ಬೆಂಗಳೂರು : ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರದಾನ ಮಾಡಲಾಗುವ 2025-26ನೇ ಸಾಲಿನ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದ 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರು ಸೇರಿ 31 ಶಿಕ್ಷಕರು ಆಯ್ಕೆಯಾಗಿದ್ದಾರೆ. ಪಿಯು ವಿಭಾಗದಲ್ಲಿ 10 ಉಪನ್ಯಾಸಕರು, ಪ್ರಾಂಶುಪಾಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉತ್ತಮ ಶಿಕ್ಷಕರು ಪಟ್ಟಿಯಲ್ಲಿನ ಇಬ್ಬರು ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಪುಲೆ’ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 25,000 ರು. ನಗದು ಮತ್ತು ಫಲಕ ಒಳಗೊಂಡಿದೆ. ಸೆ.5ರಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ವಿಜೇತರು:
ಪ್ರಾಥಮಿಕ ಶಾಲೆ ವಿಭಾಗ: ಚಂದ್ರನಾರಾಯಣ ಬಿಲ್ಲವ(ಶಿರೂರು), ಎಸ್.ಬಿ.ಶಿವಣ್ಣ(ತುರುವೇಕೆರೆ), ಎಂ.ಹರೀಶ್ ಕುಮಾರ್(ಮಧುಗಿರಿ), ಎಚ್.ಆರ್.ಗೋವಿಂದರಾಜು( ಬೆಂ.ಉತ್ತರ), ಎ.ಜಗದೀಶ ಶೆಟ್ಟಿ(ಮಂಗಳೂರು ದಕ್ಷಿಣ), ಟಿ.ರಾಮಚಂದ್ರಪ್ಪ(ಚನ್ನಪಟ್ಟಣ), ಮಹಾಂತೇಶ ಮೇಟಿ(ಬಳ್ಳಾರಿ), ಎಸ್.ಜಿ. ಮಡಿವಾಳಮ್ಮ(ಮುದ್ದೇಬಿಹಾಳ), ವೈ.ಇ.ಲೋಹಿತೇಶ(ಮೈಸೂರು), ಜಿ.ಮಂಜುನಾಥ(ಶ್ರೀನಿವಾಸಪುರ), ಎಚ್.ಕೆ. ಕುಮಾರ(ಗೋಣಿಕೊಪ್ಪಲು), ಬಸವರಾಜ ಗಿರೆಪ್ಪ(ಚಿಕ್ಕೋಡಿ), ಹುಚ್ಚಪ್ಪ ಬಿ.ಕೊರವರ(ಹುಬ್ಬಳ್ಳಿ), ಎಚ್.ಮಂಜುನಾಥ(ಆನೇಕಲ್), ಕೆ.ಎಲ್.ಪುರುಷೋತ್ತಮ(ಆಲೂರು), ಎಸ್.ಎನ್.ಸಂತಾನ ರಾಮನ್(ಪಾಂಡವಪುರ), ಪರಮೇಶ್ವರ ರಾಮ ನಾಯ್ಕ(ಹೊನ್ನಾವರ), ಎನ್.ಪ್ರೇಮಾವತಿ(ಚಿಕ್ಕಬಳ್ಳಾಪುರ), ಲಂಬಾಣಿ ರೆಡ್ಡಿ ನಾಯ್ಕ(ಹಗರಿಬೊಮ್ಮನಹಳ್ಳಿ), ಹೊನ್ನ ಹನುಮಯ್ಯ(ನೆಲಮಂಗಲ).
ಪ್ರೌಢ ಶಾಲೆ ವಿಭಾಗ:
ಹಣುಮಂತರಾಯ ಸೋಮಾಪುರ(ಶಹಪೂರ), ಗೋಪಾಲ.ಕೆ.ನಾಯ್ಕ(ಶಿರಸಿ), ಸತೀಶ್ ಭಟ್(ಪುತ್ತೂರು), ಸಿ.ಜಿ.ಯಶವಂತ ಕುಮಾರ(ಕಡೂರು), ರಾಜಶೇಖರ ಕಲ್ಯಾಣಪ್ಪ(ಬೆಳಗಾವಿ), ಶ್ರೀಧರ ಶೇಟ್(ಉತ್ತರ ಕನ್ನಡ), ರವೀಂದ್ರ ಶಿಂದೆ(ಬೆಳಗಾವಿ), ನೀಲಕಂಠ ಗೋವಿಂದರಡ್ಡಿ(ಧಾರವಾಡ), ಆರ್. ಶಿವಶಂಕರ್(ಹೊಸದುರ್ಗ), ವಿ.ಡಿ. ಶಿವಣ್ಣ(ಮಧುಗರಿ), ಶಿವನ ನಾಯಕ(ಕೂಡ್ಲಿಗಿ).ಪಿಯು ವಿಭಾಗದ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಉತ್ತಮ ಪ್ರಾಂಶುಪಾಲರು: ಆನಂದ ಶಿವಪ್ಪಾ(ಚಿಕ್ಕೋಡಿ), ಹಾಗೂ ಎಚ್.ಕೆ. ಕೃಷ್ಣಯ್ಯ(ಮೈಸೂರು).
ಉತ್ತಮ ಉಪನ್ಯಾಸಕರು: ಆರ್.ದೇವರಾಜು(ಬೆಂಗಳೂರು), ಡಾ.ಜಿ. ಸಫ್ರರಾಜ(ಸಾಗರ), ಡಾ.ಕೆ. ಲಿಂಗಾನಂದ ಗವಿಮಠ್(ಜಮಖಂಡಿ), ಸಿ.ಎಂ.ಜ್ಯೋತಿ(ಬೆಳಗಾವಿ), ಬಸವರಾಜ ಎಸ್.ಜಲವಾಡಿ(ಬಸವನಬಾಗೇವಾಡಿ), ಡಾ.ಕೆ.ಲೋಕೇಶ್(ತಿಪಟೂರು), ವಿಜಯಲಕ್ಷ್ಮೀ ಪೆಟ್ಲೂರು(ಬಾಗಲಕೋಟೆ), ಸಿ.ವಿ. ವೆಂಕಟಾಚಲ(ಶಿರಾ)ಎಚ್.ಜಿ.ಗೋವಿಂದೇಗೌಡ ಪ್ರಶಸ್ತಿ:ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವೀರರಾಘವನಪಾಳ್ಯದ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚಿತ್ರದುರ್ಗ ಹೊಸದುರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಾಜಿ ಶಿಕ್ಷಣ ಸಚಿವ ದಿವಂಗತ ಎಚ್.ಜಿ. ಗೋವಿಂದೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿ ಶಾಲೆಗೆ 25 ಸಾವಿರ ರು. ನಗದು ಬಹುಮಾನ ನೀಡಲಾಗುತ್ತದೆ.