ಶಿಗ್ಗಾಂವಿ: ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದಲ್ಲಿ ಹಾವೇರಿ ಜಿಲ್ಲೆಯ ಸುಮಾರು ೨೫ ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಶಿಗ್ಗಾಂವಿ ಅಭ್ಯರ್ಥಿಯನ್ನು ಅತೀಯಾಗಿ ಟೀಕಿಸಿದ ಬಿಜೆಪಿಗರಿಗೆ ಕಾಂಗ್ರೆಸ್ ಕಾರ್ಯಕರ್ತರು ತಕ್ಕ ಉತ್ತರ ನೀಡುವ ಮೂಲಕ ಬೊಮ್ಮಾಯಿ ಅವರ ಸಾಮ್ರಾಜ್ಯವನ್ನು ಕೊನೆಗಾಣಿಸಿದ್ದಾರೆ ಎಂದರು ಹೇಳಿದರು.
ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ, ಮನುವಾದಿಗಳು, ಗೋಡ್ಸೆ ವಾದಿಗಳಿಂದ ದೇಶವನ್ನು ಮುಕ್ತ ಮಾಡಲು ಮತ್ತೊಂದು ಸಂಗ್ರಾಮಕ್ಕೆ ಕಾರ್ಯಕರ್ತರು ಸಿದ್ದರಾಗಬೇಕಾಗಿದೆ. ಈ ಶತಮಾನದ ಬಹುದೊಡ್ಡ ಕಾರ್ಯಕ್ರಮದಲ್ಲಿ ಶಿಗ್ಗಾಂವಿಯ ಅತಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗಿ ಕಾರ್ಯಕ್ರಮವನ್ನು ಸಾಕ್ಷಿಕರಿಸಲಿದ್ದಾರೆ ಎಂದು ಹೇಳಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರಜಯಕುಮಾರ ಮಾತನಾಡಿ, ಕಾಂಗ್ರೆಸ್ ಹಾಗೂ ಶಿಗ್ಗಾಂವಿ ಅಭ್ಯರ್ಥಿಯನ್ನು ಬಿಜೆಪಿಯವರು ಟೀಕಿಸಿದ್ದರು ಸಿ.ಟಿ. ರವಿ ನಮ್ಮ ಪಕ್ಷದ ಮಹಿಳೆ ಬಗ್ಗೆ ಹೀನಾಯ ಶಬ್ದಗಳಿಂದ ಟೀಕಿಸಿದ್ದು ಖಂಡನೀಯ. ಈ ಕ್ಷೇತ್ರದಲ್ಲಿ ಕಳೆದ ೬ ತಿಂಗಳಿಂದ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ಸಂಜೀವಕುಮಾರ ಸಾಕಷ್ಟು ಕೆಲಸ ಮಾಡಿದ್ದು ಅವರಿಗೆ ಉತ್ತಮ ಪ್ರಶಸ್ತಿ ಕೊಡುವಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಪಾಟೀಲ ಹಾಗೂ ಎಂ.ಜೆ. ಮುಲ್ಲಾ ವಹಿಸಿದ್ದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪ್ರೇಮಾ ಪಾಟೀಲ, ಎಂ.ಎ. ಪಠಾಣ, ಎಸ್.ಎಫ್. ಮಣಕಟ್ಟಿ, ಗುಡ್ಡಪ್ಪ ಜಲದಿ, ಅಣ್ಣಪ್ಪ ಲಮಾಣಿ, ಮಾಲತೇಶ ಸಾಲಿ, ಮಲ್ಲಮ್ಮ ಸೋಮನಕಟ್ಟಿ, ಶಂಬು ಆಜೂರ, ವಳಗಿ, ಸೇರಿದಂತೆ ಹಲವರು ಮುಖಂಡರು ಕಾರ್ಯಕ್ರಮದಲ್ಲಿದ್ದರು.
ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಸುಧೀರ ಅಂಗಡಿ (ಲಮಾಣಿ ) ನಿರೂಪಿಸಿದರು.