ಕೆಡಿಸಿಸಿ ಬ್ಯಾಂಕ್‌ ಚುನಾವಣೆ: 24 ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Oct 18, 2025, 02:02 AM IST
17ಎಸ್ಆರ್‌ಎಸ್‌10ಪೊಟೋ1 ( ಶಾಸಕ ಸತೀಶ್ ಕೃಷ್ಣ ಸೈಲ್ ಕಾರವಾರ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ2 (ಗೋಪಾಲಕೃಷ್ಣ ನಾಯಕ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ3 (ರವಿ ಗಜಾನನ ಹೆಗಡೆ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ4 (ಬಾಲಚಂದ್ರ ಚಂದ್ರಶೇಖರ ಹೆಗಡೆ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ5 (ಸುಬ್ರಾಯ ನಾಗಪತಿ ಹೆಗಡೆ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ6 (ಚಾರುಚಂದ್ರ ಶಾಸ್ತ್ರಿ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ7 (ಗಜಾನನ ಪೈ ಕುಮಟಾ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ8 (ನಿರಂಜನ ಶ್ರೀಧರ ಭಟ್ಟ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ9 (ವಿ.ಕೆ.ವಿಶಾಲ ಹೊನ್ನಾವರ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ10 (ಗಣಪತಿ ವೆಂಕಟರಮಣ ಜೋಶಿ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ11 (ಶಿವಾನಂದ ರಾಮಚಂದ್ರ ಹೆಗಡೆ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ12 (ನಾರಾಯಣ ಮಹಾಬಲೇಶ್ವರ ಹೆಗಡೆ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ13 (ವಿನಾಯಕ ರಾ.ಹೆಗಡೆ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ14 (ಗೋಪಾಲಕೃಷ್ಣ ಗಾಂವ್ಕರ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ15 (ಮೋಹನ ನಾರಾಯಣ ನಾಯಕ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ16 (ಶಂಕರ ಪರಮೇಶ್ವರ ಹೆಗಡೆ ನಾಮಪತ್ರ ಸಲ್ಲಿಕೆ)17ಎಸ್ಆರ್‌ಎಸ್‌10ಪೊಟೋ17 (ಕೃಷ್ಣ ದೇಸಾಯಿ ಜೋಯಿಡಾ ನಾಮಪತ್ರ ಸಲ್ಲಿಕೆ) | Kannada Prabha

ಸಾರಾಂಶ

ಜಿಲ್ಲಾ ಮಧ್ಯವರ್ತಿ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯ ನಾಮಪತ್ರ‌ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ 17 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟೂ 46 ಆಕಾಂಕ್ಷಿಗಳು 87 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಶಿರಸಿ: ಜಿಲ್ಲಾ ಮಧ್ಯವರ್ತಿ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯ ನಾಮಪತ್ರ‌ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ 17 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟೂ 46 ಆಕಾಂಕ್ಷಿಗಳು 87 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಕಾರ್ಯ ಅ. 18ರಂದು ನಡೆಯಲಿದ್ದು, ಅ. 19ರಂದು ನಾಮಪತ್ರ ವಾಪಸ್ ಪಡೆಯುವುದಕ್ಕೆ ಅವಕಾಶವಿದೆ. ಆ ನಂತರ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ ಎಂಬುದು ಅಂತಿಮವಾಗಲಿದ್ದು, ಅ. 25ರಂದು ಚುನಾವಣೆ ನಡೆಯಲಿದೆ.

ಕಾರವಾರ ಕ್ಷೇತ್ರದ ಶಾಸಕ ಸತೀಶ ಸೈಲ್ ಸೇರಿದಂತೆ ಹಲವು ಘಟಾನುಘಟಿಗಳು ನಾಮಪತ್ರ ಸಲ್ಲಿಸಿದರು. ಅಚ್ಚರಿ ಬೆಳವಣಿಗೆಯಲ್ಲಿ ಈಗಾಗಲೇ ಮಾರ್ಕೆಟಿಂಗ್‌ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಜತೆಯಲ್ಲಿ ಟಿಎಂಎಸ್ ನಿರ್ದೇಶಕ ರವಿ ಹೆಗಡೆ ಹುಳಗೋಳ ನಾಮಪತ್ರ ಸಲ್ಲಿಸಿದರು. ಇನ್ನು ಶಿರಸಿ ಕೃಷಿ ಪತ್ತಿನ ಸಹಕಾರಿ‌ ಕ್ಷೇತ್ರಕ್ಕೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಜಿ.ಆರ್. ಹೆಗಡೆ ಜತೆ ಬಂದ ಚಾರುಚಂದ್ರ ಶಾಸ್ತ್ರಿ ನಾಮಪತ್ರ ಸಲ್ಲಿಸಿದರು. ಇನ್ನು ಗೋಪಾಲಕೃಷ್ಣ ವೈದ್ಯ ಅವರ ಜತೆ ಜಿ.ವಿ. ಜೋಶಿ ನಾಮಪತ್ರ ಸಲ್ಲಿಸಿದರು. ಇದೇ‌ ಕ್ಷೇತ್ರಕ್ಕೆ ಎಸ್.ಎನ್. ಹೆಗಡೆ ದೊಡ್ನಳ್ಳಿ ನಾಮಪತ್ರ ಸಲ್ಲಿಸಿದರು. ಅಂಕೋಲಾದಿಂದ ಗೋಪಾಲಕೃಷ್ಣ ನಾಯಕ, ಜೋಯಿಡಾದಿಂದ‌ ಕೃಷ್ಣ ದೇಸಾಯಿ, ಸಿದ್ದಾಪುರದಿಂದ ಬಾಲಚಂದ್ರ ಹೆಗಡೆ, ಕುಮಟಾದಿಂದ ಗಜಾನನ ಪೈ, ಗ್ರಾಹಕರ ಸಹಕಾರಿಯಿಂದ ವಿನಾಯಕ ರಾ. ಹೆಗಡೆ, ನಿರಂಜನ ಭಟ್ಟ, ಹೊನ್ನಾವರ ತಾಲೂಕಿನ ಕೃಷಿ ಪತ್ತಿನ ಕ್ಷೇತ್ರದ ವಿ.ಕೆ. ವಿಶಾಲ, ಶಿವಾನಂದ ಹೆಗಡೆ ಕಡತೋಕ, ನಾರಾಯಣ ಹೆಗಡೆ ನಾಮಪತ್ರ ಸಲ್ಲಿಸಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಹಾಗೂ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ, ಧಾರವಾಡ ಹಾಲು ಒಕ್ಕೂಟ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದ್ದು, ಒಟ್ಟೂ 46 ಅಭ್ಯರ್ಥಿಗಳಿಂದ 87 ನಾಮಪತ್ರಗಳು ಸಲ್ಲಿಕೆಯಾದವು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ