ಮಣಿಪಾಲ ಕೆಎಚ್ - ಸಿಸಿಎಲ್ ಪಂದ್ಯಾವಳಿಗೆ ಚಾಲನೆ

KannadaprabhaNewsNetwork |  
Published : Jan 08, 2024, 01:45 AM IST
ಟ್ರೋಫಿಯನ್ನು ಗೌತಮ್ ಶೆಟ್ಟಿ ಮತ್ತು ಡಾ.ಬಲ್ಲಾಳ್ ಅನಾವರಣಗೊಳಿಸಿದರು | Kannada Prabha

ಸಾರಾಂಶ

ಮಣಿಪಾಲ ಕೆಎಚ್ - ಸಿಸಿಎಲ್ ಪಂದ್ಯಾವಳಿಗೆ ಭಾನುವಾರ ಚಾಲನೆ ನೀಡಲಾಯಿತು. ಜ.೯ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಆಯೋಜಿಸುವ 3ನೇ ಆವೃತ್ತಿಯ ಕಸ್ತೂರ್ಬಾ ಹಾಸ್ಪಿಟಲ್ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಕೆಎಚ್ - ಸಿಸಿಎಲ್) 2024 ಭಾನುವಾರ ಮಣಿಪಾಲ ಎಂಡ್ ಪಾಯಿಂಟ್ ಮೈದಾನದಲ್ಲಿ ಜಿಲ್ಲಾ ಟೆನಿಸ್ ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಮತ್ತು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಜಂಟಿಯಾಗಿ ಟ್ರೋಫಿಯನ್ನು ಅನಾವರಣಗೊಳಿಸುವುದರ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗೌತಮ್ ಶೆಟ್ಟಿ ಅವರು ವೃತ್ತಿಪರರ ನಡುವೆ ಸೌಹಾರ್ದತೆ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವಲ್ಲಿ ಇಂತಹ ಕ್ರೀಡಾಕೂಟಗಳ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.

ಡಾ. ಬಲ್ಲಾಳ್‌ ಮಾತನಾಡಿ, ಸಂಸ್ಥೆಯೊಳಗೆ ಸಮಗ್ರ ಅಭಿವೃದ್ಧಿ ವಾತಾವರಣವನ್ನು ಬೆಳೆಸುವ ಬದ್ಧತೆಯ ಭಾಗವಾಗಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಆಯೋಜಿಸಿದ್ದಕ್ಕಾಗಿ ಕಸ್ತೂರ್ಬಾ ಆಸ್ಪತ್ರೆಯನ್ನು ಅವರು ಶ್ಲಾಘಿಸಿದರು.

ಸಮಾರಂಭದಲ್ಲಿ ಮಾಹೆ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್, ಕುಲಸಚಿವ ಡಾ. ಗಿರಿಧರ್ ಕಿಣಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಡೀನ್ ಡಾ.ಜಿ. ಅರುಣ್ ಮೈಯ್ಯ, ಮಾರುಕಟ್ಟೆ ಮುಖ್ಯಸ್ ಸಚಿನ್ ಕಾರಂತ್, ಡಾ.ಟಿ. ಎಂ.ಎ. ಪೈ ರೋಟರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್, ಮೋಹನ್ ಶೆಟ್ಟಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿ ಒಟ್ಟು 24 ತಂಡಗಳು ಭಾಗವಹಿಸುವ ಈ ಪಂದ್ಯಾವಳಿಯು ಭಾನುವಾರದಿಂದ 3 ದಿನಗಳ ಕಾಲ ನಡೆಯಲಿವೆ. ಜ. 9ರಂದು ಸಂಜೆ 3.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ
80 ಶಾಸಕರ ಬೆಂಬಲ ಇದೆ ಎಂಬುದು ಪ್ರಶ್ನೆಯಲ್ಲ: ಸತೀಶ್‌