ಮಂಡ್ಯ ಜಿಲ್ಲೆಯಲ್ಲಿ ೨೬.೫೫ ಲಕ್ಷ ಕ್ವಿಂಟಾಲ್ ಭತ್ತ ಉತ್ಪಾದನೆ

KannadaprabhaNewsNetwork |  
Published : Dec 30, 2025, 01:30 AM IST
ಸಾಂಧರ್ಭಿಕ ಚಿತ್ರ | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯೊಳಗೆ ಮುಂಗಾರು ಹಂಗಾಮಿನಲ್ಲಿ ೫೭೧೪೮ ಹೆಕ್ಟೇರ್ ಪ್ರದೇಶದಲ್ಲಿ ೨೬,೫೫,೬೬೭ ಕ್ವಿಂಟಾಲ್ ಭತ್ತ ಉತ್ಪಾದನೆಯಾಗಿದ್ದರೆ, ೫೬೫೭೩ ಹೆಕ್ಟೇರ್‌ನಲ್ಲಿ ೯,೧೪,೭೮೫ ಕ್ವಿಂಟಾಲ್ ರಾಗಿ ಉತ್ಪಾದಿಸಲಾಗಿದೆ. ಪ್ರತಿ ಹೆಕ್ಟೇರ್‌ಗೆ ಭತ್ತ ಸರಾಸರಿ ೪೮.೦೭ ಕ್ವಿಂಟಾಲ್ ಹಾಗೂ ರಾಗಿ ಸರಾಸರಿ ೧೯.೬೩ ಕ್ವಿಂಟಾಲ್‌ನಷ್ಟು ಉತ್ಪಾದನೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯೊಳಗೆ ಮುಂಗಾರು ಹಂಗಾಮಿನಲ್ಲಿ ೫೭೧೪೮ ಹೆಕ್ಟೇರ್ ಪ್ರದೇಶದಲ್ಲಿ ೨೬,೫೫,೬೬೭ ಕ್ವಿಂಟಾಲ್ ಭತ್ತ ಉತ್ಪಾದನೆಯಾಗಿದ್ದರೆ, ೫೬೫೭೩ ಹೆಕ್ಟೇರ್‌ನಲ್ಲಿ ೯,೧೪,೭೮೫ ಕ್ವಿಂಟಾಲ್ ರಾಗಿ ಉತ್ಪಾದಿಸಲಾಗಿದೆ. ಪ್ರತಿ ಹೆಕ್ಟೇರ್‌ಗೆ ಭತ್ತ ಸರಾಸರಿ ೪೮.೦೭ ಕ್ವಿಂಟಾಲ್ ಹಾಗೂ ರಾಗಿ ಸರಾಸರಿ ೧೯.೬೩ ಕ್ವಿಂಟಾಲ್‌ನಷ್ಟು ಉತ್ಪಾದನೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.ಕಳೆದ ವರ್ಷಕ್ಕೆ ಹೋಲಿಸಿದರೆ ೨೦೨೪ರಲ್ಲಿ ೫೭೮೦೪ ಹೆಕ್ಟೇರ್ ಪ್ರದೇಶದಲ್ಲಿ ೨೭,೭೮,೬೩೮ ಕ್ವಿಂಟಾಲ್ ಭತ್ತ ಹಾಗೂ ೫೪೦೧೮ ಹೆಕ್ಟೇರ್‌ನಲ್ಲಿ ೧೦,೬೦,೩೭೩ ಕ್ವಿಂಟಾಲ್ ರಾಗಿಯನ್ನು ಉತ್ಪಾದಿಸಲಾಗಿತ್ತು. ಈ ಸಾಲಿನಲ್ಲಿ ಭತ್ತದ ಬೆಳೆಯುವ ಪ್ರದೇಶ ೬೫೬ ಹೆಕ್ಟೇರ್ ಕುಸಿತ ಕಂಡಿದ್ದರೆ, ೨೫೫೫ ಹೆಕ್ಟೇರ್ ರಾಗಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಆದರೂ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ರಾಗಿ ಉತ್ಪಾದನೆ ಸರಾಸರಿ ೧,೪೫,೫೮೮ ಕ್ವಿಂಟಾಲ್‌ನಷ್ಟು ಕುಸಿತ ಕಂಡಿರುವುದು ಕಂಡುಬಂದಿದೆ.ಭತ್ತ ಬೆಳೆಯುತ್ತಿರುವವರು ಬಹುತೇಕ ಸಣ್ಣ ಹಿಡುವಳಿದಾರರಾಗಿದ್ದಾರೆ. ಅವರು ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಮನೆಗಳಲ್ಲಿ ಜಾಗವಿಲ್ಲದ ಕಾರಣ ಗದ್ದೆಗಳಲ್ಲೇ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ. ಅದರಂತೆ ಸಣ್ಣ ಭತ್ತ ಕ್ವಿಂಟಾಲ್‌ಗೆ ೨೫೦೦ ರು. ಹಾಗೂ ದಪ್ಪ ಭತ್ತ ಕ್ವಿಂಟಾಲ್‌ಗೆ ೨೧೦೦ ರು.ನಿಂದ ೨೨೦೦ ರು.ವರೆಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.ಸರ್ಕಾರ ಗ್ರೇಡ್-೧ ಭತ್ತ ಕ್ವಿಂಟಾಲ್‌ಗೆ ೨೩೮೯ ರು. ಹಾಗೂ ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ ೨೩೬೯ ರು. ನಿಗದಿಪಡಿಸಿದೆ. ಭತ್ತದ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲೆಯಲ್ಲಿ ರೈತರಿಂದ ತೀವ್ರ ಒತ್ತಡವೇನೂ ಸೃಷ್ಟಿಯಾಗಿಲ್ಲ. ಏಕೆಂದರೆ, ಭತ್ತ ಖರೀದಿ ಕೇಂದ್ರದಲ್ಲಿ ಭತ್ತದಲ್ಲಿರುವ ತೇವಾಂಶ ಕಳೆಯುವುದಲ್ಲದೆ ಇನ್ನೂ ಹಲವು ನ್ಯೂನತೆಗಳನ್ನು ಗುರುತಿಸುತ್ತಾರೆ. ಜೊತೆಗೆ ರೈತರಿಗೆ ಹಣ ಪಾವತಿ ಮಾಡುವುದಕ್ಕೂ ತಿಂಗಳಾನುಗಟ್ಟಲೆ ಅಲೆಸುತ್ತಾರೆ. ಗದ್ದೆಯಿಂದ ಖರೀದಿಕೇಂದ್ರಕ್ಕೆ ಸಾಗಿಸುವ ವೆಚ್ಚ ಹೆಚ್ಚುವರಿಯಾಗಿ ರೈತರ ಮೇಲೆ ಬೀಳಲಿದೆ. ಹಾಗಾಗಿ ಇದರ ಸಹವಾಸವೇ ಬೇಡ ಎಂದು ಬಹುತೇಕ ರೈತರು ಮಧ್ಯವರ್ತಿಗಳು, ದಲ್ಲಾಳಿಗಳಿಗೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಜ್ಯಸರ್ಕಾರ ಭತ್ತ ಖರೀದಿ ಕೇಂದ್ರಗಳಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಡುವ ಅಗತ್ಯವಿದೆ. ತೇವಾಂಶವಿರುವ ಭತ್ತವನ್ನು ಸ್ಥಳದಲ್ಲೇ ಒಣಗಿಸುವಂತಹ ಯಂತ್ರಗಳನ್ನು ಅಳವಡಿಸಿಕೊಳ್ಳುವುದು. ಭತ್ತ ಪೂರೈಸಿದ ತಕ್ಷಣವೇ ಹಣ ಪಾವತಿ ಮಾಡುವುದು ಹಾಗೂ ಖರೀದಿ ಕೇಂದ್ರಗಳನ್ನು ಭತ್ತ ಕಟಾವು ಮಾಡುವ ಸಮಯದಲ್ಲೇ ತೆರೆದರೆ ರೈತರಿಗೆ ಖರೀದಿ ಕೇಂದ್ರಗಳ ಬಗ್ಗೆ ವಿಶ್ವಾಸ ಮೂಡುತ್ತದೆ. ಇದಾವುದನ್ನೂ ಮಾಡದೆ ನಾಮಕಾವಸ್ಥೆ ಪ್ರತಿ ವರ್ಷವೂ ಕಾಲ ಮೀರಿ ಖರೀದಿ ಕೇಂದ್ರಗಳನ್ನು ತೆರೆಯುತ್ತಿರುವುದರಿಂದ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ ಎಂಬುದು ಭತ್ತ ಬೆಳೆಯುವ ರೈತರ ಅಭಿಪ್ರಾಯವಾಗಿದೆ.೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ-ರಾಗಿ ಬೆಳೆಯ ವಿಸ್ತೀರ್ಣ ಅಂದಾಜು ಉತ್ಪಾದನೆ ವಿವರ ಭತ್ತ ರಾಗಿತಾಲೂಕು ವಿಸ್ತೀರ್ಣ ಉತ್ಪಾದನೆ ವಿಸ್ತೀರ್ಣ ಉತ್ಪಾದನೆ (ಹೆಕ್ಟೇರ್) (ಕ್ವಿಂಟಾಲ್) (ಹೆಕ್ಟೇರ್) (ಕ್ವಿಂಟಾಲ್)ಮಂಡ್ಯ ೧೧೮೯೫ ೫೫೨೭೬೦.೬೫ ೪೦೭೫ ೬೫೮೯೨.೭೫ಮದ್ದೂರು ೧೧೨೪೬ ೫೨೨೬೦೧.೬೨ ೩೮೦೨ ೬೧೪೭೮.೩೪ಮಳವಳ್ಳಿ ೧೦೨೯೫ ೪೭೮೪೦೮.೬೫ ೪೪೯೫ ೭೨೬೮೪.೧೫ಶ್ರೀರಂಗಪಟ್ಟಣ ೯೨೮೦ ೪೩೧೨೪೧.೬ ೫೧೬ ೮೩೪೩.೭೨ಪಾಂಡವಪುರ ೪೧೮೦ ೧೯೪೨೪೪.೬ ೪೧೫೦ ೬೭೧೦೫.೫ಕೆ.ಆರ್.ಪೇಟೆ ೯೦೫೪ ೪೨೦೭೩೯.೩೮ ೯೫೮೫ ೧೫೪೯೮೯.೪೫ನಾಗಮಂಗಲ ೧೧೯೮ ೫೫೬೭೧.೦೬ ೨೯೯೫೦ ೪೮೪೨೯.೧೫-----------------------------------------------------------ಒಟ್ಟು ೫೭೧೪೮ ೨೬೫೫೬೬೭.೫೬ ೫೬೫೭೩ ೯೧೪೭೮೫.೪೧

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ