ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ನಡೆದ ಬೃಹತ್ ಹಿಂದೂ ಸಮ್ಮೇಳನದ ಶೋಭಾಯಾತ್ರೆಗೆ ಶಿವಾಜಿ ವೃತ್ತದಲ್ಲಿ ಗೋವಿನ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂ ಭಯೋತ್ಪಾದನೆ ವಿರುದ್ಧ ಹಿಂದುಗಳು ಒಂದಾದರೆ ಮಾತ್ರ ದೇಶ ಉಳಿಯುತ್ತದೆ. ಹಿಂದೂ ಸಮ್ಮೇಳನಗಳ ವಿರುದ್ಧ ಟೀಕೆ ಮಾಡುವವರು ಪಾಕಿಸ್ತಾನದ ಏಜೆಂಟರು, ನಮ್ಮ ದೇಶಕ್ಕೆ ಹುಟ್ಟಿದವರಲ್ಲ ಎಂದು ವಾಗ್ದಾಳಿ ನಡೆಸಿದರು. ನಮ್ಮ ದೇಶದಲ್ಲಿ ಹುಟ್ಟಿ ಇಸ್ಲಾಂ ತುಷ್ಟೀಕರಣ ಮಾಡುವ ರಾಜಕಾರಣಿಗಳು ಹಿಂದೂ ಸಮ್ಮೇಳನ ವಿರೋಧ ಮಾಡುತ್ತಾರೆ. ದೇಶದ ಅಭಿಮಾನ, ಹಿಂದುತ್ವ ರಕ್ತವಿದ್ದವರು ಹಿಂದೂ ಸಮ್ಮೇಳನ ವಿರೋಧ ಮಾಡಲ್ಲ ಎಂದರು.
ಆರ್‌ಎಸ್‌ಎಸ್ ವಿರುದ್ಧ ಶಾಸಕ ಶಿವಲಿಂಗೇಗೌಡ ಅವಹೇಳನಕಾರಿಯಾಗಿ ಮಾತನಾಡಿರೋ ಆರೋಪದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಶಿವಲಿಂಗೇಗೌಡರು ಆರ್‌ಎಸ್‌ಎಸ್ ಹೆಸರನ್ನು ತೆಗೆದುಕೊಂಡು ಮಾತನಾಡಿದ್ದು ವಿಷಾದ. ಸಂಘ ಯಾರನ್ನು ಟೀಕೆ ಹಾಗೂ ವ್ಯಕ್ತಿ ಪೂಜೆ ಮಾಡಲ್ಲ. ಆರ್‌ಎಸ್‌ಎಸ್ ಟೀಕೆ ಮಾಡಿದರೆ ಹೀರೋ ಆಗುತ್ತೇನೆ, ಮುಸ್ಲಿಮರನ್ನು ಖುಷಿ ಪಡಿಸುತ್ತೇನೆ ಎಂಬ ವಿಚಾರದಲ್ಲಿ ಟೀಕೆ ಮಾಡುತ್ತಾರೆ, ಇದು ದುರ್ದೈವ ಸಂಗತಿ. ಅವರಿಗೆ ಮುಸ್ಲಿಮ ಮತ ಪಡೆಯುವ ಉದ್ದೇಶ ಮಾತ್ರವಿದೆ. ದೇಶಕ್ಕಿಂತ, ಸಂವಿಧಾನಕ್ಕಿಂತ ಮುಸ್ಲಿಮರಿಗೆ ಧರ್ಮ ಬೇಕಾಗುತ್ತದೆ. ಹಿಂದೂಗಳಿಗೆ ದೇಶ ಬೇಕು ಸಂವಿಧಾನ ಬೇಕು. ಈ ಪರಿಕಲ್ಪನೆಯಲ್ಲಿ ಆರ್‌ಎಸ್‌ಎಸ್ ಹಿಂದೂ ಸಮ್ಮೇಳನ ಆಯೋಜನೆ ಮಾಡುತ್ತಿದೆ. ಹಿಂದೂ ಸಮ್ಮೇಳನ ವಿರೋಧಿಸುವ ಸಣ್ಣಪುಟ್ಟ ಚಿಲ್ಲರೆ ರಾಜಕಾರಣಿಗಳ ಮಾತು ಸೂರ್ಯಗೆ ಬೆಳಕು ಹಿಡಿದಂತೆ. ಸಂಘದ ಬಗ್ಗೆ ಮಾತನಾಡಿದಿದ್ದರೆ ರಾಹುಲಗಾಂಧಿ, ಪ್ರಿಯಾಂಕಗಾಂಧಿಗೆ ನಿದ್ದೆ ಹತ್ತುವುದಿಲ್ಲ ಎಂದರು.