ಜಿಲ್ಲೆಯಲ್ಲಿ 2504 ಮಂದಿಗೆ ಎಚ್‌ಐವಿ ಪಾಸಿಟಿವ್‌

KannadaprabhaNewsNetwork |  
Published : Dec 01, 2024, 01:31 AM IST
ಡಾ. ಹರೀಶ್ ಬಾಬು  | Kannada Prabha

ಸಾರಾಂಶ

ಚಿಕ್ಕಮಗಳೂರುಎಚ್‌ಐವಿ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಳೆದ 35 ವರ್ಷಗಳಿಂದ ಪ್ರತಿ ಡಿಸೆಂಬರ್‌ 1 ರಂದು ವಿಶ್ವ ಏಡ್ಸ್‌ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2504 ಸೋಂಕಿತರು ಇದ್ದು, ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ ಎಂಬುದು ಅಘಾತಕಾರಿ ವಿಷಯ.

- ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸೋಂಕಿತರು । ಚಿಕ್ಕಮಗಳೂರು ತಾಲೂಕು ಫಸ್ಟ್‌, ಶೃಂಗೇರಿ ಲಾಸ್ಟ್‌,

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಎಚ್‌ಐವಿ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಳೆದ 35 ವರ್ಷಗಳಿಂದ ಪ್ರತಿ ಡಿಸೆಂಬರ್‌ 1 ರಂದು ವಿಶ್ವ ಏಡ್ಸ್‌ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2504 ಸೋಂಕಿತರು ಇದ್ದು, ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ ಎಂಬುದು ಅಘಾತಕಾರಿ ವಿಷಯ.

ಅಂದರೆ, ಮಹಿಳೆಯರ ಸಂಖ್ಯೆ 1348 ಇದ್ದರೆ, ಪುರುಷರ ಸಂಖ್ಯೆ 1153 ಇದೆ. ಲಿಂಗತ್ವ ಅಲ್ಪಸಂಖ್ಯಾತರ ಸಂಖ್ಯೆ 3 ರಷ್ಟಿದೆ. ಇನ್ನು ತಾಲೂಕುವಾರು ನೋಡಿದರೆ ಚಿಕ್ಕಮಗಳೂರು ತಾಲೂಕು ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಶೃಂಗೇರಿ ಕೊನೆ ಸ್ಥಾನದಲ್ಲಿದೆ. ಮಲೆನಾಡಿಗೆ ಹೋಲಿಕೆ ಮಾಡಿದರೆ ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಸೇರಿದಂತೆ ಚಿಕ್ಕಮಗಳೂರು ತಾಲೂಕುಗಳು ಟಾಪ್‌ ಥ್ರೀ ಸ್ಥಾನದಲ್ಲಿವೆ. ಹೆಚ್ಚು ಜನಸಂಖ್ಯೆ ಇರುವ ಕಡೆಗಳಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಿರುವುದು ಕಂಡು ಬರುತ್ತದೆ. ಕಳೆದ 10 ವರ್ಷಗಳ ಅಂಕಿ ಅಂಶ ನೋಡಿದರೆ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಅಂದರೆ, 2015-16 ರಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ 282 ರಷ್ಟಿತ್ತು. ಪ್ರಸಕ್ತ ಸಾಲಿನಲ್ಲಿ ಈ ಸಂಖ್ಯೆ 72ಕ್ಕೆ (ಅಕ್ಟೋಬರ್‌) ಇಳಿದಿದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಜಾಗೃತಿ ಕಾರ್ಯಕ್ರಮದಿಂದ ಈ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.ಯೌವನದಲ್ಲಿ ಸೋಂಕು:

ಎಚ್‌ಐವಿ ಸೋಂಕು ಮಧ್ಯ ವಯಸ್ಕರಲ್ಲಿ ಹೆಚ್ಚು ಕಂಡು ಬರುತ್ತಿದೆ. ಇದರ ಜತೆಗೆ ಇನ್ನೊಂದು ಅಘಾತಕಾರಿ ಅಂಶವೆಂದರೆ 15 ರಿಂದ 24 ವರ್ಷದೊಳಗಿನವರಲ್ಲೂ ಸೋಂಕು ಕಂಡು ಬರುತ್ತಿದೆ. ಈ ವರ್ಷದಲ್ಲಿ 72 ಪಾಜಿಟಿವ್‌ ಕೇಸ್‌ ಗಳಲ್ಲಿ 15- 24 ವರ್ಷದೊಳಗಿನ ಮೂವರು ಪುರುಷರು ಹಾಗೂ ಓರ್ವ ಮಹಿಳೆಯಲ್ಲಿ ಪತ್ತೆಯಾಗಿದೆ.

ಗರ್ಭಿಣಿಯರಲ್ಲೂ ಎಚ್‌ಐವಿ ಪತ್ತೆಯಾಗುತ್ತಿದೆ. 2021-22 ರಲ್ಲಿ ಈ ಸಂಖ್ಯೆ 4 ರಷ್ಟಿದ್ದರೆ, 2022-23ರಲ್ಲಿ 7, 2023-24ರಲ್ಲಿ 14, ಆದರೆ, ಈ ವರ್ಷದಲ್ಲಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

-- ಬಾಕ್ಸ್‌ --

ತಾಲೂಕು ಸೋಂಕಿತರು

----------------------------------------------------

ಚಿಕ್ಕಮಗಳೂರು774

ಕಡೂರು661

ತರೀಕೆರೆ459

ಮೂಡಿಗೆರೆ 255

ಕೊಪ್ಪ135

ಎನ್‌.ಆರ್‌.ಪುರ104

ಶೃಂಗೇರಿ33

--ಎಚ್‌ಐವಿ ಪರೀಕ್ಷೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಿಂದ ಜಿಲ್ಲಾ ಆಸ್ಪತ್ರೆಯವರೆಗೆ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಖಾಸಗಿ ವಲಯದ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಎಚ್‌ಐವಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲಾ ಆಸ್ಪತ್ರೆ ಸುರಕ್ಷಾ ಕೇಂದ್ರದಲ್ಲಿ ಲೈಂಗಿಕ / ಜನನಾಂಗ ಮಾರ್ಗದ ಸೋಂಕುಗಳ ಕುರಿತು ಅರಿವು, ತಪಾಸಣೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 4 ರಕ್ತ ಪರೀಕ್ಷಾ ಕೇಂದ್ರಗಳಿದ್ದು ಎಚ್‌ಐವಿ ಮುಕ್ತ ರಕ್ತವನ್ನು ಅವಶ್ಯಕತೆಯಿರುವ ರೋಗಿಗಳಿಗೆ ಪೂರೈಸಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆ ಎಆರ್‌ಟಿ ಕೇಂದ್ರದಲ್ಲಿ ಎಚ್‌ಐವಿ ಸೋಂಕಿತರಿಗೆ ಉಚಿತವಾಗಿ ಜೀವನ ಪರ್ಯಂತ ಚಿಕಿತ್ಸೆ ನೀಡಲಾಗುತ್ತಿದೆ. ಭಾಂದವ್ಯ ಎಚ್‌ಐವಿ ಸೋಂಕಿತರ ಸಂಪರ್ಕ ಜಾಲವು ಹೆಚ್‌ಐವಿ ಸೋಂಕಿತರಿಗೆ ಆರೈಕೆ, ಬೆಂಬಲ ಮತ್ತು ಸರ್ಕಾರದ ಇತರೆ ಇಲಾಖೆಗಳಿಂದ ದೊರೆಯುವ ಸೇವಾ ಸೌಲಭ್ಯಗಳಿಗೆ ಸಂಪರ್ಕಿಸಿ ಆರ್ಥಿಕವಾಗಿ ಎಚ್‌ಐವಿ ಸೋಂಕಿತರನ್ನು ಸಬಲರನ್ನಾಗಿ ಮಾಡಲಾಗುತ್ತಿದೆ.

ಡಾ. ಹರೀಶ್ ಬಾಬು

ಜಿಲ್ಲಾ ಕಾರ್ಯಕ್ರಮಾಧಿಕಾರಿ

ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ 30 ಕೆಸಿಕೆಎಂ 3

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ