ದಾಬಸ್‍ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು ಕಾಲೋನಿಗಳ ಅಭಿವೃದ್ದಿಗೆ 30 ಕೋಟಿ ಅನುದಾನ ಬಿಡುಗಡೆ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ದಾಬಸ್‍ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು ಕಾಲೋನಿಗಳ ಅಭಿವೃದ್ದಿಗೆ 30 ಕೋಟಿ ಅನುದಾನ ಬಿಡುಗಡೆ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಪಂ ವ್ಯಾಪ್ತಿಯ ದಾಸೇನಹಳ್ಳಿ ಗ್ರಾಮದಲ್ಲಿ ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ದಲಿತ ಕಾಲೋನಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಸುಮಾರು 15 ವರ್ಷಗಳ ಹಿಂದೆ ಮಾಡಿದ ಕಾಮಗಾರಿಗಳನ್ನು ಬಿಟ್ಟರೆ ಈ ಹಿಂದೆ ಶಾಸಕರು ದಲಿತ ಕಾಲೋನಿಗಳನ್ನು ನಿರ್ಲಕ್ಷಿಸಿರುವುದು ಗೊತ್ತಾಗುತ್ತಿದೆ. ಬಹಳ ಮುಖ್ಯವಾಗಿ ರಸ್ತೆಗಳು, ಚರಂಡಿಗಳ ಸಮಸ್ಯೆ ಎದ್ದು ಕಾಣುತ್ತಿದೆ. ಮಳೆ ಬಂದರೆ ಚರಂಡಿಗಳು ತುಂಬಿ ಕಲ್ಮಶನೀರು ರಸ್ತೆಗೆ ಹರಿಯುತ್ತವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಪರಿಶಿಷ್ಟ ಜಾತಿ ಕಾಲೋನಿಗಳ ಅಭಿವೃದ್ಧಿಗೆ 30 ಕೋಟಿ ಅನುದಾನ ತಂದು ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಶೀಘ್ರವಾಗಿ ರಸ್ತೆ ಹಾಗೂ ಚರಂಡಿ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಗ್ರಾಮಸ್ಥರೊಬ್ಬರು ನಾನು ಬಡವ ಮನೆ ಕಟ್ಟಲಿಕ್ಕೆ ಅನುದಾನ ಕೊಡುವಂತೆ ಶಾಸಕರ ಬಳಿ ಮನವಿ ಮಾಡಿದಾಗ ಆಶ್ರಯ ಯೋಜನೆಯಡಿ ಅನುದಾನ ಒದಗಿಸಲು ಪಿಡಿಒಗೆ ತಿಳಿಸಿ, ಅನುದಾನ ಸಾಕಾಗದಿದ್ದಲ್ಲಿ ವೈಯಕ್ತಿಕವಾಗಿಯೂ ಸಹಕಾರ ನೀಡುತ್ತೇನೆ ಎಂದರು.
ಬಗರುಹುಕಂ ಸಮಿತಿ ಸದಸ್ಯ ಹಾಗೂ ವಕೀಲ ಹನುಮಂತೇಗೌಡ್ರು, ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ಪಿಡಿಒ ಹರೀಶ್, ಸದಸ್ಯರಾದ ಮಾರುತಿ, ಸೋಮಲತಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಪ್ರಕಾಶ್ ಬಾಬು, ಅಪ್ಪಾಜಿ, ವಾಸುದೇವ್ ಇತರರಿದ್ದರು.
(ಡಿಸಿ ಕಾಲಂ ಸುದ್ದಿ ಸಿಂಗಲ್ ಕಾಲಂ ಫೋಟೋ)
ಪೋಟೋ 1 :
ಸೋಂಪುರ ಹೋಬಳಿಯ ದಾಸೇನಹಳ್ಳಿಯಲ್ಲಿ ಶಾಸಕ ಶ್ರೀನಿವಾಸ್ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.