ಬಡ್ಡಿ ಮನ್ನಾ ಸೌಲಭ್ಯ ಪಡೆಯಲು ಫೆ.29 ಕೊನೆ ದಿನ

KannadaprabhaNewsNetwork | Published : Feb 3, 2024 1:48 AM

ಸಾರಾಂಶ

ಶ್ರೀರಾಮ ಸೇವಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕರಿಮನೆ ಇದರ ಆಡಳಿತ ಮಂಡಳಿ ನಿರ್ದೇಶಕರು ಗುರುವಾರ ಬ್ಯಾಂಕಿನ ಅಧ್ಯಕ್ಷ ಎನ್.ಟಿ.ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಹಕಾರಿ ಬ್ಯಾಂಕುಗಳಲ್ಲಿ ರೈತರ ದೀರ್ಘಾವಧಿ ಸುಸ್ತಿ ಸಾಲಗಳ ಅಸಲನ್ನು ಪಾವತಿಸಿದ್ದಲ್ಲಿ ಬಡ್ಡಿಯನ್ನು ಸರ್ಕಾರ ಹಾಗೂ ಸುಸ್ತಿ ಬಡ್ಡಿಯನ್ನು ಬ್ಯಾಂಕಿ ನಿಂದ ಬಿಟ್ಟುಕೊಡುವ ಮತ್ತು ಬಡ್ಡಿ ಮನ್ನಾಕ್ಕೆ ಒಳಪಡುವ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವ ತೀರ್ಮಾನ ಕೈಗೊಂಡರು.

ಬಡ್ಡಿ ಮನ್ನಾಕ್ಕೆ ಒಳಪಡುವ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿಗೆ ತೀರ್ಮಾನ

ಕನ್ನಡಪ್ರಭ ವಾರ್ತೆ, ಕೊಪ್ಪ

ಶ್ರೀರಾಮ ಸೇವಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕರಿಮನೆ ಇದರ ಆಡಳಿತ ಮಂಡಳಿ ನಿರ್ದೇಶಕರು ಗುರುವಾರ ಬ್ಯಾಂಕಿನ ಅಧ್ಯಕ್ಷ ಎನ್.ಟಿ.ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಹಕಾರಿ ಬ್ಯಾಂಕುಗಳಲ್ಲಿ ರೈತರ ದೀರ್ಘಾವಧಿ ಸುಸ್ತಿ ಸಾಲಗಳ ಅಸಲನ್ನು ಪಾವತಿಸಿದ್ದಲ್ಲಿ ಬಡ್ಡಿಯನ್ನು ಸರ್ಕಾರ ಹಾಗೂ ಸುಸ್ತಿ ಬಡ್ಡಿಯನ್ನು ಬ್ಯಾಂಕಿ ನಿಂದ ಬಿಟ್ಟುಕೊಡುವ ಮತ್ತು ಬಡ್ಡಿ ಮನ್ನಾಕ್ಕೆ ಒಳಪಡುವ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವ ತೀರ್ಮಾನ ಕೈಗೊಂಡರು. ಸರ್ಕಾರದ ಆದೇಶದಂತೆ ಬಡ್ಡಿಮನ್ನಾಕ್ಕೆ ಒಳಪಡುವ ದೀರ್ಘಾವಧಿ ಸಾಲಗಳ ಯೋಜನೆಗಳಾದ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ, ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಶನ್ ಮತ್ತು ತೋಟಗಾರಿಕಾ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು ಸುಸ್ತಿ ಸಾಲ ಗಾರರು ಫೆ.29ರೊಳಗೆ ಅಸಲು ಪಾವತಿಸಿ ಸರ್ಕಾರದ ಬಡ್ಡಿ ಮನ್ನಾ ಪ್ರಯೋಜನ ಪಡೆದುಕೊಳ್ಳಲು ಈಗಾಗಲೇ ಬ್ಯಾಂಕಿನ ಬಡ್ಡಿ ಮನ್ನಾಕ್ಕೆ ಒಳಪಡುವ 83 ಜನ ಸುಸ್ತಿ ಸಾಲಗಾರರಿಗೆ ತಿಳುವಳಿಕೆ ಪತ್ರ ನೀಡಲಾಗಿದೆ. ಸರ್ಕಾರದ ಈ ಸೌಲಭ್ಯ ಒಂದು ಬಾರಿಗೆ ಮಾತ್ರ ಜಾರಿಯಾಗಿದ್ದು ಸುಸ್ತಿ ಬಾಕಿ ಇರುವ ಎಲ್ಲಾ ಸದಸ್ಯರು ಕೊನೆ ದಿನಾಂಕ ಫೆ.29 ರೊಳಗೆ ಅಸಲು ಪಾವತಿಸಿ ಬಡ್ಡಿಮನ್ನಾ ಪ್ರಯೋಜನ ಪಡೆಯುವಂತೆ, ಹೆಚ್ಚಿನ ಮಾಹಿತಿ ಬ್ಯಾಂಕಿಗೆ ಭೇಟಿ ನೀಡಿ ಪಡೆಯಲು ಸಭೆಯಲ್ಲಿ ಮನವಿ ಮಾಡಲಾಗಿದೆ.

ಬ್ಯಾಂಕಿನ ವಿಷಯ ಪರಿಣಿತ ನಿರ್ದೇಶಕ ಎಚ್.ಎಂ. ನಟರಾಜ್, ಉಪಾಧ್ಯಕ್ಷ ಎ.ಸಿ. ಅಶ್ವಥ್ ಕುಮಾರ್, ನಿರ್ದೇಶಕರಾದ ಸಿ.ಎಸ್. ಕ್ಷ್ಮಿನಾರಾಯಣ, ಎಸ್. ಕಿರಣ್ ಹೆಬ್ಬಾರ್, ಡಿ.ಸಿ.ವಿನಯ್, ಬಿ.ಆರ್. ಉಮೇಶ್, ವ್ಯವಸ್ಥಾಪಕಿ ವಿಕ್ಟೋರಿಯಾ ಕರ್ವಾಲ್‌ ಸಭೆಯಲ್ಲಿ ಉಪಸ್ಥಿತರಿದ್ದರು.

Share this article