29ರಂದು ರಾಜ್ಯಮಟ್ಟದ ಸ್ಪೆಷಲ್ ಒಲಿಂಪಿಕ್ಸ್ ಬೂಚಿ ಪಂದ್ಯಾವಳಿ

KannadaprabhaNewsNetwork |  
Published : Jul 28, 2024, 02:02 AM IST
ಕ್ಯಾಪ್ಷನಃ27ಕೆಡಿವಿಜಿ33ಃದಾವಣಗೆರೆಯಲ್ಲಿ ರಾಜ್ಯ ಮಟ್ಟದ ಬೂಚಿ ಪಂದ್ಯಾವಳಿಯನ್ನು ಆಯೋಜಿಸಿರುವ ಕುರಿತು ನಾಗರಾಜ ಶಿವನಪ್ಪನವರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. | Kannada Prabha

ಸಾರಾಂಶ

ಸ್ಪೆಷಲ್ ಒಲಂಪಿಕ್ಸ್ ಭಾರತ್ ಹಾಗೂ ದಾವಣಗೆರೆ ಜಿಲ್ಲಾ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಆಯೋಜಿಸಿರುವ ರಾಜ್ಯ ಮಟ್ಟದ ಬೂಚಿ ಪಂದ್ಯಾವಳಿಯನ್ನು ಜು.29 ರಂದು ಬೆಳಗ್ಗೆ 10.30 ಕ್ಕೆ ನಗರದ ಎಸ್.ಎಸ್.ಲೇಔಟ್ ನಲ್ಲಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕದ ಖಜಾಂಚಿ ನಾಗರಾಜ ಶಿವನಪ್ಪನವರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ನೇತಾಜಿ ಸುಭಾಷ್ ಚಂದ್ರಬೋಸ್ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ಪೆಷಲ್ ಒಲಂಪಿಕ್ಸ್ ಭಾರತ್ ಹಾಗೂ ದಾವಣಗೆರೆ ಜಿಲ್ಲಾ ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ಆಯೋಜಿಸಿರುವ ರಾಜ್ಯ ಮಟ್ಟದ ಬೂಚಿ ಪಂದ್ಯಾವಳಿಯನ್ನು ಜು.29 ರಂದು ಬೆಳಗ್ಗೆ 10.30 ಕ್ಕೆ ನಗರದ ಎಸ್.ಎಸ್.ಲೇಔಟ್ ನಲ್ಲಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕದ ಖಜಾಂಚಿ ನಾಗರಾಜ ಶಿವನಪ್ಪನವರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೆಷಲ್ ಒಲಂಪಿಕ್ಸ್ ಗೆ ಬೌದ್ಧಿಕ ಸವಾಲೆನ್ನೆದುರಿಸುತ್ತಿರುವ ಮಕ್ಕಳನ್ನು ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾವಳಿಗೆ ಭಾಗವಹಿಸಲು ನಮ್ಮ ರಾಜ್ಯದಿಂದ ''''''''''''''''ಬೂಚಿ'''''''''''''''' ತಂಡವನ್ನು ಆಯ್ಕೆ ಮಾಡಿ ಕಳುಹಿಸಬೇಕಾಗಿದೆ. ಹಾಗಾಗಿ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಜು. 29 ರಂದು ನಗರದ ನೇತಾಜಿ ಸುಭಾಸ್‌ಚಂದ್ರಬೋಸ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಆಯ್ಕೆಯ ಬೂಚಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ರಾಜ್ಯದ ಎಲ್ಲಾ ಜಿಲ್ಲೆಗಳ ವಿಶೇಷ ಶಾಲೆಯ 24 ವರ್ಷ ಮೇಲ್ಪಟ್ಟ ಗಂಡು ಮತ್ತು ಹೆಣ್ಣು ಮಕ್ಕಳು ಇದರಲ್ಲಿ ಭಾಗವಹಿಸಬಹುದಾಗಿದೆ. ಈ ''''''''''''''''ಬೂಚಿ'''''''''''''''' ಆಟವು ಗುಂಪಿನಲ್ಲಿ ಆಡುವ ಆಟವಾಗಿದೆ. ಎರಡು ತಂಡಗಳು ನಾಲ್ಕು ಬಾಲ್‌ಗಳನ್ನು ಪಲಿನಾ ಎನ್ನುವ ಬಾಲಿನ ಸಮೀಪಕ್ಕೆ ತಮ್ಮ ಬಾಲುಗಳನ್ನು ಹಾಕಬೇಕು. ಸಮೀಪಕ್ಕೆ ಹಾಕಿದ ತಂಡವನ್ನು ಜಯಶಾಲಿ ತಂಡ ಎಂದು ಘೋಷಿಸಲಾಗುವುದು ಎಂದು ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದರು.ಜು.29 ರಂದು ಮಾಜಿ ಸಚಿವೆ ಶಶಿಕಲಾಜೊಲ್ಲೆ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಪಿ ಉಮಾಪ್ರಶಾಂತ್, ಜಿಪಂ ಸಿಇಒ ಸುರೇಶ್ ಇಟ್ನಾಳ್, ಡಾ.ಕೆ.ಕೆ ಪ್ರಕಾಶ್, ರೂಪ್ ಸಿಂಗ್, ಅಮರೇಂದ್ರ ಅಂಜನಪ್ಪ ಇತರರು ಭಾಗವಹಿಸುವರು.

ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸುಮಾರು 100 ವಿಶೇಷ ಮಕ್ಕಳು ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಆಯ್ಕೆಯಾದವರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುವುದು ಎಂದರು.ಈ ವೇಳೆ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ರಮಣಲಾಲ್ ಪಿ. ಸಂಘವಿ, ಸಿ. ಹನುಮೇಶ್, ಎಚ್. ಎನ್. ಯಶೋಧಮ್ಮ ಇದ್ದರು.-----27ಕೆಡಿವಿಜಿ33

ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಬೂಚಿ ಪಂದ್ಯಾವಳಿಯನ್ನು ಆಯೋಜಿಸಿರುವ ಕುರಿತು ನಾಗರಾಜ ಶಿವನಪ್ಪನವರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!