ನಾಡಿದ್ದು ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ

KannadaprabhaNewsNetwork |  
Published : Feb 13, 2026, 03:00 AM IST
ಪಿ ಕೆ-2.ಚೇರಂಬಾಣೆಗೌಡ ಮಹಿಳಾ ಒಕ್ಕೂಟದ ವತಿಯಿಂದಆಯೋಜಿಸಿದ  ಕೆಡ್ಡಸ ಹಬ್ಬದಕಾರ್ಯಕ್ರಮ ಶಾಸ್ತ್ರೋಕ್ತವಾಗಿಹಾಗೂ ಸಾಂಪ್ರದಾಯಕವಾಗಿ ಆಚರಿಸಲಾಯಿತು. | Kannada Prabha

ಸಾರಾಂಶ

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಸವ ಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘವು ಫೆ.15 ರಂದು ಬೆಳಗ್ಗೆ 11 ಗಂಟೆಗೆ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ ಹಮ್ಮಿಕೊಂಡಿದೆ. ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯವನ್ನು ಕೇಸರಟ್ಟಿಯ ಸೋಮಲಿಂಗ ಸ್ವಾಮೀಜಿ, ನೇತೃತ್ವವನ್ನು ನರಸಲಗಿಯ ಶ್ರೀಕಾಂತ ಮಹಾರಾಜರು ವಹಿಸುವರು. ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಮಾರಂಭ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಸವ ಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘವು ಫೆ.15 ರಂದು ಬೆಳಗ್ಗೆ 11 ಗಂಟೆಗೆ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ ಹಮ್ಮಿಕೊಂಡಿದೆ. ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯವನ್ನು ಕೇಸರಟ್ಟಿಯ ಸೋಮಲಿಂಗ ಸ್ವಾಮೀಜಿ, ನೇತೃತ್ವವನ್ನು ನರಸಲಗಿಯ ಶ್ರೀಕಾಂತ ಮಹಾರಾಜರು ವಹಿಸುವರು. ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಮಾರಂಭ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ ವಹಿಸುವರು. ಸಂತ ಸೇವಾಲಾಲರ ಭಾವಚಿತ್ರಕ್ಕೆ ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಪುಷ್ಪಾರ್ಚನೆ ನೆರವೇರಿಸುವರು. ಮುಖ್ಯಅತಿಥಿಗಳಾಗಿ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಕೆಪಿಸಿಸಿ ರಾಜ್ಯ ಸಂಯೋಜಕ ಪ್ರಭುಗೌಡ ಪಾಟೀಲ, ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಬಸವೇಶ್ವರ ಇಂಟರ್‌ನ್ಯಾಷನಲ್‌ ಶಾಲಾ ಸಮಿತಿ ಅಧ್ಯಕ್ಷ ಅನಿಲ ಅಗರವಾಲ, ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ, ನಿವೃತ್ತ ವಲಯ ಆಯುಕ್ತ ಬಸವರಾಜ ಲಮಾಣಿ, ಅತಿಥಿಗಳಾಗಿ ಸಮಾಜ ಸೇವಕ ಶರಣಪ್ಪ ಬಳ್ಳಾವೂರ, ಮುಖಂಡ ಹರಿಲಾಲ ನಾಯಕ, ಮಹಿಳಾ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಗ್ರಾಪಂ ಮಾಜಿ ಅಧ್ಯಕ್ಷೆ ಸುನೀತಾ ಪವಾರ, ಡಾ.ಸತೀಶ ರಾಠೋಡ, ಭೂನ್ಯಾಯ ಮಂಡಳ ಸದಸ್ಯ ಮಲ್ಲು ಪವಾರ, ಭೋಜು ಚವ್ಹಾಣ,ಗುತ್ತಿಗೆದಾರ ರಾಜು ರಾಠೋಡ, ತಾಪಂ ಮಾಜಿ ಸದಸ್ಯ ಮಲ್ಲು ರಾಠೋಡ, ನರಸಲಗಿ ಪಿಕೆಪಿಎಸ್ ನಿರ್ದೇಶಕ ನೇಮು ನಾಯಕ, ಮುಖಂಡ ಪ್ರಶಾಂತ ಪವಾರ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷ ಬಾಳು ರಾಠೋಡ, ನಿವೃತ್ತ ಯೋಧ ಗುರಪ್ಪ ಲಮಾಣಿ, ನ್ಯಾಯವಾದಿಗಳಾದ ರವಿ ರಾಠೋಡ, ಶಿವಾನಂದ ಲಮಾಣಿ, ಪಾರುಪತ್ತೇಗಾರ ಅಮಗೊಂಡ ಲಮಾಣಿ ಇತರರು ಆಗಮಿಸುವರು ಎಂದು ಬಂಜಾರಾ ಸೇವಾ ಸಂಘವು ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಪಾಲಿಗೆ ವೈದ್ಯರು ದೇವರಾಗಿ, ರಾಕ್ಷಸರಾಗಬೇಡಿ: ಡಿಸಿ ಸಂಗಪ್ಪ
ಪ್ರತಿಭಟನೆ ಬಳಿಕ ಅರ್ಧ ತಾಸಿನೊಳಗೆ ಕಾಮಗಾರಿ