22ರಂದು ಮುಂಡರಗಿಯಲ್ಲಿ 30 ಜೋಡಿ ಸಾಮೂಹಿಕ ವಿವಾಹ

KannadaprabhaNewsNetwork |  
Published : Nov 20, 2025, 01:00 AM IST
ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ವೀರಭದ್ರೇಶ್ವರ ಸೇವಾ ಸಮಿತಿ ಖಜಾಂಚಿ ವಿ.ಜೆ. ಹಿರೇಮಠ ಮಾತನಾಡಿ, ನ. 22ರಂದು ಜರುಗಲಿರುವ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸುವರು

ಮುಂಡರಗಿ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ನ. 21 ಹಾಗೂ ನ. 22ರಂದು ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ನ. 22ರಂದು ಬೆಳಗ್ಗೆ 11 ಗಂಟೆಗೆ 30 ಜೋಡಿ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಜರುಗಲಿದೆ ಎಂದು ವೀರಭದ್ರೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಎಸ್.ವಿ. ಲಿಂಬಿಕಾಯಿ ತಿಳಿಸಿದರು.ಬುಧವಾರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಕಾಲ ಜರುಗಲಿದ್ದು, ಜಾತ್ರಾ ಮಹೋತ್ಸವದ ಪ್ರಯಕ್ತ ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ನ. 21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಗದುಗಿನ ಕೆಎಚ್‌ಪಿಐಎಂಎಸ್ ತಜ್ಞ ವೈದ್ಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಗದುಗಿನ ಅಂಬಿಕಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರ ನಡೆಯಲಿದೆ. ಸಂಜೆ 4 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರನ ಅದ್ಧೂರಿ ಪಲ್ಲಕ್ಕಿ ಉತ್ಸವ ಜರುಗಲಿದೆ.ವೀರಭದ್ರೇಶ್ವರ ಸೇವಾ ಸಮಿತಿ ಖಜಾಂಚಿ ವಿ.ಜೆ. ಹಿರೇಮಠ ಮಾತನಾಡಿ, ನ. 22ರಂದು ಜರುಗಲಿರುವ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸುವರು. ಕನಕಗಿರಿ ಸುವರ್ಣಗಿರಿ ಸಂಸ್ಥಾನಮಠದ ಡಾ. ಚನ್ನಮಲ್ಲ ಸ್ವಾಮೀಜಿ ಉಚಿತ ವಿವಾಹ ಸಮಾರಂಭದ ನೇತೃತ್ವ ವಹಿಸುವರು. ಸೇವಾ ಸಮಿತಿಯ ಅಧ್ಯಕ್ಷ ಎಸ್.ವಿ. ಲಿಂಬಿಕಾಯಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಪಟ್ಟಣದ ಯುವ ಉದ್ಯಮಿ ಅನಂತ ಚಿತ್ರಗಾರಗೆ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಂಜೆ ೬.೩೦ ಗಂಟೆಗೆ ವೀರಭದ್ರೇಶ್ವರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಸಹಸ್ರ ದೀಪೋತ್ಸವ ಜರುಗಲಿದೆ ಎಂದರು.ಜಾತ್ರಾ ಸಮಿತಿ ಅಧ್ಯಕ್ಷ ವೀರೇಶ ತುಪ್ಪದ, ಮಹಿಳಾ ವೇದಿಕೆಯ ಅಧ್ಯಕ್ಷೆ ಗೌರಮ್ಮ ಹುರಕಡ್ಲಿ, ಮುಖಂಡರಾದ ಸಾಯಿಪ್ರಸನ್ ಅಳವಂಡಿ, ಶರಣಪ್ಪ ಕರಡಿ, ಶರಣಪ್ಪ ಮುರಗಿ, ವಿನಾಯಕ ಗಂಧದ, ಕಾಶೀನಾಥ ಬಿಳಿಮಗ್ಗದ, ವೀರೇಶ ಸಜ್ಜನರ, ರವಿಗೌಡ ಪಾಟೀಲ, ಎಂ.ಬಿ. ಗದಗ, ಅಪ್ಪಣ್ಣ ಜಿಡ್ಡಿ, ಗೀತಾ ಬಣಕಾರ, ರೋಹಿಣಿ ಕುಬಸದ, ನೇತ್ರಾ ಗದಗ, ಜಯಣ್ಣ ಗುಜ್ಜರ, ನಂಜುಂಡೇಶ ಲಿಂಬಿಕಾಯಿ, ವೀರಭದ್ರಪ್ಪ ಮೇಟಿ, ನಾಗಪ್ಪ ಕುಬಸದ, ಮುತ್ತಣ್ಣ ಬಣಕಾರ, ವೀರಣ್ಣ ಕಾಸಿಗವಿ, ಸಂತೋಷ ಬಳ್ಳೊಳ್ಳಿ, ಜಗದೀಶ ಹೊರಡಿ, ಶಾಂತಯ್ಯ ಇಟಗಿಮಠ, ವಾಣಿ ಬಳ್ಳೊಳ್ಳಿ, ಅನ್ನಪೂರ್ಣಾ ಬೆಲ್ಲದ, ವಿಜಯಲಕ್ಷ್ಮಿ ಲಿಂಬಿಕಾಯಿ, ಉಮಾ ಹಾವಿನಾಳ, ಲೀಲಾ ಅಕ್ಕೂರ, ಶೃತಿ ಕೊರಡಕೇರಿ, ಸಂಗೀತಾ ಕೊರಡಕೇರಿ, ಲತಾ ಕಡ್ಡಿ, ಕಲ್ಪನಾ ಕಡ್ಡಿ ಉಪಸ್ಥಿತರಿದ್ದರು.

PREV

Recommended Stories

ಬೇಡಿಕೆ ಪಟ್ಟಿ ಸಲ್ಲಿಸಿ ನರೇಗಾ ಸೌಲಭ್ಯ ಪಡೆಯಿರಿ
ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ನ. 24ರಂದು ಹಾವೇರಿ ಡಿಸಿ ಕಚೇರಿ ಮುತ್ತಿಗೆ