- ತಾಲೂಕಿನಲ್ಲಿರುವ 4ರಲ್ಲಿ 3 ಆ್ಯಂಬುಲೆನ್ಸ್ ದುರಸ್ಥಿ । 108ಕ್ಕೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಬರಲು ಗಂಟೆಗಟ್ಟಲೆ ಬೇಕು
ತಾಲೂಕಿನಲ್ಲಿರುವ ನಾಲ್ಕು 108 ಆ್ಯಂಬುಲೆನ್ಸ್ ವಾಹನಗಳಲ್ಲಿ 3 ಆ್ಯಂಬುಲೆನ್ಸ್ ಕೆಟ್ಟಿರುವ ಕಾರಣ ಅಪಘಾತ ಹಾಗೂ ಇನ್ನಿತರ ತುರ್ತು ಅಹಿತರಕ ಘಟನೆಗಳಲ್ಲಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಕನಿಷ್ಟ ೧೦೮ ಆ್ಯಂಬುಲೆನ್ಸ್ ಕೊಡುವ ಕೆಲಸ ಆಗಬೇಕಿದೆ.
ರಾಜ್ಯ ಸರ್ಕಾರ ಸಾರ್ವಜನಿಕರ ತುರ್ತು ಆರೋಗ್ಯದ ಜೊತೆಗೆ ಅಪಘಾತ ಸೇರಿದಂತೆ ಇನ್ನಿತರ ಅವಘಡಗಳಿಗೆ ತುರ್ತಾಗಿ ಬೇಕಲೇ ಬೇಕಾದ 108 ವಾಹನ ಕೊಡಿಸಲು ಆಗದ ಹಿನ್ನಲೆ ತಾಲೂಕಿನ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ 108 ಆ್ಯಂಬುಲೆನ್ಸ್ ಸಂಚರಿಸುತ್ತಿದೆ. ಆದರೆ ತಾಲೂಕಿನ ಕಬ್ಬಹಳ್ಳಿ ಹಾಗೂ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿರುತ್ತಿದ್ದ 108 ಆ್ಯಂಬುಲೆನ್ ವಾಹನ ಕೆಟ್ಟು ನಿಂತಿರುವುದೇ ತಾಲೂಕಿನಲ್ಲಿ 108 ಆ್ಯಂಬುಲೆನ್ಸ್ ವಾಹನ ಇಲ್ಲದೆ ಜನರು ಪಾಡು ಹೇಳತೀರದಾಗಿದೆ.
ತಾಲೂಕಿನ ಬೇಗೂರು, ಕಬ್ಬಹಳ್ಳಿ ಹಾಗೂ ತೆರಕಣಾಂಬಿ ಆಸ್ಪತ್ರೆಯಲ್ಲಿ ನಿಲ್ಲುವ 108 ಆ್ಯಂಬುಲೆನ್ಸ್‌ಗಳು ಕೆಟ್ಟಿವೆ. ಅದರಲ್ಲಿ ಬೇಗೂರು ಆಸ್ಪತ್ರೆಯ ಆ್ಯಂಬುಲೆನ್ಸ್ ವೈರಿಂಗ್ ಹಾಳಾಗಿದೆ. ಒಂದೆರಡು ದಿನಗಳಲ್ಲಿ ಬರಲಿದೆ ಎನ್ನಲಾಗುತ್ತಿದೆ. ಅದು ರಿಪೇರಿ ಆಗುವ ತನಕ ಜನರು ಕಾಯಬೇಕಿದೆ.
ಗುಂಡ್ಲುಪೇಟೆ, ಬೇಗೂರು, ಕಬ್ಬಹಳ್ಳಿ ಹಾಗೂ ತೆರಕಣಾಂಬಿ ಆಸ್ಪತ್ರೆಯಲ್ಲಿನ ಆ್ಯಂಬುಲೆನ್ಸ್‌ಗಳಲ್ಲಿ 3 ಕೆಟ್ಟಿವೆ. ಬೇಗೂರು ಆಸ್ಪತ್ರೆಯದು ರಿಪೇರಿಯಾಗಿ ಬರಲಿದೆ. ಕಬ್ಬಹಳ್ಳಿ ಹಾಗೂ ತೆರಕಣಾಂಬಿ ಆಸ್ಪತ್ರೆಗೆ ಬೇರೆ ಆ್ಯಂಬುಲೆನ್ಸ್ ಬರಬೇಕು ಅಲ್ಲಿಯ ತನಕ ಕಾಯಬೇಕಿದೆ ಎಂದು 108 ಆ್ಯಂಬುಲೆನ್ಸ್ ಉಸ್ತುವಾರಿ ರಿತೀಶ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಜನರ ಆರೋಗ್ಯ ಹಾಗೂ ತುರ್ತು ಸಮಯದಲ್ಲಿ ಆ್ಯಂಬುಲೆನ್ಸ್ ಇಲ್ಲದ ವೇಳೆ ಜನರ ಪ್ರಾಣ ಹೋಗುವ ಸಾಧ್ಯತೆ ಹೆಚ್ಚಿರುವ ಕಾರಣ ರಾಜ್ಯ ಸರ್ಕಾರ ಕೆಟ್ಟು ನಿಂತ ಹಾಗೂ ಹಳೆಯದಾದ ಆ್ಯಂಬುಲೆನ್ಸ್‌ಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.
ಕೋಟ್...
- ಡಾ.ಬಿ.ಆರ್. ಅಲೀಂ ಪಾಷಾ, ಆರೋಗ್ಯಾಧಿಕಾರಿ
ಕೋಟ್...
ಆ್ಯಂಬುಲೆನ್ಸ್ ಇಲ್ಲದೇ ಸಾವುತಾಲೂಕಿನ ಕುರುಬರಹುಂಡಿ ಬಳಿ ಎರಡು ದಿನಗಳ ಹಿಂದೆ ಬೈಕ್ ಅಪಘಾತವಾದ ಬಳಿಕ 108 ಆ್ಯಂಬುಲೆನ್ಸ್ ಕರೆ ಮಾಡಿದರೂ ಒಂದೂವರೆ ಗಂಟೆಯಾದರೂ ಬರಲಿಲ್ಲ. ಪೊಲೀಸರ ವಾಹನದಲ್ಲಿ ಗಾಯಾಳುಗಳನ್ನು ಸಾಗಿಸಲಾಗಿದೆ. ತಾಲೂಕಿನ ಮಾಡಹಳ್ಳಿ ಬಳಿಯೂ ಸೋಮವಾರ ವ್ಯಕ್ತಿಯೊಬ್ಬರು ರಾತ್ರಿ ಬೈಕ್‌ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಆ್ಯಂಬುಲೆನ್ಸ್ ಬಂದಿದ್ದರೆ ಬದುಕುತ್ತಿದ್ದರು. ಹೆಚ್ಚುವರಿ ಆ್ಯಂಬುಲೆನ್ಸ್ ಬಿಡಲಿ.
-ಪ್ರದೀಪ್, ರಾಜೇಶ್, ಪ್ರತ್ಯೇಕ್ಷದರ್ಶಿಗಳು