ಕುಮಟಾ: ಜಿಲ್ಲೆಗೆ ೩೨೯ ಬಿಎಸ್ಎನ್ಎಲ್ ಟವರ್ ಮಂಜೂರು ಮಾಡಿಸಿದ್ದೇನೆ. ಈಗಾಗಲೇ ಕಾರ್ಯಚರಿಸುತ್ತಿರುವ ಬಿಎಸ್ಎನ್ಎಲ್ ಟವರ್‌ಗಳಲ್ಲಿ ವಿದ್ಯುತ್ ವ್ಯತ್ಯಯವಾದಾಗ ತೊಂದರೆ ಆಗದಂತೆ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಬಿಎಸ್ಎನ್ಎಲ್ ಅಧಿಕಾರಿಗಳಾದ ಜಿ.ಎಂ. ಸಂತೋಷ್ ಚೌಹಾಣ, ಜೆಟಿಒ ಸಂದೀಪ್, ವಿ.ಎಚ್. ನಾಯಕ ಬೆಣ್ಣೆ, ರಾಮನಾಥ ಶಾನಭಾಗ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಸ್ಥಳೀಯರು ಇದ್ದರು.10ರಿಂದ ಅಯ್ಯಪ್ಪ ಸ್ವಾಮಿ ಜಾತ್ರಾ ಉತ್ಸವ
ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಏಳನೇ ವರ್ಷದ ಜಾತ್ರೋತ್ಸವ ಜ. ೧೦ರಿಂದ ೧೫ರ ವರೆಗೆ ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಕೆ. ಶ್ರೀಧರ ವೈದ್ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಜ. ೧೦ರಂದು ಅಯ್ಯಪ್ಪ ಸ್ವಾಮಿಯ ಉತ್ಸವ ಪ್ರಾರಂಭಗೊಳ್ಳಲಿದೆ. ಧ್ವಜಾರೋಹಣ, ದುರ್ಗಾಹವನ, ರಾತ್ರಿ ಪಡಿಪೂಜೆ, ೧೧ರಂದು ದೇವಸ್ಥಾನದ ತಂತ್ರಿಯವರಾದ ಬ್ರಹ್ಮಶ್ರೀ ತರಣನಲ್ಲೂರು ಪದ್ಮನಾಬನ್ ಉಣ್ಣಿ ನಂಬೂದರಿ ಇವರಿಂದ ವಿಶೇಷ ಪೂಜೆ, ಸಾರ್ವತ್ರಿಕ ಗಣಹೋಮ, ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ನಡೆಯಲಿದೆ.ಜ. ೧೨ರಂದು ರುದ್ರಹವನ, ಆಶ್ಲೇಷಬಲಿ, ೧೩ರಂದು ನರಸಿಂಹ ಹವನ, ೧೪ರಂದು ಅಷ್ಟಾಭಿಷೇಕ, ವಿಶೇಷ ಪೂಜೆ, ಸಂಜೆ ೫ರಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿಯ ಅಂಬಾರಿ ಉತ್ಸವ ನಡೆಯಲಿದೆ. ಸೊರಬ ತಾಲೂಕಿನ ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಆಶೀರ್ವಚನ ಹಾಗೂ ಅಂಬಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ೧೫ರಂದು ಓಕಳಿ ನಡೆಯಲಿದೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ಜಾತ್ರೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆ, ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ, ಭಜನೆ, ರಸಮಂಜರಿ, ಯಕ್ಷಗಾನ ಹಾಗೂ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಿಂದ ಹಾಗೂ ಕಲಾಸಂಘಗಳಿಂದ ಆಯೋಜಿಸಲಾಗಿದೆ. ವಿವಿಧ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.ಆಡಳಿತ ಸಮಿತಿಯ ಸುದರ್ಶನ ಪಿಳ್ಳೆ, ಶ್ರೀನಿವಾಸ ಪ್ರಭು, ಸದಾನಂದ ಕಾಮತ್, ರಾಘವೇಂದ್ರ ನಾಯ್ಕ, ಎ.ಜಿ. ನಾಯ್ಕ, ಶ್ರೀಪಾದ ಹೆಗಡೆ ಹಾಗೂ ದೇವಸ್ಥಾನ ಸಮಿತಿಯ ಹಾಗೂ ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳಿದ್ದರು.