ಶ್ರೀಹರಿವಾಯು ಭಜನಾ ಮಂಡಳಿಯಿಂದ ದಾಸವಾಣಿಕನ್ನಡಪ್ರಭ ವಾರ್ತೆ ಸಂಡೂರು
ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಕಾರ್ಯಕ್ರಮವು ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.ಕಾರ್ಯಕ್ರಮದ ಅಂಗವಾಗಿ ಶ್ರೀರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಸಂಜೆ ಬೆಂಗಳೂರಿನ ಜೆಪಿ ನಗರದ ಶ್ರೀಹರಿವಾಯು ಭಜನಾ ಮಂಡಳಿಯಿಂದ ನಡೆದ ದಾಸವಾಣಿ ಕಾರ್ಯಕ್ರಮದಲ್ಲಿ ಟಿ. ಪಾರ್ಥಸಾರಥಿ ಮುಂತಾದ ಭಜನಾ ಮಂಡಳಿಯ ಸದಸ್ಯರು ಪ್ರಸ್ತುತ ಪಡಿಸಿದ ಹಲವು ದಾಸರ ಹಾಡುಗಳು ಶ್ರೋತೃಗಳನ್ನು ತಲೆದೂಗುವಂತೆ ಮಾಡಿದವು. ಭಜನಾ ತಂಡದ ಕೆಲ ಸದಸ್ಯರು ದಾಸರ ಹಾಡುಗಳಿಗೆ ಹೆಜ್ಜೆ ಹಾಕಿದರು. ಕುಮಾರಸ್ವಾಮಿಯವರು ತಬಲಾ ಸಾಥ್ ನೀಡಿದರು.ಕಾರ್ಯಕ್ರಮದಲ್ಲಿ ಷರಾಫ್ ಸುಬ್ಬರಾವ್, ನಾರಾಯಣಾಚಾರ್, ಬದರಿ ನಾರಾಯಣಾಚಾರ್, ಗುರುನಾಗರಾಜ, ಗುರುರಾಜ ಷರಾಫ್, ವಿಜಯೇಂದ್ರ, ಪಾಂಡುರಂಗಭಟ್ಟರು, ಗಿರಿಧರ್, ಸಿ.ಆರ್. ಗೋಪಾಲ್, ರೋಹಿಡಿಕರ್, ಪಾಂಡುರಂಗ, ವಾದಿರಾಜ ಆಚಾರ್, ಬಾಲಚಂದ್ರ ಘೋಷಿ, ಎಸ್. ಪಾಂಡುರಂಗ, ಕೃಷ್ಣ, ಫಣಿರಾಜ, ವಿನಯ, ಕಿರಣ, ಟಿ. ಸತೀಶ್, ಸುರೇಶ್ ಆಚಾರ್, ಪ್ರಕಾಶ ನಾಯಕ, ಟಿ. ವೆಂಕಟೇಶ್, ಅರಳಿ ಕುಮಾರಸ್ವಾಮಿ, ರುಕುಮಾ ಪಾಂಡುರಂಗ, ಭಾಗ್ಯ, ಷರಾಫ್ ಪದ್ಮಾವತಿ, ಸಂಧ್ಯಾ, ಅರುಣಾ ಮುಂತಾದವರಿದ್ದರು.ರಾಯರ ಮಧ್ಯಾರಾಧನೆ:
ಕಂಪ್ಲಿ ಪಟ್ಟಣದ ಎಸ್ ಎನ್ ಪೇಟೆಯ ಶ್ರೀಮನ್ ಮದ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಶಾಖಾಮಠದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಮಧ್ಯಾರಾಧನೆ ಕಾರ್ಯಕ್ರಮಗಳು ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.ರಾಯರ ಮಧ್ಯಾರಾಧನೆಯ ನಿಮಿತ್ತ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರಸಹಿತ ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ, ಅಲಂಕಾರ, ಬ್ರಾಹ್ಮಣ ಅನ್ನಸಂತರ್ಪಣೆ, ಸಂಜೆ ರಥೋತ್ಸವ, ತೊಟ್ಟಿಲು ಸೇವಾ, ಸೇರಿ ನಾನಾ ರೀತಿಯ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಗಳು ಜರುಗಿದವು. ಮಠದ ವಿಚಾರಣಾಕರ್ತ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮಾಚಾರ್, ಅರ್ಚಕ ಕಿಶೋರಾಚಾರ್ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ನಡೆದವು. ರಾಯರ ಬೃಂದಾವನವನ್ನು ವಿವಿಧ ಆಕರ್ಷಕ ಫಲ ಪುಷ್ಪಾದಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆಗಳಿಂದ ಅನೇಕ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿದ್ದರು.