ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಹಾಸನ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ೨೫ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದ್ದು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದೇವಸ್ಥಾನದ ಗುರುಸ್ವಾಮಿ ಐ. ರಾಜನ್ ತಿಳಿಸಿದ್ದಾರೆ.ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ೨೫ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ತಂತ್ರಿ ಶ್ರೀ ವಿಷ್ಣುಭಟ್ಟ ದ್ರಿಪದ್ ಇವರ ಮಾರ್ಗದರ್ಶನದಲ್ಲಿ ಆಚಾರ್ಯ ವರ್ಣಂ, ಶುದ್ಧಿ ಪೂಜೆ, ಗಣಹೋಮ, ಶುದ್ಧಿಹೋಮ, ವಾಸ್ತು ಹೋಮ, ವಾಸ್ತು ಬಲಿ, ನವಧಾನ್ಯ ಪೂಜೆ, ಜಾಗರೆ ಉಯ್ಯುವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ ಮಹಾಗಣಪತಿ ಹೋಮ, ಬಿಂಬಶುದ್ದಿ, ಶಾಂತಿ ಹೋಮ, ಸ್ವಶಾಂತಿ ಹೋಮ, ದೀಪಾರಾಧನೆ, ನವಧಾನ್ಯ ಪೂಜೆ ನಡೆಯಲಿದೆ.
ಮೇ ೬ರ ಮಂಗಳವಾರ ಮಹಾಗಣಪತಿ ಹೋಮ, ತತ್ವಹೋಮ, ತತ್ವಕಳಸ ಪೂಜೆ, ಕುಂಭೇಶ ಪೂಜೆ, ಬ್ರಹ್ಮ ಕಳಸ ಪೂಜೆ, ೨೧೭ ಕಳಸ ಸ್ಥಾಪನೆ, ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೫.೩೦ಕ್ಕೆ ದೀಪಾರಾಧನೆ, ಆದಿವಾಸ ಹೋಮ, ಕಳಸಾದಿವಾಸಂ ಪೂಜೆ ನಡೆಯಲಿದೆ. ಮೇ ೭ರ ಬುಧವಾರ ಸಂಜೆ ಅಂಜಾಗ್ನಬಲಿ, ಶೀಭೂತ ಬಲಿ, ಬಿಂಭಶುದ್ಧಿ ಕಳಪೂಜೆ, ಮೇ ೮ರ ಗುರುವಾರ ಬೆಳಿಗ್ಗೆ ಅಂಹುಗ ಧನಂ, ಕುಂಭೇಶ ಪೂಜೆ, ಸಂಜೆ ೫.೩೦ಕ್ಕೆ ಸ್ಥಳ ಶುದ್ಧಿ, ರಕ್ಷೆಘ್ನ ಹೋಮ, ಆದಿವಾಸ ಹೋಮ, ಮಂಡಲ ಪೂಜೆ ನಡೆಯಲಿದೆ.ಮೇ ೯ರ ಶುಕ್ರವಾರ ಬೆಳಿಗ್ಗೆ ಕನಕಾಭಿಷೇಕ, ಕಳಶಾಭಿಷೇಕ, ರಜತ ಕಳಸ ಮಹಾ ಕುಂಭಾಭಿಷೇಕ ಮಹೋತ್ಸವ ಹಾಗೂ ಶ್ರೀಭೂತ ಬಲಿ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫.೩೦ಕ್ಕೆ ದೀಪಾರಾಧನೆ, ಸಹಸ್ರ ಪುಷ್ಪಾರ್ಚನೆ ಮತ್ತು ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಅಧ್ಯಕ್ಷ ಎ.ಸಿ. ಈರಣ್ಣ, ಬಿ.ಸಿ. ನಾಗರಾಜ್, ಸಿ. ನಟರಾಜನ್, ಶ್ರೀನಿವಾಸಮೂರ್ತಿ, ಎ.ವಿ. ಮಣಿಕಂಠ, ಎ.ವಿ. ಚಂದ್ರಶೇಖರ್, ಡಾ. ರಜತ್, ಟಿ.ಎನ್. ನಾಗರಾಜ್, ಎ. ಕಾಟರಾಜ್ ಉಪಸ್ಥಿತರಿದ್ದರು.ಫೋಟೋ: ಶ್ರೀ ಅಯ್ಯಪ್ಪ ಸ್ವಾಮಿ.