ಉಣಕಲ್‌ ದೇಗುಲ ಅಭಿವೃದ್ಧಿಗೆ ₹ 25 ಕೋಟಿ ಯೋಜನೆ ಸಿದ್ಧ

KannadaprabhaNewsNetwork |  
Published : Mar 12, 2026, 02:00 AM IST
ಸಿದ್ಧಾರೂಢ ಮಠ | Kannada Prabha

ಸಾರಾಂಶ

ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಐತಿಹಾಸಿಕ ಶ್ರೀಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಗರ ಪಾಲಿಕೆಯಿಂದ ₹ 25 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನ ಪರಿಷತ್‌:

ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಐತಿಹಾಸಿಕ ಶ್ರೀಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಗರ ಪಾಲಿಕೆಯಿಂದ ₹ 25 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಜೆಪಿಯ ಪ್ರದೀಪ್‌ ಶೆಟ್ಟರ್‌ ಅವರ ಪಶ್ನೆಗೆ ಉತ್ತರಿಸಿದ ಅವರು, ಈ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟಿದೆ. ಕೇಂದ್ರ ಪುರಾತತ್ವ ಇಲಾಖೆಯ ನಿರ್ವಹಣೆಗೆ ಒಳಪಡುವ ಸಂರಕ್ಷಿತ ದೇವಸ್ಥಾನವಾಗಿರುತ್ತದೆ. ದೇವಾಲಯ ಅಭಿವೃದ್ಧಿ ಮಾಡಲು ಸ್ಥಳದ ಅಭಾವದ ಕೊರತೆ ಇದೆ. ಹೀಗಾಗಿ ನಗರ ಪಾಲಿಕೆ ಸಿದ್ಧಪಡಿಸಿರುವ ₹ 25 ಕೋಟಿ ಯೋಜನೆಯಡಿ ₹ 18 ಕೋಟಿ ಭೂಸ್ವಾಧೀನಕ್ಕೆ ಉಳಿದ ₹ 7 ಕೋಟಿ ದೇವಸ್ಥಾನದ ಅಭಿವೃದ್ಧಿಗೆ ಬಳಸಲು ಉದ್ದೇಶಿಸಲಾಗಿದೆ ಎಂದರು.

ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಮತ್ತು ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರಕಿದ ನಂತರ ದೇವಸ್ಥಾನ ಅಭಿವೃದ್ಧಿಗೊಳಿಸಲಾಗುವುದು ಎಂದು ಸಚಿವರು ಉತ್ತರಿಸಿದರು.

ಸಿದ್ಧಾರೂಢ ಮಠಕ್ಕೆ ನೆರವು:

ಸಿದ್ಧಾರೂಢ ಮಠಕ್ಕೆ ಮುಜರಾಯಿ ಇಲಾಖೆಯಿಂದ ಅನುದಾನ ನೀಡಲು ಕಾನೂನಲ್ಲಿ ಅವಕಾಶವಿಲ್ಲ. ಬದಲಾಗಿ ಮುಖ್ಯಮಂತ್ರಿಗಳ ವಿಶೇಷ ನಿಧಿ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ನೆರವು ಪಡೆಯಬಹುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಅರಿವಿನ ಡಾ.ಅಂಬೇಡ್ಕರ್‌ ಹಬ್ಬ: ಡಾ.ಶಿವಾನಂದ
ಸಿದ್ದೇಶ್ವರ ಕೋಚಿಂಗ್ ಕ್ಲಾಸ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ