ರೋಣ: ದ್ವಿಚಕ್ರವಾಹನ ಕಳ್ಳತನ ಪ್ರಕರಣದ ಬೆನ್ನು ಹತ್ತಿದ ರೋಣದ ಪೊಲೀಸರು ಅಂತರ ಜಿಲ್ಲಾ ಕಳ್ಳನ ಬಂಧಿಸಿ, 32 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಗುಜಮಾಗಡಿ ಗ್ರಾಮದ ನಿವಾಸಿ ಈಶ್ವರಪ್ಪ ತಳವಗೇರಿ (47) ಎಂಬ ಆರೋಪಿತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಸುಮಾರು ಎಳೆಂಟು ವರ್ಷಗಳಿಂದ ಬೈಕ್ ಕಳ್ಳತನ ಪ್ರಕರಣದಲ್ಲಿ ಈ ಆರೋಪಿ ಭಾಗಿಯಾಗಿದ್ದು ಬೆಳಕಿಗೆ ಬಂತು. ಗದಗ ಜಿಲ್ಲೆಯಲ್ಲಿ 5 ಬೈಕ್, ಕೊಪ್ಪಳ ಜಿಲ್ಲೆಯಲ್ಲಿ 20 ಬೈಕ್, ಬಾಗಲಕೋಟೆ ಜಿಲ್ಲೆಯಲ್ಲಿ 6 ಬೈಕ್, ಬೆಳಗಾವಿ ಜಿಲ್ಲೆಯಲ್ಲಿ 1 ಬೈಕ್ ಸೇರಿದಂತೆ ಒಟ್ಟು 32 ಬೈಕ್ ಗಳನ್ನು ಕಳ್ಳತನ ಮಾಡಿದ್ದು ತಿಳಿದು ಬಂದಿದೆ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ರೋಣ ಠಾಣೆ ಪಿ.ಎಸ್.ಐ. ಪ್ರಕಾಶ ಬಣಕಾರ, ವಿ.ಎಸ್. ಚವಡಿ, ಸಿಬ್ಬಂದಿಗಳಾದ ಎಮ್.ಬಿ. ವಡ್ಡಟ್ಟಿ, ಕುಮಾರ ತಿಗರಿ, ಮಂಜುನಾಥ ಬಂಡಿವಡ್ಡರ, ಶಿವಕುಮಾರ ಹುಬ್ಬಳ್ಳಿ ಒಳಗೊಂಡ ಪೊಲೀಸರ ತಂಡವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.ರೋಣ ಸಿಪಿಐ ಎಸ್.ಎಸ್. ಬೀಳಗಿ ಸೇರಿದಂತೆ ರೋಣ ಪೊಲೀಸರ ಈ ಸಾಧನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸುದ್ದಿಗೋಷ್ಠಿ ನಡೆಸಿ ಪ್ರಶಂಸೆ ಮಾಡಿದರು.