ಮೊದಲ ಕಂತಿನ ಪ್ರತಿ ಟನ್ ಕಬ್ಬಿಗೆ ₹3000

KannadaprabhaNewsNetwork |  
Published : Oct 24, 2025, 01:00 AM IST
ಖಾನಾಪುರ | Kannada Prabha

ಸಾರಾಂಶ

ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮೊದಲ ಕಂತಿನ ರೂಪದಲ್ಲಿ ಪ್ರತಿ ಟನ್ ಕಬ್ಬಿಗೆ ₹3000 ದರವನ್ನು ಮತ್ತು 2ನೇ ಕಂತಿನಲ್ಲಿ ರೈತರಿಗೆ ನಷ್ಟವಾಗದ ರೀತಿಯಲ್ಲಿ ಹಾಗೂ ಸರ್ಕಾರದ ಎಫ್.ಆರ್.ಪಿ ದರದಂತೆ ನೀಡಲಾಗುವುದು ಎಂದು ಲೈಲಾ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ, ಶಾಸಕ ವಿಠ್ಠಲ ಹಲಗೇಕರ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮೊದಲ ಕಂತಿನ ರೂಪದಲ್ಲಿ ಪ್ರತಿ ಟನ್ ಕಬ್ಬಿಗೆ ₹3000 ದರವನ್ನು ಮತ್ತು 2ನೇ ಕಂತಿನಲ್ಲಿ ರೈತರಿಗೆ ನಷ್ಟವಾಗದ ರೀತಿಯಲ್ಲಿ ಹಾಗೂ ಸರ್ಕಾರದ ಎಫ್.ಆರ್.ಪಿ ದರದಂತೆ ನೀಡಲಾಗುವುದು ಎಂದು ಲೈಲಾ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ, ಶಾಸಕ ವಿಠ್ಠಲ ಹಲಗೇಕರ ಘೋಷಿಸಿದರು.

ಸಮೀಪದ ಲೈಲಾ ಶುಗರ್ಸ್ ಆವರಣದಲ್ಲಿ 2025-26ನೇ ಆರ್ಥಿಕ ವರ್ಷದ ಕಬ್ಬು ನುರಿಸುವ ಹಂಗಾಮಿಗೆ ಬುಧವಾರ ಚಾಲನೆಯಲ್ಲಿ ಮಾತನಾಡಿದ ಅವರು, ತಾಲೂಕಿನ ರೈತಾಪಿ ವರ್ಗದ ಹಿತದೃಷ್ಟಿಯಿಂದ ತಾವು ಲೈಲಾ ಸಕ್ಕರೆ ಕಾರ್ಖಾನೆಯನ್ನು ಶ್ರೀ ಮಹಾಲಕ್ಷ್ಮೀ ಗ್ರುಪ್ ಸುಪರ್ದಿಗೆ ಲೀಸ್ ಪಡೆದ ಬಳಿಕ ಈಗಾಗಲೇ 6 ಕಬ್ಬು ನುರಿಸುವ ಹಂಗಾಮುಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ರೈತರು ತಮ್ಮ ಮೇಲೆ ವಿಶ್ವಾಸವಿಟ್ಟು ಕಾರ್ಖಾನೆಗೆ ಕಬ್ಬು ಕಳಿಸಬೇಕು. ಕಳೆದ ವರ್ಷಗಳಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲ ರೈತರಿಗೂ ಎಫ್.ಆರ್.ಪಿ ದರದಂತೆ ಸಂಪೂರ್ಣ ಬಿಲ್ ಪಾವತಿಸಲಾಗಿದೆ. ಈ ವರ್ಷವೂ ಎಫ್.ಆರ್.ಪಿ ದರದಂತೆ ಕಬ್ಬಿನ ಬಿಲ್ಲು ಪಾವತಿಸಲಾಗುತ್ತದೆ. ಕಬ್ಬು ಕಟವಿಗಾಗಿ ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಿಂದ 400ಕ್ಕೂ ಹೆಚ್ಚು ತಂಡಗಳನ್ನು ಕರೆಸಲಾಗುತ್ತದೆ. ಎಲ್ಲ ರೈತರ ಹೊಲಗಳಿಗೆ ಈ ತಂಡಗಳು ತೆರಳಿ ಕಬ್ಬು ಕಟಾವು ಮಾಡಲಿವೆ. ರೈತರು ಯಾವುದಕ್ಕೂ ಅವಸರಪಡಬಾರದು ಎಂದು ಕೋರಿದರು.ಕಾರ್ಯಕ್ರಮದದಲ್ಲಿ ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ತೋಪಿನಕಟ್ಟಿ ಗ್ರುಪ್‌ನ ಮುಖಂಡರಾದ ಚಾಂಗಪ್ಪ ನಿಲಜಕರ, ತುಕಾರಾಮ ಹುಂದ್ರೆ, ವಿಠ್ಠಲ ಕರಂಬಳಕರ, ಅರುಣ ಕಾಕತಕರ, ಯಲ್ಲಪ್ಪ ತಿರವೀರ, ಸುಬ್ಬರಾವ್ ಪಾಟೀಲ, ಪುಂಡಲೀಕ ಗುರವ, ನಾರಾಯಣ ಹಲಗೇಕರ, ರಾಜಾರಾಮ ಹಲಗೇಕರ, ಬಾಳಪ್ಪ ಪಾಟೀಲ, ಪರಶುರಾಮ ತೋರಾಳಕರ ಬಿಜೆಪಿ ಮುಖಂಡ ಮಲ್ಲಪ್ಪ ಮಾರಿಹಾಳ, ರೈತ ಮುಖಂಡ ಮಲ್ಲಪ್ಪ ಪಾಟೀಲ, ಕಾರ್ಖಾನೆಯ ಮುಖ್ಯ ಕಬ್ಬು ನಿರೀಕ್ಷಕರ ಬಾಳಾಸಾಹೇಬ ಶೇಲಾರ ಸೇರಿದಂತೆ ಕಾರ್ಖಾನೆಯ ಕಾರ್ಮಿಕರು, ರೈತರು, ತೋಪಿನಕಟ್ಟಿ ಗ್ರುಪ್‌ನ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ