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ವಿವಿಧ ವಿಷಯಗಳ ಮೇಲೆ ಉಪನ್ಯಾಸ ಕಾರ್ಯಕ್ರಮ ಜರುಗಲಿವೆ. ಎರಡನೇ ದಿವಸ ಫೆ. 11ರಂದು ಸಾಮೂಹಿಕ ವಚನ ಪಠಣ ಹಾಗೂ ಪಂಜಾಬ್, ಹರಿಯಾಣ, ಜಮ್ಮುಕಾಶ್ಮೀರದಿಂದ ಆಗಮಿಸುವ ಕಲಾವಿದರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಭವ್ಯ ಮೆರವಣಿಗೆ :
ಫೆ. 12ರಂದು ನಗರದ ಬಸವೇಶ್ವರ ವೃತ್ತದಿಂದ ವಚನ ಕಟ್ಟುಗಳು ಹಾಗೂ ವಚನ ಸಾಹಿತ್ಯ ಭಂಡಾರವನ್ನು ತಲೆಮೇಲೆ ಹೊತ್ತು ಭವ್ಯ ಮೆರವಣಿಗೆ ನಡೆಯಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.ಖ್ಯಾತ ಪ್ರವಚನಕಾರರಾದ ಸುವರ್ಣ ಚಿಮಕೊಡೆ ಮಾತನಾಡಿ, ವಚನ ವಿಜಯೋತ್ಸವ ಅಕ್ಕ ಅನ್ನಪೂರ್ಣ ತಾಯಿಯವರ ಆಶಯವಾಗಿತ್ತು. ಅದರಲ್ಲಿ ಅವರ ಆತ್ಮ ಅಡಗಿದೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ತಾವೆಲ್ಲರೂ ತನು ಮನ ಧನದಿಂದ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಇದೇ ವೇಳೆ ವಚನ ವಿಜಯೋತ್ಸವದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಸಂಗೀತಾ ಮಲ್ಲಿಕಾರ್ಜುನ ಬಂತೆ, ಡಾ. ಶಾಂತಾಬಾಯಿ ಎಸ್ ಬಿರಾದಾರ, ಗಂಗಮ್ಮ ಸಾವಲೆ, ಸರಸ್ವತಿ ರಾಜಕುಮಾರ, ಅನುಶಬಾಯಿ ಡೊಣಗಾಪುರೆ, ಸಂಗೀತಾ ಸತೀಶ, ಸುರೇಖ ಶರಣಪ್ಪ, ರಾಜಕುಮಾರ ಕಾಜಿ, ಜೈಶ್ರೀ ರಾಜಕುಮಾರ ಕಾಜಿ, ಈರಮ್ಮ ಬಾಬುರಾವ್ ಐನಾಪುರೆ, ಈಶ್ವರಮ್ಮ ಬಿರಾದಾರ, ಈರಮ್ಮ ಸ್ವಾಮಿ, ಶಶಿಕಲಾ ಕಡ್ಡಿ, ಶ್ರೀದೇವಿ ಉಪ್ಪೆ, ಬಸವರಾಜ ಪಾಟೀಲ್, ಮಲ್ಲಿಕಾರ್ಜುನ ಬಂತೆ, ಬಸವರಾಜ ಅಮಾಜಿ, ಓಂಪ್ರಕಾಶ ಪಾಟೀಲ್, ಹಾವಶೆಟ್ಟಿ ಪಾಟೀಲ್, ಮಲ್ಲಿಕಾರ್ಜುನ ಮಣಗಿರೆ, ರಾಜಕುಮಾರ ಪಾಟೀಲ್, ರೇವಯ್ಯಾ ಸ್ವಾಮಿ, ಹಣಮಂತ ಬುಳ್ಳಾ, ಜಗನ್ನಾಥ ಕಾಜಿ, ಬಸವರಾಜ ಬಂತೆ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.