ಕೊಪ್ಪಳ: ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವನ್ನು ಜೂ. 3ರಂದು ನಿಗದಿಪಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 24 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.
ಜೂ. 2ರಂದು ಆಯಾ ತಾಲೂಕು ತಹಸೀಲ್ದಾರ್ ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯವನ್ನು ನಿಗದಿಪಡಿಸಲಾಗಿದ್ದು, ಮಸ್ಟರಿಂಗ್ ಆನಂತರ ಮತದಾನ ಸಿಬ್ಬಂದಿ ಮತಪೆಟ್ಟಿಗೆ ಮತ್ತು ಮತದಾನ ಸಾಮಗ್ರಿಗಳೊಂದಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳುವರು. ಜೂ. 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ.
ಜೂ. 3ರಂದು ಮತದಾನ ಮುಕ್ತಾಯವಾದ ಆನಂತರ ಆಯಾ ತಾಲೂಕು ತಹಸೀಲ್ದಾರರ ಕಚೇರಿಯಲ್ಲಿ ಡಿ-ಮಸ್ಟರಿಂಗ್ ಕಾರ್ಯವನ್ನು ಕೈಗೊಂಡು ಜಿಲ್ಲೆಯ ಎಲ್ಲ ಮತದಾನ ಕೇಂದ್ರಗಳ ಮತಪೆಟ್ಟಿಗೆ ಮತ್ತು ದಾಖಲಾತಿಗಳನ್ನು ತೆಗೆದುಕೊಂಡು ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯ ಹೇಮರಡ್ಡಿ ಮಲ್ಲಮ್ಮ ಕಟ್ಟಡ ಸಭಾಂಗಣದಲ್ಲಿ ನಿರ್ಮಿಸಿರುವ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗುವುದು.ಮತದಾನ ಕೇಂದ್ರಗಳ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ಪದವೀಧರ ಮತದಾರರ ಹೆಸರು ನೋಂದಣಿಯಾಗಿರುವ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ಎಲ್ಲ ತಾಲೂಕು ಕಚೇರಿಗಳಲ್ಲಿ ಮತದಾರರ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಮತದಾರರ ಸೌಲಭ್ಯ ಕೇಂದ್ರದ ದೂರವಾಣಿ ಸಂಖ್ಯೆಗಳ ವಿವರ: ಮತದಾರರ ಸಹಾಯವಾಣಿ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಕೊಪ್ಪಳ: 1950 (ಟೋಲ್ ಫ್ರೀ), ತಹಸೀಲ್ದಾರ್ ಕಚೇರಿ, ಕುಷ್ಟಗಿ: 08536-267031, ತಹಸೀಲ್ದಾರ್ ಕಚೇರಿ, ಕಾರಟಗಿ: 08533-200321, ತಹಸೀಲ್ದಾರ್ ಕಚೇರಿ, ಕನಕಗಿರಿ: 080-23900982, ತಹಸೀಲ್ದಾರ್ ಕಚೇರಿ, ಗಂಗಾವತಿ: 08533-230929, ತಹಸೀಲ್ದಾರ್ ಕಚೇರಿ, ಯಲಬುರ್ಗಾ: 08534-220130, ತಹಸೀಲ್ದಾರ್ ಕಚೇರಿ, ಕುಕನೂರು: 08534-200115, ತಹಸೀಲ್ದಾರ್ ಕಚೇರಿ, ಕೊಪ್ಪಳ: 08539-220381 ಈ ದೂರವಾಣಿ ಸಂಖ್ಯೆಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಯಾಗಿರುವ ಬಗ್ಗೆ ಮತ್ತು ಮತದಾನ ಕೇಂದ್ರಗಳ ಮಾಹಿತಿ ಪಡೆಯಲು ಸಂಪರ್ಕಿಸಬಹುದು.ಮತದಾನದ ದಿನದಂದು ಮತದಾರರಿಗೆ ಸರ್ಕಾರ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿದ್ದು, ಅರ್ಹ ಮತದಾರರು ಈ ಸೌಲಭ್ಯವನ್ನು ಪಡೆಯಬಹುದು.
ಜಿಲ್ಲೆಯಲ್ಲಿ ನೋಂದಾಯಿತರಾದ ಎಲ್ಲ ಪದವೀಧರ ಮತದಾರರು ಜೂ. 3ರಂದು ತಪ್ಪದೇ ನಿಗದಿತ ಮತದಾನ ಕೇಂದ್ರಗಳಲ್ಲಿ ಮತ ಚಲಾಯಿಸಲು ಮತ್ತು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ ಮತದಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.