ಚಿರತೆ ದಾಳಿಯಿಂದ 30 ಕುರಿಗಳು ಸಾವು: ಸ್ಥಳಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ

KannadaprabhaNewsNetwork |  
Published : Nov 17, 2026, 01:45 AM IST
16ಕೆಎಂಎನ್ ಡಿ14 | Kannada Prabha

ಸಾರಾಂಶ

ಗ್ರಾಮಕ್ಕೆ ಭೇಟಿಕೊಟ್ಟ ಸಚಿವರು, ಕುರಿ ಕೊಟ್ಟಿಗೆಯನ್ನು ಪರಿಶೀಲಿಸಿ ಕುರಿಗಾಹಿ ಸಂತ್ರಸ್ತ ಕುಟುಂಬಸ್ಥರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ನಂತರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಚಿರತೆ ದಾಳಿಗೆ ಬಲಿಯಾಗಿರುವ ಕುರಿಗಳಿಗೆ ತಲಾ 7500 ರು.ನಂತೆ ಶೀಘ್ರದಲ್ಲಿ ಪರಿಹಾರ ನೀಡುವಂತೆ ಸೂಚನೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಕೋಟೆಬೆಟ್ಟ ಗ್ರಾಮದಲ್ಲಿ ಕಳೆದ ವಾರ ಚಿರತೆ ದಾಳಿಗೆ ಸಿಲುಕಿ 30 ಕುರಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಸಂತ್ರಸ್ತ ಬಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗ್ರಾಮದ ವೆಂಕಟಲಕ್ಷ್ಮಮ್ಮ, ಮಂಜಮ್ಮ ಮತ್ತು ಭಾಗ್ಯಮ್ಮ ಎಂಬುವರಿಗೆ ಸೇರಿದ ಒಟ್ಟು 60 ಕುರಿಗಳನ್ನು ಒಂದೇ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು. ಕಳೆದ ಸೋಮವಾರ ರಾತ್ರಿ ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆಗಳು 30 ಕುರಿಗಳನ್ನು ಬಲಿಪಡೆದು 10 ಕುರಿಗಳನ್ನು ಗಂಭೀರವಾಗಿ ಗಾಯಗೊಳಿಸಿದ್ದವು. ಇದರಿಂದಾಗಿ ಕುರಿಗಾಹಿ ಬಡ ಕುಟುಂಬಕ್ಕೆ ಲಕ್ಷಾಂತರ ರು. ನಷ್ಟವಾಗಿತ್ತು.

ಸೋಮವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿಕೊಟ್ಟ ಸಚಿವರು, ಕುರಿ ಕೊಟ್ಟಿಗೆಯನ್ನು ಪರಿಶೀಲಿಸಿ ಕುರಿಗಾಹಿ ಸಂತ್ರಸ್ತ ಕುಟುಂಬಸ್ಥರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ನಂತರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಚಿರತೆ ದಾಳಿಗೆ ಬಲಿಯಾಗಿರುವ ಕುರಿಗಳಿಗೆ ತಲಾ 7500 ರು.ನಂತೆ ಶೀಘ್ರದಲ್ಲಿ ಪರಿಹಾರ ನೀಡುವಂತೆ ಸೂಚಿಸಿದರು.

ಈ ವೇಳೆ ತಾಲೂಕಿನ ಚಿಕ್ಕವೀರನಕೊಪ್ಪಲು ಗ್ರಾಮದ ಕ್ರಷರ್ ಕರೀಗೌಡ ಅವರು ಕುರಿಗಾಹಿ ಸಂತ್ರಸ್ತ ಕುಟುಂಬಸ್ಥರಿಗೆ ವೈಯುಕ್ತಿಕವಾಗಿ 15 ಸಾವಿರ ರು.ಗಳ ಚೆಕ್ ನೀಡಿದರು.

ನಂತರ ತಾಲೂಕಿನ ದೊಂದೆಮಾದಹಳ್ಳಿಗೆ ಭೇಟಿ ಕೊಟ್ಟ ಸಚಿವರು, ಇತ್ತೀಚೆಗೆ ಪಟ್ಟಣದಲ್ಲಿ ಶ್ರೀಕೋಟೆವಿದ್ಯಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದ ಗಿರೀಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿದರು.

ಈ ವೇಳೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಬಿ.ಎನ್.ವನರಾಜ್, ಸಿಂಗಾರಿಗೌಡ, ಡಿ.ಟಿ.ಕೃಷ್ಣೇಗೌಡ, ನರಸಿಂಹಮೂರ್ತಿ, ಕೆಂಚೇಗೌಡನಕೊಪ್ಪಲು ಶ್ರೀನಿವಾಸ್, ಹಾಲ್ತಿ ಗಿರೀಶ್, ತಮ್ಮಣ್ಣಗೌಡ, ಪ್ರವೀಣ್‌ಕುಮಾರ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶೀಯ ಕ್ರೀಡೆಗಳಿಂದ ಆರೋಗ್ಯ: ಹನುಮಂತಗೌಡ ಎಂ. ಗುಡಿಹಿಂದಿನ
ಯೋಗಾಸನ ಸ್ಪರ್ಧೆ: ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ