ಕನ್ನಡಪ್ರಭ ವಾರ್ತೆ ಮೈಸೂರು
ಪ್ರಶಿಕ್ಷಣಾರ್ಥಿಗಳು ಸಮಾಜ ಸೇವೆ ಕ್ಲಬ್ ವತಿಯಿಂದ ನಡೆದ ಈ ಶ್ರಮದಾನಕ್ಕ ಹಸಿರು ಬಾವುಟ ಬೀಸುವ ಮೂಲಕ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಪೊಲೀಸ್ ಎಂಬುದು ಶಿಸ್ತಿನ ಇಲಾಖೆಯಾಗಿದ್ದು, ಕಾನೂನು ಸುವ್ಯವಸ್ಥೆ ಜಾರಿ ಮಾಡುವ ಜವಾಬ್ದಾರಿ ಹೊಂದಿದ್ದು, ಇಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಿ ಶ್ರಮದಾನದ ಸ್ವಯಂಸೇವೆಯ ಮೂಲಕ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸೋಣ ಎಂದರು.ಕಾರ್ಯಕ್ರಮ ರೂವಾರಿಯಾಗಿದ್ದ ಕೆಪಿಎ ನಿರ್ದೇಶಕ ಎಸ್.ಎಲ್. ಚೆನ್ನಬಸವಣ್ಣ ಮಾತನಾಡಿ, ಪೊಲೀಸರಾದ ನಾವು ನಮ್ಮ ಕರ್ತವ್ಯದೊಂದಿಗೆ ಸಾಮಾಜಿಕ ಕಳಕಳಿ ಹೊಂದಿರಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಕಟಿಬದ್ಧರಾಗಿ ನಿಲ್ಲಬೇಕು, ಬದ್ಧತೆ ಹೊಂದಬೇಕು. ಉತ್ತಮ ಸಮಾಜ ನಿರ್ಮಾಣದಿಂದ ಎಲ್ಲ ಆಯಾಮಗಳಲ್ಲೂ ಮಾದರಿಯಾಗಿ ನಿಲ್ಲಬೇಕು ಎಂದರು.
ಕೆಪಿಎ ಸಾಮಾಜಿಕ ಸೇವಾ ಕ್ಲಬ್ ನ ಸಂಯೋಜಕ ಸಹಾಯಕ ನಿರ್ದೇಶಕ ಎಸ್.ಎನ್. ಸಂದೇಶಕುಮಾರ್ ಮಾತನಾಡಿ, ಮೈಗ್ರೋ ಪ್ಲಾಸ್ಟಿಕ್ ಹಾಗೂ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್ ಪರಿಸರ ಹಾಗೂ ಮನುಕುಲಕ್ಕೆ ಆಗುತ್ತಿರುವ ಹಾನಿಯು ಅಪಾಯಕಾರಿ ಸನ್ನಿವೇಶದ ಬಗ್ಗೆ ತಿಳಿಸಿದರು.ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸುವ ಅಗತ್ಯದ ಬಗ್ಗೆ ತಿಳಿಸಿದರು. ಶ್ರಮದಾನ ಸ್ವಯಂಸೇವೆ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ರೇಣುಕಾರಾಧ್ಯ, ಸುದರ್ಶನ್, ವೆಂಕಟೇಶ್, ಇತರೆ ಅಧಿಕಾರಿಗಳು ಹಾಗೂ ಬೋಧಕರಾದ ಚಂದ್ರಶೇಖರ್, ಕ್ರಾಂತಿರಾಜ್ ಒಡೆಯರ್, ವೈದ್ಯರಾದ ಕರುಣಾಕರ್ ಇದ್ದರು.
ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಇದ್ದರು. ಪ್ರಶಿಕ್ಷಣಾರ್ಥಿಗಳು ಕುಕ್ಕರಹಳ್ಳಿ ಯಲ್ಲಿ ಸಂಗ್ರಹಿಸಿದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆ ಮಾಡಿದ್ದರು. ಶ್ರಮದಾನ ಸ್ವಯಂಸೇವೆ ಕಾರ್ಯಕ್ರಮದಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಯ ಎ.ಪಿ. ನಾಗೇಶ್, ರಮೇಶ್. ಅವಿನಾಶ್, ಸಚಿನ್, ಇತರೆ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಭಾಗವಹಿಸಿದ್ದರು.