ರಟ್ಟೀಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿರೇಕೆರೂರು- ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ₹25 ಕೋಟಿ ಅನುದಾನ ನೀಡಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಬಳಿಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿಗಳ ಜತೆ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ₹25 ಕೋಟಿ ಹಣ ನೀಡಿದ್ದು, ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಗೆ ₹1.49 ಕೋಟಿ ಹಣ ನೀಡಿದ್ದು, ಅದರಲ್ಲಿ ಹಿಂದೂ ವೀರಶೈವ ರುದ್ರಭೂಮಿಯ ಕಾಂಪೌಂಡ್ ನಿರ್ಮಾಣಕ್ಕೆ ₹50 ಲಕ್ಷ ನೀಡಿದ್ದು, ಕಾಮಗಾರಿ ಅಪೂರ್ಣವಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದು, ಮುಂಬರುವ ದಿನಗಳಲ್ಲಿ ಬಾಕಿ ಕಾಮಗಾರಿಗೆ ಇನ್ನಿತರ ಯೋಜನೆಗಳಲ್ಲಿ ಹಣ ನೀಡಲಾಗುವುದು ಎಂದರು.
ಹೈಮಾಸ್ಟ್ ದೀಪ ಉದ್ಘಾಟನೆ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ₹5 ಲಕ್ಷ ವೆಚ್ಚದ ಹೈಮಾಸ್ಟ್ ದೀಪ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ ಗುರುವಾರ ಸಂಜೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ನಿಂಗನಗೌಡ ಪ್ಯಾಟಿಗೌಡ್ರ, ಶಂಭಣ್ಣ ಗೂಳಪ್ಪನವರ, ಮಹೇಶ ಗುಬ್ಬಿ, ರವಿ ಮುದಿಯಪ್ಪನವರ, ರಾಘವೇಂದ್ರ ಹರವಿಶೆಟ್ಟರ್, ಗೀರಿಶ ವಾಲಿ ಮಂಜು ಅಸ್ವಾಲಿ, ಮಂಜು ಮಾಸೂರ, ಬಾಬುಸಾಬ್ ಜಡದಿ, ರಮೇಶ ಭಿಮಪ್ಪನವರ, ಗೀರಿಶ ವಾಲಿ, ಅಶೋಕ ದ್ಯಾವಕ್ಕಳವರ, ವಸಂತ ದ್ಯಾವಕ್ಕಳವರ, ಕಪೀಲ್ ಪೂಜಾರ, ವಿವೇಕ ಕುಲಕರ್ಣಿ, ಸಂತೋಷ ಬಿಳಚಿ ಮುಂತಾದವರು ಇದ್ದರು.20ರಂದು ಸಾಂಸ್ಕೃತಿಕ ಕಲರವ ಕಾರ್ಯಕ್ರಮರಾಣಿಬೆನ್ನೂರು: ಸ್ಥಳೀಯ ಸಂಸ್ಕಾರ ಭಾರತೀ ವತಿಯಿಂದ ನಗರದ ಬನಶಂಕರಿ ಕಲ್ಯಾಣಮಂಟಪದಲ್ಲಿ ಜು. 20ರಂದು ಸಂಜೆ 5ಕ್ಕೆ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಆಯೋಜಿಸಲಾಗಿದೆ.ಸಂಸ್ಕಾರ ಭಾರತೀ ಉಪಾಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ. ಸಂಜಯ ನಾಯ್ಕ್ ಅಧ್ಯಕ್ಷತೆ ವಹಿಸುವರು.
ಸಂಸ್ಕಾರ ಭಾರತೀ ಉತ್ತರ ಕರ್ನಾಟಕ ಪ್ರಾಂತ ಪ್ರಧಾನ ಕಾರ್ಯದರ್ಶಿ ಶಶಿಧರ ನರೇಂದ್ರ ಮುಖ್ಯ ವಕ್ತಾರರಾಗಿ ಆಗಮಿಸುವರು. ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ಉಪಾಧ್ಯಕ್ಷೆ ಮಮತಾ ನಾಡಿಗೇರ ಉಪಸ್ಥಿತರಿರುವರು. ಡಿವೈಎಸ್‌ಪಿ ಜೆ. ಲೋಕೇಶ, ವರ್ತಕ ಮಲ್ಲೇಶಪ್ಪ ಅರಕೇರಿ, ಬಿಎಜೆಎಸ್‌ಎಸ್ ಮಹಿಳಾ ಮಹಾವಿದ್ಯಾಲಯದ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಸ್ಥಳೀಯ ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.