ಕನ್ನಡಪ್ರಭ ವಾರ್ತೆ ಮೂಡುಬಿದಿರೆ ತೆಲಂಗಾಣದ ಹನುಮಕೊಂಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅ.೧೫ರಿಂದ ೧೭ರ ವರೆಗೆ ನಡೆದ ೩೪ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಮೂಡುಬಿದಿರೆ ಒಟ್ಟು ೩ ಚಿನ್ನ, ೩ ಬೆಳ್ಳಿ ಹಾಗೂ ೩ ಕಂಚಿನ ಪದಕಗಳನ್ನು ಪಡೆದು ಒಟ್ಟು ೯ ಪದಕಗಳನ್ನು ತನ್ನದಾಗಿಸಿಕೊಂಡಿದೆ. ೧೬ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರೀತುಶ್ರೀ ೩೦೦ ಮೀ. ತೃತೀಯ ಸ್ಥಾನ ಹಾಗೂ ಮಿಡ್ಲೆರಿಲೇ ಪ್ರಥಮ ಸ್ಥಾನ, ಗೋಪಿಕಾ ಮಿಡ್ಲೆರಿಲೇ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ೧೮ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ರಾಮು ೮೦೦ ಮೀ. ದ್ವಿತೀಯ ಸ್ಥಾನ, ಯಶವಂತ್ ೮೦೦ ಮೀ. ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ೧೮ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಗೀತಾ ಚೌಕಾಶಿ ೪೦೦ ಮೀ. ಪ್ರಥಮ ಸ್ಥಾನ, ಅಂಬಿಕಾ ಕೋಲಿ ೫ ಕಿ.ಮೀ. ನಡಿಗೆ ದ್ವಿತೀಯ ಸ್ಥಾನ, ಐಶ್ವರ್ಯ ಮಾರುತಿ ಚಕ್ರ ಎಸೆತ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ೨೦ ವರ್ಷ ವಯೋಮಿತಿಯಲ್ಲಿ ಬಾಲಕರ ವಿಭಾಗದಲ್ಲಿ ಪರಶುರಾಮ, ಹ್ಯಾಮರ್ ತ್ರೋ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ೨೦ ವರ್ಷ ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ರೇಖಾ ಬಸಪ್ಪ ೮೦೦ ಮೀ.ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.