ಜಯಸಿಂಹನಗರ ಸ್ಥಾಪನೆಯ 300ನೇ ವರ್ಷಾಚರಣೆ

KannadaprabhaNewsNetwork |  
Published : Jan 15, 2025, 12:46 AM IST
ಚಿತ್ರ 14ಬಿಡಿಆರ್6ಹುಮನಾಬಾದ್‌ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಣಿಕನಗರ ಪೀಠಾಧಿಪತಿ ಡಾ. ಜ್ಞಾನರಾಜ ಪ್ರಭುಗಳು ಜಯಸಿಂಹನಗರ ಸ್ಥಾಪನೆಯ 300ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹುಮವಾಬಾದ್‌ನ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಡಾ.ಜ್ಞಾನರಾಜ ಪ್ರಭುಗಳಿಂದ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ, ಹುಮನಾಬಾದ್

ಮನುಷ್ಯನ ದೇಹದ ಅತ್ಯಂತ ದೊಡ್ಡ ವಸ್ತು ಅಹಂಕಾರ. ಇದರ ಶಮನಕ್ಕೆ ನಮ್ಮ ನೆಲೆಯಲ್ಲಿ ವೀರಭದ್ರೇಶ್ವರರು ಇಲ್ಲಿ ನೆಲೆಸಿದ್ದಾರೆ ಎಂದು ಮಾಣಿಕನಗರ ಸಂಸ್ಥಾನ ಪೀಠಾಧಿಪತಿ ಡಾ. ಜ್ಞಾನರಾಜ ಪ್ರಭುಗಳು ಆಶೀರ್ವಚನದಲ್ಲಿ ತಿಳಿಸಿದರು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಣಿಕನಗರ ಪೀಠಾಧಿಪತಿಗಳಾದ ಡಾ.ಜ್ಞಾನರಾಜ ಪ್ರಭುಗಳು ಆಗಮಿಸಿ ಜಯಸಿಂಹನಗರ ಸ್ಥಾಪನೆಯ 300ನೇ ವರ್ಷಾಚರಣೆಯ ಕಾರ್ಯಕ್ರಮಕ್ಕೆ ಹಿರೇಮಠ ಸಂಸ್ಥಾನ ರೇಣುಕ ವೀರ ಗಂಗಾಧರ ಶಿವಾಚಾರ್ಯ ಅವರೊಂದಿಗೆ ಚಾಲನೆ ನೀಡುವ ಮೂಲಕ ಭಕ್ತರನ್ನು ಆಶೀ ರ್ವದಿಸಿ ಇಂದ್ರೀಯಗಳನ್ನು ಹತೋಟಿಯಲ್ಲಿಟ್ಟುಕೊಂಡಾಗ ಮಾತ್ರ ಅಹಂಕಾರದ ಹೊರೆಯ ಶಮನಕ್ಕೆ ಸಾಧ್ಯ. ಇದರಿಂದ ಏಕಾಗ್ರತೆ ಹೆಚ್ಚಿಸುತ್ತದೆ ಎಂದರು.ಈ ಮೂಲಕ ವೀರಭದ್ರೇಶ್ವರನ ಧ್ಯಾನ ಮಾಡಿದಾಗ ಮಾತ್ರ ನಮಗೆ ದೇವರ ಶಕ್ತಿಯು ಅಂತರ್ಗತವಾಗಿರುತ್ತದೆ. ನಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಈ ಹಿಂದೆ ಮಾಣಿಕಪ್ರಭುಗಳು ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದಾಗ ಅವರಿಗೆ ಸಾಕ್ಷಾತ್ಕಾರ ಆದ ಬಳಿಕ ಮಾಣಿಕ ಪ್ರಭುಗಳು ಇದೇ ನೆಲೆಯಲ್ಲಿ ನೆಲೆಸಿದ್ದಾರೆ. ಇದರಿಂದ ಅನಾಧಿಕಾಲಗಳಿಂದ ವೀರಭದ್ರೇಶ್ವರ ಹಾಗೂ ಮಾಣಿಕನಗರದ ಮಾಣಿಕಪ್ರಭುಗಳ ಅನ್ಯೋನ್ಯ ಸಂಬಂಧಗಳು ಇವೆ ಎಂದು ಮಾಹಿತಿ ನೀಡಿದರು.ಕಲ್ಲಿನ ಮೂರ್ತಿ ಎಂದು ಎಂದಿಗೂ ಭಾವಿಸಬೇಡಿ. ದೇವರು ನಮ್ಮ ನಿಮ್ಮೆಲ್ಲರ ಭಾವನೆಯಲ್ಲಿ ಇರುತ್ತಾನೆ. ನಮ್ಮ ಪ್ರಾರ್ಥನೆ ನೈವೇದ್ಯ ಸ್ವೀಕರಿಸುತ್ತಾನೆ ಎಂದ ಅವರು, ಮುಂಬರುವ ದಿನಗಳಲ್ಲಿ 300ನೇ ವರ್ಷಾಚರಣೆಯ ಕುರಿತು ಭವ್ಯ ಕಾರ್ಯಕ್ರಮ ಆಯೋಜಿಸುವಂತೆ ಶಾಸಕ, ವಿಧಾನ ಪರಿಷತ್‌ ಸದಸ್ಯರು, ಮಾಜಿ ಸಚಿವರು, ದೇವಸ್ಥಾನ ಆಡಳಿತ ಮಂಡಳಿಯವರಿಗೆ ಕಿವಿಮಾತು ಹೇಳಿದರು.ಹಿರೇಮಠ ಸಂಸ್ಥಾನ ರೇಣುಕ ವೀರ ಗಂಗಾಧರ ಶಿವಾಚಾರ್ಯರು ಭಕ್ತರನ್ನು ಆಶೀರ್ವದಿಸಿ, ಇಂದಿನ ಕಾರ್ಯಕ್ರಮ ಐತಿಹಾಸಿಕ ಹಾಗೂ ಅಜರಾಮರವಾಗಿದೆ. ಇದೇ ರೀತಿ ಪ್ರತಿ ವರ್ಷ ಸಂಕ್ರಮಣ ದಿನದಂದು ವೀರಭದ್ರೇಶ್ವರ ದೇವರಿಗೆ ನಿಮ್ಮ ಸೇವೆ ಸಲ್ಲಿಸುವಂತೆ ಕರೆ ನೀಡಿದ ಅವರು ಹೋಳಿ ಹುಣ್ಣಿಮೆಯಂದು ರಂಗಿನಾಟ ಆಡಲು ಜನಪ್ರತಿನಿಧಿ ಸೇರಿದಂತೆ ಸದ್ಭಕ್ತರೊಂದಿಗೆ ಮಾಣಿಕಪ್ರಭು ಸಂಸ್ಥಾನಕ್ಕೆ ಆಗಮಿಸುವದಾಗಿ ತಿಳಿಸಿದರು.ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ಮಾತನಾಡಿ. ನಿತ್ಯ ಮಾಣಿಕಪ್ರಭುಗಳ ಸನ್ನಿಧಿಯಲ್ಲಿ ವೀರಭದ್ರೇಶ್ವರ ಸ್ವಾಮಿಯ ಅಷ್ಟಕ ಹೇಳುವವರೆಗೂ ಪೂಜೆ ಅಪೂರ್ಣ ಎಂದು ಮಾಹಿತಿ ನೀಡಿದರು, ಮಾಣಿಕಪ್ರಭು ಸಂಸ್ಥಾನ ಸಹ ಕಾರ್ಯದರ್ಶಿ ಚೈತನ್ಯಪ್ರಭು ಆರತಿ ನಡೆಸಿಕೊಟ್ಟರು. ಸಭೆ ಗೂ ಮುಂಚೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಡಾ. ಜ್ಞಾನರಾಜ ಪ್ರಭುಗಳ ಭವ್ಯ ಮೆರವಣಿಗೆಗೆ ಪಟ್ಟಣದ ಉದ್ಯಮಿಗಳು ವಿವಿಧ ಸಂಘ ಸಂಸ್ಥೆಯವರು ಹೂವು, ಹಣ್ಣು ಸಮರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್‌, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌, ಭೀಮರಾವ್‌ ಪಾಟೀಲ್‌, ಮಾಜಿ ಸಚಿವ ರಾಜಶೇಖರ ಪಾಟೀಲ್‌, ಮಲ್ಲಿಕಾರ್ಜುನ ಮಾಳಶಟ್ಟಿ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ್‌, ಉದ್ಯಮಿ ವೆಂಕಟೇಶ ಕುಲಕರ್ಣಿ, ಸಂತೋಷ ಪಾಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಬಸವರಾಜ ಆರ್ಯ ಹಾಗೂ ಮಹೇಶ ಅಗಡಿ, ಸೋಮಶೇಖರ ಬುಳ್ಳಾ ಸೇರಿದಂತೆ ಅನೇಕರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ