- ಶ್ರೀ ಕೃಷ್ಣ ಸಂಧಾನ, ಮೋಳಿಗೆ ಮಾರಯ್ಯ, ಸರಸ್ವತಿಯಾಗಲೊಲ್ಲೆ ನಾಟಕಗಳ ಪ್ರದರ್ಶನ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗ ಚಟುವಟಿಕೆಗಳ ಮೂಲಕ ರಂಗಭೂಮಿ ಕಲೆ ಜೀವಂತವಾಗಿ ಇರಿಸುವಲ್ಲಿ ಅಭಿವ್ಯಕ್ತಿ ಹೊನ್ನಾಳಿ ತಂಡ ತನ್ನದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. 1980ರಲ್ಲಿ ಪ್ರಾರಂಭಗೊಂಡು ಇಂದಿಗೆ 45 ವಸಂತಗಳನ್ನು ಕಳೆದಿದೆ. ಇದರೊಂದಿಗೆ ಯುವಶಕ್ತಿ ಒಕ್ಕೂಟ ಕೂಡ ಕೈ ಜೋಡಿಸಿಕೊಂಡು ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ರಂಗಕಲೆಗಳ ಪೋಷಿಸಲು ಶ್ರಮಿಸಿವೆ ಎಂದರು.
ಫೆ.4ರಂದು ಶ್ರೀ ಕೃಷ್ಠ ಸಂಧಾನ ಹಾಸ್ಯ ನಾಟಕ ಪ್ರದರ್ಶಿಸಲಿದ್ದು, ವಿ.ಎನ್.ಅಶ್ವಥ್ ರಚನೆ, ಭಿಮೇಶ್ ಎಚ್.ಎನ್. ದಾವಣಗೆರೆ ನಿರ್ದೇಶನವಿದೆ. ಫೆ.5ರಂದು ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನವಿದ್ದು, ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿದ್ದು, ಪರಿಕರ ಸಹಕಾರ ರಾಮಚಂದ್ರ ಶೇರೀಕಾರ್, ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ಜಗದೀಶ್ ಆರ್. ಜಾಣಿ ಅವರದಾಗಿದೆ ಎಂದರು.3ನೇ ದಿನವಾದ ಫೆ.6ಂದು ಸಾವಿತ್ರಿ ಬಾಯಿ ಫುಲೆ ಅವರ ಅಕ್ಷರಯಾನ ಕುರಿತು ಹೇಳುವ ಸರಸತಿಯಾಗಲೊಲ್ಲೆ ನಾಟಕವಿದ್ದು, ಡಾ.ಎಂ. ಭೈರೇಗೌಡ ರಚನೆ, ಸಂಗೀತ ಉಮೇಶ್ ಪತ್ತಾರ್ ಮತ್ತು ಶುಭಕರ ಪುತ್ತೂರು, ಪರಿಕರ ಸಹಕಾರ ರಾಮಚಂದ್ರ ಶೇರೀಕಾರ್, ನಿರ್ದೇಶನ ನವೀನ್ ಭೂಮಿ ಅವರದಾಗಿದೆ ಎಂದು ಮಾಹಿತಿ ನೀಡಿದರು.
ಯುವಶಕ್ತಿ ಒಕ್ಕೂಟಕ ಕೆ.ವಿ.ಚನ್ನಪ್ಪ, ವಕೀಲರಾದ ಮಡಿವಾಲ ಚಂದ್ರಪ್ಪ, ಕತ್ತಿಗೆ ನಾಗರಾಜ್, ಅಭಿವ್ಯಕ್ತಿ ತಂಡದ ಕಲಾವಿದರು, ಯುವಶಕ್ತಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.
- - - -ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿಯಲ್ಲಿ ಅಭಿವ್ಯಕ್ತಿ ಕಲಾ ತಂಡದ ಸತ್ತಿಗೆ ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.