ಮಲೆನಾಡು ಮೂಲದ ಗಿಡ್ಡ ತಳಿಯ ದನ ದೀರ್ಘಾಯುಷಿ । 15 ಕರುಗಳ ಜನ್ಮದಾತೆ
ಅಮ್ಮಿಯ ಕುಟುಂಬವೂ ಅಚ್ಚರಿಯದ್ದೇ. ಶಮ್ಮಿ ಗೊಡ್ಡು, ಪಮ್ಮಿ, ಗುಡ್ಡಿ, ಶುಭ, ಶಾಲಿನಿ, ಮಾಲಿನಿ ಸೇರಿದಂತೆ ಮರಿ-ಮೊಮ್ಮಕ್ಕಳು ಮನೆಯಲ್ಲೇ ಇದ್ದಾರೆ. ಮಲೆನಾಡು ಗಿಡ್ಡ ಜಾತಿಯ ದನ ಮೊದಲಿನಿಂದಲೂ ಉತ್ತಮ ಹಾಲು ನೀಡುವ ಗುಣ ಹೊಂದಿತ್ತು.
ಸ್ಥಳೀಯರು ಮಾತ್ರವಲ್ಲ, ಪಕ್ಕದ ಊರುಗಳ ಜನರೂ ಅಮ್ಮಿಯನ್ನು ನೋಡಲು ಬರುತ್ತಾರೆ. ಕೆಲವರು ‘ಅಮ್ಮಿಯ ಆಶೀರ್ವಾದ’ ಪಡೆಯಲು ಸಹ ಭೇಟಿ ನೀಡುತ್ತಾರೆ ಎಂದು ಸುನಂದ ನಾಯಕ್ ಹೇಳುತ್ತಾರೆ.‘ಈ ಅಮ್ಮಿ ದನವನ್ನು ಮನೆಗೆ ತಂದ ಬಳಿಕ ನಮ್ಮ ಮನೆಯಲ್ಲಿ ಅಭಿವೃದ್ದಿ ಕಾಣಿಸಿಕೊಂಡಿದೆ. ನಮ್ಮ ಮನೆಗೆ ಅದೃಷ್ಟ ಲಕ್ಷ್ಮಿ ಇದೇ’ ಎಂದು 70 ವರ್ಷದ ಸುನಂದ ನಾಯಕ್ ಅವರು ಸಂತೋಷದಿಂದ ಹೇಳುತ್ತಾರೆ.ಸುನಂದ ಹಾಗೂ ಅವರ ಸಹೋದರಿ ಸುಶೀಲ ಇಬ್ಬರೂ ಈ ಅಮ್ಮಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇಂದಿಗೂ ಅವರ ಮನೆಯಲ್ಲಿ 10ಕ್ಕೂ ಹೆಚ್ಚು ದನಗಳಿವೆ.ಮಲೆನಾಡಿನ ಈ ಅದೃಷ್ಟದ ಲಕ್ಷ್ಮಿ ‘ಅಮ್ಮಿ’ ದನ, ಮನುಷ್ಯರಿಗೂ ಪ್ರೀತಿ, ಕಾಳಜಿ ಹಾಗೂ ಭಕ್ತಿ ಇದ್ದರೆ ಪ್ರಾಣಿಗಳೂ ಆಶೀರ್ವಾದವಾಗಬಹುದು ಎಂಬುದಕ್ಕೆ ಜೀವಂತ ಉದಾಹರಣೆ.