ಹಿರಿಯೂರು: ಮಲೆನಾಡು ಕರಾವಳಿ ಕುಂಚಿಟಿಗರ ಭಾವೈಕ್ಯತಾ ಪ್ರವಾಸ 27 ಮತ್ತು 28 ರಂದು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದಿಂದ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ತಿಳಿಸಿದರು.
27 ರಂದು ಬೆಳಗಿನ ಜಾವ 4 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಪ್ರವಾಸಕ್ಕೆ ಚಾಲನೆ ನೀಡಿ, ನಂತರ ಶಾಂತಿಸಾಗರ, ನೀಲೋಗಲ್, ಗುಡ್ಡದಕೋಮಾರನಹಳ್ಳಿ, ಗೊಲ್ಲರಹಳ್ಳಿ, ಮಾಸಡಿ, ನರಸಗೊಂಡನಹಳ್ಳಿ, ಸುಂಕದಕಟ್ಟೆ, ಕುಂಕುವ, ಸೂರಗೊಂಡನಕೊಪ್ಪ, ಗಾಮ, ಶಿಕಾರಿಪುರ ತಲುಪಿ ಅಲ್ಲಿಯೇ ತಂಗುವರು.
ನಂತರ 28 ರಂದು ಬೆಳಿಗ್ಗೆ 5 ಗಂಟೆಗೆ ಪ್ರಾರಂಭ ಮಾಡಿ ಕುಬಟೂರು, ಜಡೆ, ಆಣಜಿ, ಶಿರಸಿ, ದಾಸನಕೊಪ್ಪ, ಲಕ್ಷ್ಮಿಪುರ, ರಂಗಾಪುರ, ಹಾನಗಲ್, ಅಕ್ಕಿಆಲೂರು, ಗ್ರಾಮದಲ್ಲಿ ಪ್ರವಾಸ ಮುಕ್ತಾಯ ಮಾಡಿ ಹಿರಿಯೂರಿಗೆ ವಾಪಾಸ್ ಬರಲಾಗುವುದು ಎಂದರು.ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ಮಾತನಾಡಿ, ಈ ವರ್ಷದಲ್ಲಿ ಬಯಲುಸೀಮೆ ಹಾಗೂ ಮಲೆನಾಡು ಕರಾವಳಿ ಕುಂಚಿಟಿಗರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಪ್ರಧಾನ ಕಾರ್ಯದರ್ಶಿ ವಿ.ಕುಬೇರಪ್ಪ, ಹುಲುಗಲಕುಂಟೆ ಶಶಿಕಲಾ ಮುಂತಾದವರು ಉಪಸ್ಥಿತರಿದ್ಧರು.-----
ಫೋಟೊ: ಚಿತ್ರ 1 ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಲೆನಾಡು ಕರಾವಳಿ ಕುಂಚಿಟಿಗರ ಸಂಗಮ ಭಾವೈಕ್ಯತಾ ಪ್ರವಾಸ ಕುರಿತಂತೆ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.