36 ಸಾವಿರ ರೂ.ಗಳಿಗೆ 26 ಗಿಡ ಮರಗಳ ಮಾರಣಹೋಮ !

KannadaprabhaNewsNetwork |  
Published : Jun 05, 2025, 04:00 AM ISTUpdated : Jun 05, 2025, 05:22 AM IST
 ಗಂಜ್‌ ವೃತ್ತದಿಂದ ಮೈಲಾಪೂರ ಬೇಸ್‌ವರೆಗೆ ರಸ್ತೆಬದಿ ಬೆಳೆದು ನಿಂತ ಗಿಡಮರಗಳು. | Kannada Prabha

ಸಾರಾಂಶ

ಜೂ.5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಜಾಗತಿಕ ಪರಿಸರಕ್ಕೆ ಹಾನಿಯುಂಟುಮಾಡುವ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಗಳು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.

 ಆನಂದ ಎಂ. ಸೌದಿ

 ಯಾದಗಿರಿ : - ಇಂದು ವಿಶ್ವ ಪರಿಸರ ದಿನಾಚರಣೆ

ಜೂ.5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಜಾಗತಿಕ ಪರಿಸರಕ್ಕೆ ಹಾನಿಯುಂಟುಮಾಡುವ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಗಳು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಮನುಕುಲದ ರಕ್ಷಣೆಗೆ ಗಿಡ-ಮರಗಳ ಸಂರಕ್ಷಣೆ, ಸಸಿಗಳ ನೆಡುವಿಕೆಗೆ ಇದು ಉತ್ತೇಜಿಸುತ್ತದೆ.

ಶೇ.10ಕ್ಕಿಂತ ಕಡಿಮೆ ಅರಣ್ಯಪ್ರದೇಶ ಹೊಂದಿರುವ ಪಟ್ಟಿಯಲ್ಲಿ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿದ್ದು, ಇಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಜೂನ್

1 ರಿಂದ ಒಂದು ಲಕ್ಷ ಸಸಿ ನಡೆಯಲು ಸರ್ಕಾರ ವಿಶೇಷವಾದ ಯೋಜನೆಗೆ ಚಾಲನೆ ನೀಡಿದೆ. ಬಳ್ಳಾರಿ ಶೇ.7ರಷ್ಟು, ಕಲಬುರಗಿ ಶೇ.5ರಷ್ಟು ಹಾಗೂ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೇ.3ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಹೀಗಾಗಿ, ಜೂನ್ 1ರಿಂದ ಈ ನಾಲ್ಕು ಜಿಲ್ಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ರಸ್ತೆಬದಿಯಲ್ಲಿ 1ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಳೆದ ತಿಂಗಳು ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರಾದ ಈಶ್ವರ ಖಂಡ್ರೆಯವರು ತಿಳಿಸಿದ್ದರು.

ದುರಂತವೆಂದರೆ, ಯಾದಗಿರಿಯಲ್ಲಿ ಹಸಿರೀಕರಣ ಕೇವಲ ಕಾಗದದಲ್ಲೇ ಎನ್ನುವಂತಿದೆ. ತಿಂಗಳ ಹಿಂದಷ್ಟೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರದೇಶದಲ್ಲಿ ಶೆಡ್‌ಗಳ ನಿರ್ಮಾಣಕ್ಕೆಂದು ರಸ್ತೆಬದಿಯ 22 ಬೃಹತ್‌ ಮರಗಳ ತೆರವಿಗೆ 70,313 ರು.ಗಳಿಗೆ ಹರಾಜಾಗಿದ್ದರೆ, ಈಗ ಗಂಜ್ ಸರ್ಕಲ್‌ದಿಂದ ಮೈಲಾಪೂರ ಬೇಸ್‌ವರೆಗೆ 26 ವಿವಿಧ ಜಾತಿಯ ಮರಗಳು 36,500 ರು.ಗಳಿಗೆ ಹರಾಜಾಗಿವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2023-24ನೇ ಸಾಲಿನ ಯೋಜನೆಯಡಿಯಲ್ಲಿ ಮಂಜೂರಾದ 500 ಮೀ. ಉದ್ದದವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಅಡಚಣೆಯ ಕಾರಣಕ್ಕೆ, ಲಕ್ಷಾಂತರ ಜನರಿಗೆ ನೆರಳಿನಾಶ್ರಯವಾಗಿದ್ದ ಈ ಮರಗಳ ತೆರವು ಕಾರ್ಯ ನಡೆಯುತ್ತಿದೆ. ಗಂಜ್‌ ಸರ್ಕಲ್‌ದಿಂದ ಮೈಲಾಪುರ ಬೇಸ್‌ವರೆಗೆ ಬಲಬದಿಯ 17 ಹಾಗೂ ಎಡಬದಿಯ 9 ಮರಗಳ ತೆರವು ಕಾರ್ಯಾಚರಣೆಗೆ ‘ಹಸಿರು ನಿಶಾನೆ’ ಸಿಕ್ಕಿದೆ.

ಜೂನ್‌ 5 ರಂದು ವಿಶ್ವ ಪರಿಸರ ದಿನಾರಣೆಯ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಪರಿಸರ ಕಾಳಜಿಗಾಗಿನ ರಾಜಕೀಯ ನಾಯಕರುಗಳ-ಅಧಿಕಾರಿಗಳ, ಸಂಘ ಸಂಸ್ಥೆಗಳ ಭಾಷಣಗಳು, ಸಲಹೆಗಳು ಪುಂಖಾನುಪುಂಖವಾಗಿ ಕೇಳಿಬರುವ ಜೊತೆಗೆ, ಗಿಡ ಮರಗಳ ಕತ್ತರಿಸುತ್ತಿರುವ ಗರಗಸ ಮಶಿನ್‌ ಸಪ್ಪಳವೂ ಪ್ರತಿಧ್ವನಿಸುತ್ತಿರುತ್ತದೆ. ಅಭಿವೃದ್ಧಿ ಹೆಸರಲ್ಲಿ ಉಸಿರು ನೀಡುವ ಗಿಡಮರಗಳ ಕತ್ತರಿಸುವಿಕೆ ನಿಜಕ್ಕೂ ದುರದೃಷ್ಟಕರ. ಅನೇಕ ದಶಕಗಳಿಂದ ಬೆಳೆದು ನಿಂತಿರುವ, ಬಿಸಲಲ್ಲಿ ಬೆಂದವರಿಗೆ ನೆರಳಾಗಿ, ಮಾಲಿನ್ಯ ತಡೆಗಟ್ಟಿ ಸ್ವಚ್ಛಂದ ಉಸಿರಾಡಲು ಸಹಕಾರಿಯಾಗುವ ಗಿಡಮರಗಳ ಮಾರಣಹೋಮ, ಅದೂ ವಿಶ್ ಪರಿಸರ ದಿನದಂದೇ ನಡೆಯುತ್ತಿರುವುದು ಆಘಾತಕಾರಿ ಅನ್ನೋದು ಪರಿಸರಪ್ರಿಯರ ಆತಂಕ. 

PREV
Read more Articles on

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’