- ಸುಗಮ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲೂ ಸಜ್ಜು: ಬಿಇಒ ಕೆ.ಟಿ.ನಿಂಗಪ್ಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
2024-25ನೇ ಸಾಲಿಗೆ ನವೀನ ವಿದ್ಯಾರ್ಥಿಗಳಲ್ಲಿ ಬಾಲಕರು 1341, ಬಾಲಕಿಯರು 1619 ಸೇರಿ ಒಟ್ಟು 2960 ಮಂದಿ ಇದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 43 ಬಾಲಕರು, 29 ಬಾಲಕಿಯರು ಸೇರಿ ಒಟ್ಟು 72 ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳಲ್ಲಿ ಬಾಲಕರು 11 ಮತ್ತು ಬಾಲಕಿಯರು 6 ಸೇರಿ ಒಟ್ಟು 17, ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳಲ್ಲಿ ಬಾಲಕ 1, ಬಾಲಕಿ 1 ಸೇರಿ ಒಟ್ಟು 2 ಮಂದಿ ಇದ್ದಾರೆ. ಒಟ್ಟು ನೋಂದಣಿ ಆಗಿರುವ ವಿದ್ಯಾರ್ಥಿಗಳ ಸಂಖ್ಯೆ ಬಾಲಕರು 1396, ಬಾಲಕಿಯರು 1655 ಎಲ್ಲ ಸೇರಿ ಒಟ್ಟು 3051 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ ಎಂದಿದ್ದಾರೆ.
11 ಪರೀಕ್ಷಾ ಕೇಂದ್ರಗಳು:ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕು ವತಿಯಿಂದ 11 ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 3 ಮತ್ತು ಗ್ರಾಮೀಣ ಕೇಂದ್ರದಲ್ಲಿ 8 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಒಟ್ಟಾರೆಯಾಗಿ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3051 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು 128 ಸುವ್ಯವಸ್ಥಿತ ಕೊಠಡಿಗಳು, ಪೀಠೋಪಕರಣಗಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
128 ಶಿಕ್ಷಕರನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಲಾಗಿದೆ. 11 ಜನ ಸ್ಥಾನಿಕ ಜಾಗೃತ ದಳದವರನ್ನು, 6 ಜನ ಮಾರ್ಗಾಧಿಕಾರಿಗಳನ್ನು, ತಾಲೂಕುಮಟ್ಟದ ಅಧಿಕಾರಿಗಳನ್ನು, ಸಂಚಾರಿ ಜಾಗೃತ ದಳದ ತಂಡವನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕ್ಷೇತ್ರ ಸಂಯೋಜನಾಧಿಕಾರಿ ತಿಪ್ಪೇಶಪ್ಪ ಮುಂತಾದವರು ಇದ್ದರು.
- - - -18ಎಚ್.ಎಲ್.ಐ1: ಕೆ.ಟಿ. ನಿಂಗಪ್ಪ