ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ನಿಸರ್ಗ ಪದವಿ ಪೂರ್ವ ಕಾಲೇಜು ಶೇ.95ರಷ್ಟು ಫಲಿತಾಂಶಗಳಿಸುವ ಜೊತೆಗೆ ಇಲ್ಲಿನ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಮೂವರು ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವ ಮೂಲಕ ಜಿಲ್ಲಾ ಟಾಪರ್ ಗಳಾಗಿ ಹೊರಹೊಮ್ಮಿ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಮೃತಗೆ 584 ಅಂಕ, ವಾಣಿಜ್ಯ ವಿಭಾಗದ ಮಹೇಶ್‌ಗೆ 589, ಕಲಾ ವಿಭಾಗದಲ್ಲಿ ಅಶ್ವಿನಿ 573 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಜಿಲ್ಲಾ ಪಟ್ಚಿಯಲ್ಲಿ ಪ್ರಥಮ ಸ್ಥಾನಕ್ಕೆ ಭಾಜನರಾದ ಮೂವರು ವಿದ್ಯಾರ್ಥಿಗಳು ಸಹ ಗ್ರಾಮೀಣ ಭಾಗದಿಂದ ಕೊಳ್ಳೇಗಾಲ ಪಟ್ಟಣಕ್ಕಾಗಿ ಅಧ್ಯಯನಕ್ಕೆ ಬಂದ ರೈತರ ಮಕ್ಕಳು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಅಮೃತ, ಯಳಂದೂರು ತಾಲೂಕಿನ ಮೆಲ್ಲಳ್ಳಿ ಮಾಳ ಗ್ರಾಮದವಳು. ಮಹೇಶ್ ಸತ್ತೇಗಾಲ ಸಮೀಪದ ಅಗ್ರಹಾರದ ವಾಸಿ, ಅಶ್ವಿನಿ ಹೂಗ್ಯಂ ಗ್ರಾಮದ ವಾಸಿಯಾಗಿದ್ದಾರೆ.ಕಾಲೇಜಿಗೆ 95ರ ಫಲಿತಾಂಶ:
ಪರೀಕ್ಷೆಗೆ ಹಾಜರಾದ 425 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಈ ಪೈಕಿ 111 ಮಂದಿ ಅತ್ಯುನ್ನತ, 279 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 25 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, 10 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಇಲ್ಲಿನ ವಿದ್ಯಾರ್ಥಿಗಳು ಭಾಜನರಾಗಿ ಗಮನ ಸೆಳೆದಿದ್ದಾರೆ.75 ವಿದ್ಯಾರ್ಥಿಗಳು ಅತ್ಯುನ್ನತ, 145 ವಿದ್ಯಾರ್ಥಿಗಳು ಪ್ರಥಮ, 5 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಈ ಪೈಕಿ ಅಮೃತ 584, ಪ್ರಿಯ 583, , ಯತಿನ್‌ಗೌಡ 583, ಜೀವನ್ 581, ಭಾಸ್ಕರ್ 579, ತನುಜಾ 573, ಚಿನ್ಮಯ ಪ್ರಸಾದ್ 573, ಯಶಸ್ವಿನಿ 572, ಸಿಂಚನ 572, ನವೀನ್‌ಕುಮಾರ್ 569, ವೈಷ್ಣವ್ 569, ಸ್ವರ್ಣ 569, ಯಶಸ್ವಿಕಾರಶ್ಮಿ 569, ದೀಕ್ಷಿತ 568, ನಿಸರ್ಗ 566, ಅಮೂಲ್ಯ 566, ತನುಶ್ರೀ 565, ಮೋನಿಷಾ 563, ಮಹರ್ಷಿಜಿ 562, ಪ್ರತಿಭಾ 561, ಕೀರ್ತನಾ 558, ಪ್ರಜ್ವಲ್‌ಕುಮಾರ್ 558, ಮಹದೇವ ಪ್ರಭು 555, ಸಂಜನಾ 555, ಭೂಮಿಕಾ 554, 554, ಜಾನವಿ 552, ದಿನು ಮೌರ್ಯ 551, ಮಲ್ಲಿಕಾರ್ಜುನ ದ್ಯಾವಪ್ಪ ಹಲ್ಯಾಲ 551, ಯಶಸ್ವಿನಿ 551, ಮನೋಜ್ 551, ಜೆಆರ್‌ಕಿರಣ 550, ರಕ್ಷಾ 550, ಯಶ್ಮಿತಾ ಬೈಲೆ 550, ಪ್ರಜ್ವಲ್‌ಗೌಡ 550, ಸಂಜಯ್ 550, ಪ್ರೀತಮ್ 549, ಮಾನಸ 549, ಐಶ್ವರ್ಯ 547, ಅಮೃತ 547, ಮೇಘನಾ 547, ಪವಿತ್ರ 547, ಧ್ಯಾನ್ 545, ಪ್ರೀತಮ್ 544, ದೀಪ್ತಿ 544, ಜಯಲಕ್ಷ್ಮಿ 544, ಅಜಯ್ 537, ಅಮೂಲ್ಯ 537, ಮಂಗಳಗೌರಿ 536, ಸಂಜಯ್ 536, ಸಂಜನ 532, ದಿಶಾ 530, ಅಮೂಲ್ಯ 530, ದಿಲೀಪ್‌ಕುಮಾರ್ 530, ಏಂಜಲ್ ರೋಜ್ 529, ಅಕ್ಷಯ್ 529, ಚಂದನ 528, ಐಶ್ವರ್ಯ 527, ಮಹಾಂತೇಶ್ 527, ಲಕ್ಷ್ಮಿ 525, ದರ್ಶನ 523, ಲೋಚನಾ 522, ಕಾರ್ತಿಕ್ 522, ಚಂದನ್ 520, ತ್ರಿಶಾ 519, ಐಶ್ವರ್ಯ 517, ಶ್ರೀದೇವಿ 517, ಶಿಲ್ಪಾ 517, ತೇಜಸ್ 514, ಕಾವ್ಯ 513, ಸುನಂದ 512, ನವ್ಯಶ್ರೀ 512, ರಿಷಿಕೇಶ್ 511, ಪವನ್‌ಕುಮಾರ್ 511, ಜ್ಯೋತಿ 510 ಅಂಕಗಳಿಸಿ ಸಾಧನೆಗೈದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ನಿಸರ್ಗ ಕಾಲೇಜು ಜಿಲ್ಲೆಗೆ ಪ್ರಥಮ ಮತ್ತು ತೃತೀಯ ಸ್ಥಾನ ಗಳಿಸಿದೆ. ಮಹೇಶ್ 589, ತನುಶ್ರೀ 584, ನೇತ್ರ 579, ಮಹದೇವಕುಮಾರ್ 575, ಮಂಥನ್ 569, ಮನು 566, ಮನೋಜ್‌ಗೌಡ 565, ಸಂಜನಾ 561, ಕೀರ್ತನ 559, ಜೈ ಭಾಸ್ಕರ್ 555, ಮೌಲ್ಯ 555, ಆಲಿಯಾನಾಜ್ 552, ಭರತ್ 551, ಚೈತನ್ಯ 551, ರಾಕೇಶ್‌ಗೌಡ 589, ದರ್ಶನ 545, ರಂಗನಾಥ 540, ಕೀರ್ತನ 536, ಪಲ್ಲವಿ 535, ಗೌತಮ್ 523, ಮಾನ್ಯಶ್ರೀ 532, ಅನನ್ಯ 530, ಅಮೂಲ್ಯ 529, ದೇವಿ 528, ಐಶ್ವರ್ಯ523, ರೇಖಾ 517, , ದೀಕ್ಷಿತ್ 517, , ಶ್ರೇಯಾ 515, ದರ್ಶನ್ 511, ಶಿವಿಬಾಯಿ 510 ಅಂಕಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಶೇ.88ರಷ್ಟು ಫಲಿತಾಂಶ ಬಂದಿದ್ದು ಜಿಲ್ಲೆಗೆ ವಿದ್ಯಾರ್ಥಿನಿ ಅಶ್ವಿನಿ 573 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಉಳಿದಂತೆ ವಿಜಯ್ 558, ಶಿವಪ್ರಸಾದ್ 551, ಜಮುನಾ 546, ಮೋನಿಷಾ 519, ಮಹೇಂದ್ರ 512 ಅಂಕಗಳಿಸಿದ್ದು ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್ ಪ್ರಾಂಶುಪಾಲ ಕೃಷ್ಣೆಗೌಡ, ಸಂಯೋಜನಾಧಿಕಾರಿ ಡಾ. ನಾಗಭೂಷಣ, ನಾಗೇಂದ್ರಕುಮಾರ್, ರಾಮಕೃಷ್ಣ ಇನ್ನಿತರರು ಅಭಿನಂದಿಸಿದ್ದಾರೆ.ವೈದ್ಯಳಾಗುವಾಸೆ: ಅಮೃತ
ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಕ್ಕೆ ಭಾಜನಳಾದ ವಿದ್ಯಾರ್ಥಿನಿ ಅಮೃತಾಗೆ ವೈದ್ಯಳಾಗಿ ಗ್ರಾಮೀಣ ಭಾಗದ ಜನರ ಸೇವೆ ಮಾಡುವಾಸೆ. ಯಳಂದೂರು ತಾಲೂಕಿನ ಮೆಲ್ಲಳ್ಳಿ ಮಾಳದ ವಿದ್ಯಾರ್ಥಿನಿ ಅಮೃತ ರೈತನ ಪುತ್ರಿ ಎಂಬುದು ವಿಶೇಷ. ಈಕೆ ತನ್ನ ಸಂಬಂಧಿ ಮನೆಯಲ್ಲೆ ಕೊಳ್ಳೇಗಾಲದಲ್ಲಿ ಉಳಿದುಕೊಂಡು 584 ಅಂಕಗಳಿಸಿ ಸಾದನೆಗೈದಿದ್ದಾರೆ. ನಾನು ಇನ್ನು ಹೆಚ್ಚಿನ ಅಂಕ ನಿರೀಕ್ಷಿಸಿದ್ದೆ, ಈ ಸಾಧನೆ ಸಂತಸ ತಂದಿದೆ. ಈ ಸಾಧನೆ ಹಿಂದೆ ನಮ್ಮ ಪೋಷಕರು, ಗುರುಗಳ ಸಹಕಾರವಿದೆ, ಹೆಚ್ಚು ಹೆಚ್ಚು ವಿಶೇಷ ತರಗತಿಗಳನ್ನು ಕಾಲೇಜಿನಲ್ಲಿ ನಡೆಸುತ್ತಿದ್ದು ಸಹಕಾರಿಯಾಗಿದೆ ಎನ್ನುತ್ತಾರೆ.ಕುರಿಕಾಯುವ ಮಗ ಜಿಲ್ಲೆಗೆ ಪ್ರಥಮ: ವಾಣಿಜ್ಯ ವಿಭಾಗದಲ್ಲಿ ಜಿಲ್ಲಾ ಟಾಪರ್ ಆಗಿ 589 ಅಂಕಗಳಿಸಿರುವ ಮಹೇಶ್ ಸಾಮಾನ್ಯ ರೈತ ಕುರಿ ಕಾಯುವವರ ಪುತ್ರ. ತಾಲೂಕಿನ ಸತ್ತೇಗಾಲ ಅಗ್ರಹಾರ ಗ್ರಾಮದ ಈತನಿಗೆ ಪರೀಕ್ಷೆಯಲ್ಲಿ ತಾನು ಅಂದುಕೊಂಡದ್ದಕ್ಕಿಂತ ಹೆಚ್ಚು ಅಂಕಪಡೆದ ತೃಪ್ತಿ ಇದೆ. ಇಷ್ಚು ಅಂಕ ನಿರೀಕ್ಷಿಸಿರಲಿಲ್ಲ, ಈ ಸಾಧನೆ ನನಗೆ ಸಂತಸ ತಂದಿದೆ ಕೆಎಎಸ್ ಮಾಡಬೇಕೆಂಬ ಮಹಾದಾಸೆ ನನ್ನದು ಎಂದು ಕನ್ನಡಪ್ರಭದೊಂದಿಗೆ ತನ್ನ ಅಭಿಲಾಷೆ ಹಂಚಿಕೊಂಡರು.ಐಎಎಸ್ ಮಾಡುವಾಸೆ:ಹೂಗ್ಯಂ ವಿದ್ಯಾರ್ಥಿನಿ ಅಶ್ವಿನಿ ಐಎಎಸ್ ಮಾಡುವಾಸೆಯನ್ನು ಕನ್ನಡಪ್ರಭದ ಜೊತೆ ವ್ಯಕ್ತಪಡಿಸಿದರು. ಜಿಲ್ಲಾ ಟಾಪರ್ ಆಗಿರುವುದಕ್ಕೆ ಸಂತಸ ತಂದಿದೆ. ನನ್ನ ಸಾಧನೆಗೆ ಪೋಷಕರು, ಗುರುಗಳ ಸಹಕಾರ ಕಾರಣ. ಇನ್ನು ಹೆಚ್ಚು ಅಂಕ ನಿರೀಕ್ಷಿಸಿದ್ದೆ ಎನ್ನುತ್ತಾರೆ.