ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ೨ನೇ ರಾಜ್ಯ ಸಮ್ಮೇಳನ ಇತ್ತೀಚೆಗೆ ಪಟ್ಟಣದ ಕೋಡಕಣಿ ಬಿಲ್ಡಿಂಗ್‌ನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ೨ನೇ ರಾಜ್ಯ ಸಮ್ಮೇಳನ ಇತ್ತೀಚೆಗೆ ಪಟ್ಟಣದ ಕೋಡಕಣಿ ಬಿಲ್ಡಿಂಗ್‌ನಲ್ಲಿ ನಡೆಯಿತು.
ಜಯಂತ ನಾಯ್ಕ ಸಮ್ಮೇಳನ ಉದ್ಘಾಟಿಸಿದರು. ಚಂದ್ರಕಾಂತ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನೂತನ ರಾಜ್ಯ ಮತ್ತು ಜಿಲ್ಲಾ ಸಮಿತಿ ರಚನೆ ಮಾಡಲಾಯಿತು. ರಾಜ್ಯಾಧ್ಯಕ್ಷರಾಗಿ ಕೃಷ್ಣ ಟಿ. ಭಟ್ಟ-ಜೋಯಿಡಾ, ರಾಜ್ಯ ಉಪಾಧ್ಯಕ್ಷರಾಗಿ, ಶೇಖರಪ್ಪ ಒ.-ಚಿತ್ರದುರ್ಗ, ರಾಜಪ್ಪ-ದಾವಣಗೆರೆ, ಮೋಹನ್ ಸಿ.-ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ ನಾಯ್ಕ -ಕುಮಟಾ, ಸಹ ಕಾರ್ಯದರ್ಶಿಯಾಗಿ ಚಂದ್ರಶೇಖರ -ಚಿತ್ರದುರ್ಗ, ಮಂಜುನಾಥ ಭಜಂತ್ರಿ -ಹಾವೇರಿ, ರಜಾಕ ಸಾಬ್-ಧಾರವಾಡ, ಖಜಾಂಚಿಯಾಗಿ ದೀಪಾ ಬೀಳಗಿ -ಶಿರಸಿ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವೆಂಕಟೇಶ ಸಿ., ಕಾಮಾಕ್ಷಿ ಮಾಪ್ಸೆಕರ್, ಗೀತಾ ಮಡಿವಾಳ, ರಜತ್ ನಾಯ್ಕ, ಚಂದ್ರಕಾಂತ ಮರಾಠೆ, ಸುನೀಲ ಕುಮಾರ್ ನಾಯರ್, ರೂಪಾಲಿ ಗೋಸಾವಿ, ಪವಿತ್ರಾ ನಾಯ್ಕ, ಶಿವರಾಮ ದೇಸಾಯಿ, ಚಾಂದಸಾಬ್ ಆಯ್ಕೆಯಾದರು.
ಜಿಲ್ಲಾ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ಚಂದ್ರಕಾಂತ ಮರಾಠೆ, ಜಿಲ್ಲಾ ಉಪಾಧ್ಯಕ್ಷರಾಗಿ ಗೀತಾ ಮಡಿವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಮರಾಠೆ, ಜಿಲ್ಲಾ ಸಹಕಾರ್ಯದರ್ಶಿಯಾಗಿ ರಜತ್ ನಾಯ್ಕ, ಕೊಸಾವ್ ಡಿಸೋಜ, ಜಿಲ್ಲಾ ಖಜಾಂಚಿಯಾಗಿ ಸರೋಜಾ ಭಟ್ಟ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಭಿಜಿತ್ ಬಿಳಗಿ, ಪರಶುರಾಮ ಮರಸ್ಕರ, ಕಾಮಾಕ್ಷಿ ಮಾಪ್ಸೆಕರ್, ಸುಭಾಸ ಗಾಂವ್ಕರ, ರಾಜಕುಮಾರ ಗಾಂವ್ಕರ, ತುಕಾರಾಮ ಪಾಟೀಲ, ಚನ್ನಪ್ಪ ಗೌಡ, ಪ್ರಿಯಾ ಪಟಗಾರ, ಪೂಜಾ ಆಚಾರಿ, ಲಕ್ಷ್ಮೀ ನಾಯ್ಕ, ಸೋಮನಾಥ ಕುಂಬಾರಕಾರ ಅವರನ್ನು ಆಯ್ಕೆ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.