ಜನವರಿ 9ರಿಂದ 3 ದಿನ ರಿಕಾನ್‌-2026 ಎಕ್ಸ್‌ ಪೋ

KannadaprabhaNewsNetwork |  
Published : Nov 11, 2025, 02:30 AM IST
ಮದಮದಮ | Kannada Prabha

ಸಾರಾಂಶ

ಕ್ರಡೈ ಸಂಸ್ಥೆಯ ವತಿಯಿಂದ ಜ. 9,10 ಹಾಗೂ 11ರಂದು ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್ ಎದುರಿನ 6 ಎಕರೆ ಪ್ರದೇಶದಲ್ಲಿ ''''ರಿಕಾನ್-2026'''' ಪ್ರಾಪರ್ಟಿ ಮತ್ತು ಕನಸ್ಟ್ರಕ್ಷನ್ ಮಟೀರಿಯಲ್‌ಗಳ ಅತೀ ದೊಡ್ಡ ಎಕ್ಸ್ ಪೋ ಆಯೋಜಿಸಲಾಗಿದೆ.

ಹುಬ್ಬಳ್ಳಿ:

ಕ್ರಡೈ ಸಂಸ್ಥೆಯ ವತಿಯಿಂದ ಜ. 9,10 ಹಾಗೂ 11ರಂದು ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್ ಎದುರಿನ 6 ಎಕರೆ ಪ್ರದೇಶದಲ್ಲಿ ''''''''ರಿಕಾನ್-2026'''''''' ಪ್ರಾಪರ್ಟಿ ಮತ್ತು ಕನಸ್ಟ್ರಕ್ಷನ್ ಮಟೀರಿಯಲ್‌ಗಳ ಅತೀ ದೊಡ್ಡ ಎಕ್ಸ್ ಪೋ ಆಯೋಜಿಸಲಾಗಿದೆ ಎಂದು ಕ್ರಡೈ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷ ಗುರುರಾಜ ಅಣ್ಣಿಗೇರಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕ್ರಡೈ ಯೂಥ್ ವಿಂಗ್‌ನ ನೂತನ ಕೋರ್ ಕಮಿಟಿಯ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂದಾಜು 1.5 ಲಕ್ಷ ಚದರ ಅಡಿಯ ವಿಸ್ತೀರ್ಣದಲ್ಲಿ ಎಕ್ಸ್ ಪೋ ಆಯೋಜಿಸಲು ನಿರ್ಣಯಿಸಲಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ 150 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಶೇ. 50ರಷ್ಟು ಮಳಿಗೆಗಳು ಮಾರಾಟವಾಗಿವೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಉದ್ಯಮಿಗಳೂ ಪಾಲ್ಗೊಳ್ಳುತ್ತಿದ್ದು, ಉತ್ತರ ಕರ್ನಾಟಕದಲ್ಲೇ ಮೊಟ್ಟ ಮೊದಲ ಬೃಹತ್ ಎಕ್ಸ್ ಪೋ ಇದಾಗಿದೆ ಎಂದು ಮಾಹಿತಿ ನೀಡಿದರು.

ಕ್ರಡೈ ಹು-ಧಾ ಘಟಕದ ವತಿಯಿಂದ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದು, ''''''''ಹಸಿರು'''''''' ಎಂಬ ಧ್ಯೇಯ ವಾಕ್ಯದಡಿ, ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ ಸುಮಾರು 200ಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ. ಭೈರಿದೇವರಕೊಪ್ಪದಿಂದ ಎಪಿಎಂಸಿ ವರೆಗೆ ಪ್ರದೇಶವನ್ನು ಮೀಡಿಯನ್ ಮಾಡಿಕೊಂಡು 250 ಸಸಿಗಳನ್ನು ನೆಡಲಾಗಿದೆ. ತನ್ಮೂಲಕ ಕ್ರಡೈ ಸಂಸ್ಥೆ ಮನೆಗಳ ನಿರ್ಮಾಣದ ಜತೆ-ಜತೆಗೆ ಪರಿಸರ ನಿರ್ಮಾಣದ ನಿರ್ಮಾತೃವಾಗಿ ಹೊರ ಹೊಮ್ಮಿದೆ ಎಂದರು.

ಕ್ರಡೈ ಕರ್ನಾಟಕದ ನಿರ್ಗಮಿತ ಅಧ್ಯಕ್ಷ ಪ್ರದೀಪ ರಾಯ್ಕರ್ ಮಾತನಾಡಿ, ಕ್ರಡೈ ಯೂಥ್ ಘಟಕವು ಕ್ರಡೈ ಹು-ಧಾ ಘಟಕಕ್ಕೆ ಬೆನ್ನೆಲುಬು ಇದ್ದಂತೆ. ಇದು‌ ಕೇವಲ ಹು-ಧಾ ಮಹಾನಗರಕ್ಕೆ ಸೀಮಿತವಾಗದೆ ರಾಷ್ಟ್ರವ್ಯಾಪಿ ಆಗಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಘಟಕವೂ ಅಸ್ತಿತ್ವಕ್ಕೆ ಬರಲಿದ್ದು, ಮಹಿಳೆಯರಲ್ಲಿನ ಪ್ರತಿಭೆಯನ್ನು ಹೊರ ತರಲು ಇದು ಸಹಕಾರಿ ಆಗಲಿದೆ ಎಂದು ಹೇಳಿದರು.

ಕ್ರಡೈ ಯೂಥ್ ವಿಂಗ್‌ನ ನೂತನ ಕೋ ಆರ್ಡಿನೇಟರ್ ಝಾಯಿದ್ ಸಂಶಿ ಹಾಗೂ ಜಾಯಿಂಟ್ ಸೆಕ್ರೆಟರಿ ವಿನಾಯಕ ಚಾಟ್ನಿ ಮಾತನಾಡಿದರು. ಕ್ರಡೈ ಹು-ಧಾ ಘಟಕದ ಚೇರ್‌ಮನ್‌ ಸಂಜಯ ಕೊಠಾರಿ, ಮೆಂಟರ್ ಇಸ್ಮಾಯಿಲ್ ಸಂಶಿ, ಪ್ರೆಸಿಡೆಂಟ್ ಇಲೆಕ್ಟ್ ಅಮೃತ ಮೆಹರವಾಡೆ, ಕ್ರಡೈ ಯೂಥ್ ವಿಂಗ್‌ನ ನೂತನ ಕೋರ್ ಕಮಿಟಿಯ ಸೆಕ್ರೆಟರಿ ಗೌರವ ಕೊಠಾರಿ, ಕ್ರಡೈ ಯೂಥ್ ವಿಂಗ್‌ನ ಸೂಫಿಯಾನ್ ಸಂಶಿ, ವಿಶಾಲ ಮೊಗಜಿಕೊಂಡಿ, ನಾಗೇಂದ್ರ ಹಬೀಬ, ತೇಜಸ್ ಕಲಬುರ್ಗಿ, ನಿಖಿಲ ಶೇಜವಾಡ್ಕರ್, ಕಾರ್ತಿಕ ಶೆಟ್ಟಿ, ರಾಜ್ ಜೈನ್, ವೃಷಬ್ ತೆಲಿಸಾರಾ, ಕೇದಾರ್ ಎಂ. ಹಾಗೂ ಅಭಿಷೇಕ ಮಗಜಿಕೊಂಡಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ